ಬಿಗ್‌ಬಾಸ್ ಶುರುವಾದ ಮೊದಲ ದಿನವೇ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮುಂಬೈ ಮೂಲದ ತುಳುನಾಡ ಚೆಲುವೆ ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಮೊದಲ ದಿನವೇ ದೊಡ್ಡ ಟ್ವಿಸ್ಟ್ ಕೊಟ್ಟಿರುವ ಬಿಗ್‌ಬಾಸ್ ರಕ್ಷಿತಾಗೆ ಗೇಟ್‌ಪಾಸ್ ನೀಡಿದ್ದು, ಸದ್ಯ ದೊಡ್ಮನೆ ಅಭಿಮಾನಿಗಳು ಬಿಗ್‌ಬಾಸ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಬಿಗ್‌ಬಾಸ್ ಶೋ ಅದ್ಧೂರಿಯಾಗಿ ಟೇಕಾಫ್ ಆಗಿದೆ. ಆದರೆ ಆರಂಭದಲ್ಲೇ ಬಿಗ್ ಎಲಿಮಿನೇಷನ್ ಮೂಲಕ ಶಾಕ್ ನೀಡಿದ್ದಾರೆ. ಮೊದಲ ದಿನ ಒಟ್ಟು 19 ಜನರು ಬಿಗ್‌ಬಾಸ್ ಮನೆ ಒಳಗೆ ಕಾಲಿಟ್ಟಿದ್ದರು. ಆದರೆ ಆ ದಿನವೇ ಒಬ್ಬರನ್ನು ಎಲಿಮಿನೇಟ್ ಮಾಡಲಾಗಿದೆ. ತುಳುನಾಡಿನಿಂದ ಬಂದ ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಅವರಿಗೆ ಗೇಟ್ ಪಾಸ್ ನೀಡಲಾಗಿದೆ. ಇದರಿಂದ ಎಲ್ಲರಿಗೂ ಶಾಕ್ ಆಗಿದೆ. ಈ ಬಗ್ಗೆ ಕರಾವಳಿ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಬಿಗ್‌ಬಾಸ್ ಸ್ಪರ್ಧಿಗಳ ಕುತಂತ್ರಕ್ಕೆ ರಕ್ಷಿತಾ ಶೆಟ್ಟಿಗೆ ಅನ್ಯಾಯ ಜೊತೆಗೆ ಅವಮಾನ ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ.

ಬಿಗ್‌ಬಾಸ್ ಮನೆಯಿಂದ ಯಾರು ಹೊರಗೆ ಹೋಗಬೇಕು ಅಂತ ಬಿಸಿ ಬಿಸಿ ಚರ್ಚೆ ಶುರುಮಾಡಿದ ಒಂಟಿ ಟೀಮ್, ಮಾಳು ಮತ್ತು ಸ್ಪಂದನಾ ಇರಬೇಕು ಎಂದು ಹೇಳಿದ್ರು. 6 ಒಂಟಿಗಳ ಎದುರು ನಿಂತು ರಕ್ಷಿತಾ ಶೆಟ್ಟಿ ತಮ್ಮ ಸಾಮರ್ಥ್ಯದ ಬಗ್ಗೆ ಮನವೊಲಿಸಲು ಪ್ರಯತ್ನಿಸಿದರು. ಆದ್ರೂ ಅದು ಫಲ ನೀಡಲಿಲ್ಲ. ರಕ್ಷಿತಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ತಪ್ಪು ತಪ್ಪು ಕನ್ನಡ ಮಾತನಾಡಿ ಫೇಮಸ್ ಆಗಿದ್ದಾಳೆ. ಅವಳಿಗೆ ಬೇರೆ ಕೆಲಸ ಇದೆ ಎಂದು ಅಶ್ವಿನಿಗೌಡ ಹಾಗೂ ಜಾನ್ವಿ, ಕಾರ್ತಿಕ್ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ರು. ಅಂತಿಮವಾಗಿ ಅಶ್ವಿನಿ ಗೌಡ ಅವರು ಎಲ್ಲರ ಪರವಾಗಿ ನಿರ್ಧಾರ ಘೋಷಿಸಿದರು. ಮಾಳು ನಿಪನಾಳ ಮತ್ತು ಸ್ಪಂದನಾ ಅವರನ್ನು ಉಳಿಸಿಕೊಂಡು ರಕ್ಷಿತಾ ಶೆಟ್ಟಿಗೆ ಗೇಟ್‌ಪಾಸ್ ನೀಡಲಾಯಿತು. ಎಮೋಷನಲ್ ಆಗದೇ ರಕ್ಷಿತಾ ಶೆಟ್ಟಿ ಅವರು ಮುಖ್ಯದ್ವಾರದಿಂದ ಹೊರನಡೆದರು. ಆದ್ರೆ ಹೊರಗೆ ಸಿಡಿದ್ದೆದಿರುವ ದೊಡ್ಮನೆ ಹಾಗೂ ಕರಾವಳಿ ಫ್ಯಾನ್ಸ್ ಬಿಗ್‌ಬಾಸ್ ಇದು ಅನ್ಯಾಯ, ರಕ್ಷಿತಾ ಶೆಟ್ಟಿಗೆ ಮಾಡಿದ ದೊಡ್ಡ ಅವಮಾನ, ಒಂದೇ ದಿನಕ್ಕೆ ಕರೆಸಿ ವಾಪಸ್ ಕಳಿಸಲು ಯಾಕೆ ಶೋ ನಡೆಸಬೇಕು? ಅಂತ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ.
Read Also : ಆನ್ಲೈನ್ ಪ್ರಸಾದ ಪಡೆಯುವ ಭಕ್ತರೇ ಎಚ್ಚರ..! : ನಕಲಿ ವೆಬ್ಸೈಟ್ ತೆರೆದು ಪಂಗನಾಮ ಹಾಕ್ತಾರೆ ಹುಷಾರ್..!