ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್-1 ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಇಂದು ರಿಷಬ್ ಶೆಟ್ಟಿ ಅವರ ಜನ್ಮದಿನ. ಹೀಗಾಗಿ ಶೆಟ್ರಗೆ ಹುಟ್ಟುಹಬ್ಬದಂದು ಹೊಂಬಾಳೆ ಫಿಲ್ಸ್ ಕಾಂತಾರ-1 ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಈ ಭರ್ಜರಿ ಪೋಸ್ಟರ್‌ನ್ನು ಹೊಂಬಾಳೆ ಫಿಲ್ಫ್ ತನ್ನ ಅಧಿಕೃತ ಪೇಜ್‌ನಲ್ಲಿ ಬಿಡುಗಡೆ ಮಾಡಿದ್ದು, ಇದರಿಂದ ಅಭಿಮಾನಿಗಳಲ್ಲಿ ಮತ್ತೆ ನಿರೀಕ್ಷೆ ತಾರಕಕ್ಕೇರಿದೆ.
ಈ ಹೊಸ ಪೋಸ್ಟರ್‌ನಲ್ಲಿ ರಿಷಬ್ ಶೆಟ್ಟಿಯ ವಾರಿಯರ್ ಲುಕ್ ಗಮನ ಸೆಳೆಯುತ್ತಿದೆ. ಅವರ ಮುಖದಲ್ಲಿ ಆಕ್ರೋಶದ ಭಾವನೆ ಸ್ಪಷ್ಟವಾಗಿ ಕಾಣುತ್ತಿದೆ. ಒಂದೆ ಕೈಯಲ್ಲಿ ಪರಶುರಾಮ ಶೈಲಿಯ ಕೊಡಲಿ, ಮತ್ತೊಂದರಲ್ಲಿ ಬಾಣಗಳು ಚುಚ್ಚಿರುವ ಗುರಾಣಿ ಹಿಡಿದಿರುವ ದೃಶ್ಯ ಎಕ್ಸ್‌ಕ್ಯೂಸಿವ್ ಆಗಿದ್ದು, ಯುದ್ಧದ ರೋಷದಲ್ಲಿರುವ ಪಾತ್ರದ ತೀವ್ರತೆಯನ್ನು ತೋರಿಸುತ್ತಿದೆ. ಆದ್ರಿಂದ ಈ ಹೊಸ ಪೋಸ್ಟರ್ ಫ್ಯಾನ್ಸ್ ಕಾತುರವನ್ನ ದ್ವಿಗುಣಗೊಳಿಸಿದೆ.
ಕಾಂತಾರ ಚಾಪ್ಟರ್-1 ಚಿತ್ರವು ಕನ್ನಡದ ಜೊತೆಗೆ ಇತರೆ ದಕ್ಷಿಣ ಭಾರತೀಯ ಭಾಷೆಗಳಲ್ಲಿಯೂ ಹೊರಬರಲಿದ್ದು, ಬಾಲಿವುಡ್‌ನಲ್ಲೂ ಇದರ ಪ್ರಚಾರ ಭಾರೀ ಮಟ್ಟದಲ್ಲಿ ನಡೆಯುತ್ತಿದೆ. ಈ ಹೊಸ ಪೋಸ್ಟರ್ ನ್ನು ಬಹು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಅಕ್ಟೋಬರ್-2 ರಂದು ಸಿನಿಮಾ ಬಿಡುಗಡೆ
ಈ ವರ್ಷದ ಅಕ್ಟೋಬರ್ 2 ರಂದು ಕಾಂತಾರ ಚಾಪ್ಟರ್-1 ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂಬುದನ್ನೂ ಈ ಹೊಸ ಪೋಸ್ಟರ್ ಮತ್ತೊಮ್ಮೆ ದೃಢಪಡಿಸಿದೆ. ಮೊದಲ ಭಾಗದ ಯಶಸ್ಸಿನ ಬೆನ್ನಲ್ಲೇ ಇದಕ್ಕೆ ಇರುವ ನಿರೀಕ್ಷೆ ಭಾರೀ ಆಗಿದ್ದು, ಈಗ ಬಿಡುಗಡೆಯಾದ ಹೊಸ ಪೋಸ್ಟರ್ ಆ ನಿರೀಕ್ಷೆಗೆ ಇನ್ನಷ್ಟು ಬಲ ನೀಡಿದೆ.

