Site icon BosstvKannada

kamal controversy : ಥಗ್‌ಲೈಫ್‌ ಢಂ ಢಂ ಢಮಾರ್‌.. ಉದ್ಧಟತನದಿಂದ ಸೋತು ಸುಣ್ಣಾದ ಕಮಲ್‌..!

ಕದನದೋಳ್‌ ಕನ್ನಡಿಗರನ್ನ ಕೆಣಕಿ ಉಳಿದವರುಂಟೇ..? ಗಾಯಕನಾದ್ರೂ ಸರಿ ನಾಯಕನಾದ್ರೂ ಸರಿ..? ಸೋನು ಕಲಿತ ಪಾಠವನ್ನೇ ಕಮಲ್‌ ಕೂಡ ಕಲಿಯಬೇಕಿತ್ತು. ಆದ್ರೆ, ಉದ್ಧಟನತನ, ಮೊಂಡುವಾದ ಉಡಾಫೆಯ ಪರಮಾ ವಧಿಗೆ ಈಗ ತಕ್ಕ ಶಿಕ್ಷೆಯೇ ಆಗಿದೆ. ಕಮಲ್‌ ಹಾಸನ್‌ (kamal controversy) ಎಂಬ ಅತಿರೇಕಿಗೆ ಹೀನಾಯ ಸ್ಥಿತಿಯೇ ಆಗಿದೆ. ಕ್ಷಮೆ ಕೇಳದೇ ಕನ್ನಡ ಚಿತ್ರರಂಗವನ್ನು ನಿರ್ಲಕ್ಷಿಸಿದ್ದಕ್ಕೆ ಕಮಲ್‌ ಸಿನಿಮಾ ಥಗ್‌ಲೈಫ್‌ ನೆಲಕಚ್ಚಿದೆ.

ಕನ್ನಡಿಗರ ಬಳಿ ಕ್ಷಮೆ ಕೇಳುವಂತೆ ಹೈಕೋರ್ಟ್‌ ಕಮಲ್‌ಗೆ ಛೀಮಾರಿ ಹಾಕಿದ್ದೇ ತಡ. ಕಮಲ್‌ ಕ್ಷಮೆ ಕೇಳುವ ಬದಲು ಕರ್ನಾಟದಲ್ಲಿ ಥಗ್‌ ಲೈಫ್‌ ಬಿಡುಗಡೆ ಮಾಡದಿರಲು ನಿರ್ಧರಿಸಿದ್ರು. ಆದ್ರೆ ಅದರ ಪರಿಣಾಮವನ್ನ ಊಹಿಸಿರಲಿಲ್ಲ. ಇದೀಗ ಥಗ್‌ ಲೈಫ್‌ ಸಿನಿಮಾಗೆ ಹೀನಾಯ ಸ್ಥಿತಿ ಬಂದಿದೆ. ಕರ್ನಾಟಕದಲ್ಲಿ ರಿಲೀಸ್‌ ಆಗದ ಹಿನ್ನೆಲೆಯಲ್ಲಿ ಮೊದಲ ದಿನದ ಗಳಿಕೆಯಲ್ಲಿ ಭಾರೀ ಕುಸಿತ ಕಂಡಿದೆ.

ಅವರದ್ದೇ ಹಿಂದಿನ ಫ್ಲಾಪ್‌ ಸಿನಿಮಾ ಇಂಡಿಯನ್‌ 2 ಸಿನಿಮಾದ ಗಳಿಕೆಯನ್ನೂ ಸಹಾ ಹಿಂದಿಕ್ಕಲು ಸಾಧ್ಯವಾಗದೇ ಕೇವಲ 17 ಕೋಟಿ ರೂಪಾಯಿ ಗಳಿಸಿದೆ. ಬಹುದೊಡ್ಡ ತಾರಾಬಳಗ ಹೊಂದಿದ್ದ ಈ ಸಿನಿಮಾ 30 ರಿಂದ 35 ಕೋಟಿ ರೂಪಾಯಿ ಆದಾಯ ಗಳಿಸುವ ನಿರೀಕ್ಷೆ ಇತ್ತು. ಆದ್ರೆ ಇದೀಗ ಅದರ ಗಳಿಕೆಯಲ್ಲಿ ಶೇ.50 ರಷ್ಟು ತಗ್ಗಿದ್ದು, ಕರ್ನಾಟಕ ದಲ್ಲಿ ಕಲೆಕ್ಷನ್‌ ಇಲ್ಲದ ಹಿನ್ನೆಲೆ ಕಮಲ್‌ಗೆ ಥಗ್‌ ಲೈಫ್‌ ಸ್ಥಿತಿ ಬಂದಿದೆ.

ಕರ್ನಾಟಕದಲ್ಲಿ ಒಂದೊಮ್ಮೆ ಥಗ್‌ಲೈಫ್‌ ರಿಲೀಸ್‌ ಮಾಡಿದ್ರೆ 5 ರಿಂದ 6 ಕೋಟಿ ಗಳಿಸುವ ನಿರೀಕ್ಷೆ ಇತ್ತು. ಸಿನಿಮಾ ಅದ್ಭುತವಾಗಿದಿದ್ರೆ ಅದರ ಗಳಿಕೆ ನಿರೀಕ್ಷೆಯನ್ನು ಮೀರಿ ಹೋಗುವ ಸಾಧ್ಯತೆ ಇತ್ತು. ಆದ್ರೆ ಕರ್ನಾಟಕವನ್ನು ನಿರ್ಲಕ್ಷಿ ಸಿದ್ದಕ್ಕೆ ಥಗ್‌ಲೈಫ್‌ ಮಕಾಡೆ ಮಲಗಿದೆ.

ತಮಿಳುನಾಡಿನಲ್ಲೇ ಜನರು ಥಗ್‌ಲೈಫ್‌ಗೆ ನೆಗೆಟಿವ್‌ ಕಮೆಂಟ್ಸ್‌ ಹಾಕ್ತಿದ್ದಾರೆ. ಈ ಸಿನಿಮಾ ಮೇಲಿದ್ದ ಬೆಟ್ಟದಷ್ಟು ನಿರೀಕ್ಷೆ ಪಾತಾಳಕ್ಕೆ ಕುಸಿದಿದೆ.. ಮೊದಲ ದಿನವೇ ಹೀಗಾದ್ರೆ ಇನ್ನು 300 ಕೋಟಿ ರುಪಾಯಿ ಬಜೆಟ್‌ ದಾಟುವುದು ಕನಸಿನ ಮಾತು. ಅಷ್ಟೇ ಅಲ್ಲ ಬುಕ್ ಮೈ ಶೋನಲ್ಲೂ ಥಗ್‌ಲೈಫ್‌ 5.2 ರೇಟಿಂಗ್ ಪಡೆದುಕೊಂಡಿದೆ. ಶುರುವಲ್ಲೇ ಈ ರೀತಿಯ ವಿಮರ್ಷೆ ಕಂಡು ಕಮಲ್‌ ಹೀನಾಯ ಸೋಲು ಅನುಭವಿಸಿದ್ದಾರೆ.

ಒಟ್ನಲ್ಲಿ ಕರ್ನಾಟಕದಲ್ಲಿ ರಿಲೀಸ್‌ ಮಾಡದೇ ಥಗ್‌ಲೈಫ್‌ ಸಿನಿಮಾ ಅತಿ ದೊಡ್ಡ ಸಕ್ಸಸ್‌ ಕಾಣುತ್ತೆ ಅಂತ ಮೆರೆದಿದ್ದ ಕಮಲ್‌ಗೆ ತಕ್ಕ ಶಾಸ್ತಿಯಾಗಿದೆ.. ಕನ್ನಡಿಗರ ಶಕ್ತಿ ಏನು ಅನ್ನೋದು ಅವರಿಗೆ ಅರಿವಾಗಿದೆ.. ಇನ್ನಾದ್ರೂ ಕಮಲ್‌ ಹಾಸನ್‌ ವರ್ತನೆ ಬದಲಾಗುತ್ತಾ ಕಾದು ನೋಡ್ಬೇಕಿದೆ.

Exit mobile version