Site icon BosstvKannada

ಭೂ ತಾಯಿ ಒಡಲು ಸೇರಿದ ಕಲಾ ಸರಸ್ವತಿ : ಚತುರ್ಭಾಷಾ ನಟಿಗೆ ಅಂತಿಮ ವಿದಾಯ

ಹಿರಿಯ ನಟಿ ಬಿ. ಸರೋಜಾದೇವಿ ಅವರ ಅಂತಿಮ ದರ್ಶನ ಅನೇಕ ಕಲಾವಿದರು, ರಾಜಕಾರಣಿಗಳು ಪಡೆಕೊಂಡಿದ್ದರು. ಕನ್ನಡ ಚಿತ್ರರಂಗದ ಮೇರುನಟಿ, ಅಭಿನಯ ಸರಸ್ವತಿ, ಹಿರಿಯ ನಟಿ ಬಿ. ಸರೋಜಾದೇವಿ ಅವರ ಅಂತ್ಯಸಂಸ್ಕಾರ ಹುಟ್ಟೂರು ಚನ್ನಪಟ್ಟಣದ ದಶಾವರದಲ್ಲಿ ತಾಯಿಯ ಸಮಾಧಿ ಪಕ್ಕವೇ ನಡೆದಿದೆ. ತಾಯಿ ಸಮಾಧಿ ಪಕ್ಕದಲ್ಲೇ ಒಕ್ಕಲಿಗ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವದೊಂದಿಗೆ ಕಲಾ ಸರಸ್ವತಿಯ ಅಂತ್ಯ ಸಂಸ್ಕಾರ ನೆರೆವೇರಿದೆ..

ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಕೂಡ ಮಾಡಲಾಗಿತ್ತು. ಭೂತಾಯಿಯ ಮಡಿಲು ಸೇರಿದ್ದಾರೆ ಸರೋಜಾದೇವಿ. ಗೋವಿಂದ ನಾಮ ಸ್ಮರಿಸಿ ಅಂತಿಮ ವಿಧಿವಿಧಾನ ಮಾಡಿದ್ದಾರೆ. ಕುಟುಂಬಸ್ಥರು, ಗ್ರಾಮಸ್ಥರು. ನಟ ಶಿವರಾಜಕುಮಾರ್, ರಾಘವೇಂದ್ರ ರಾಜ್​ಕುಮಾರ್, ಜಗ್ಗೇಶ್, ಉಪೇಂದ್ರ, ಶ್ರುತಿ, ತಾರಾ ಅನುರಾಧ, ಮಾಲಾಶ್ರೀ ಸೇರಿದಂತೆ ಹಲವು ನಟ-ನಟಿಯರು ಸರೋಜಾದೇವಿಯವರ ಅಂತಿಮ ದರ್ಶನ ಪಡೆದುಕೊಂಡಿದ್ದರು.

Exit mobile version