Site icon BosstvKannada

ನಾಯಿ ಕಚ್ಚಿ ಕಬಡ್ಡಿ ಆಟಗಾರ ಬಲಿ, ಎಷ್ಟು ಡೇಂಜರಸ್‌ ಈ ರೇಬೀಸ್?

ಚಿನ್ನದ ಪದಕ ಗೆದ್ದ 22 ವರ್ಷದ ಕಬಡ್ಡಿ ಆಟಗಾರ ರೇಬೀಸ್‌ ವೈರಸ್‌ಗೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ. ಈ ರೇಬೀಸ್‌ ಕಾಯಿಲೆ ಎಷ್ಟು ಡೇಂಜರಸ್‌ ಅನ್ನೋದಿಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ಅಂತರರಾಜ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ರು. ಪ್ರೊ ಕಬಡ್ಡಿ ಲೀಗ್‌ಗೆ ತಯಾರಿ ನಡೆಸುತ್ತಿದ್ದರು.

ಇತ್ತೀಚೆಗೆ ಎರಡು ತಿಂಗಳ ಹಿಂದೆ ಅಂದ್ರೆ ಮಾರ್ಚ್‌ ತಿಂಗಳಿನಲ್ಲಿ ಚರಂಡಿಯಲ್ಲಿ ಮುಳುಗ್ತಾ ಇದ್ದ ನಾಯಿಮರಿಯನ್ನ ಬ್ರಿಜೇಶ್‌ ರಕ್ಷಿಸಲು ಪ್ರಯತ್ನಿಸಿದ್ರು. ಈ ವೇಳೆ ನಾಯಿಮರಿ ಬ್ರಿಜೇಶ್‌ ಅವರ ಬಲಗೈಯ ಬೆರಳನ್ನು ಕಚ್ಚಿತ್ತು. ಅದನ್ನ ಸಣ್ಣ ಗಾಯ ಅಂತಾ ನಿರ್ಲಕ್ಷಿಸಿ ಆಂಟಿ-ರೇಬೀಸ್ ಲಸಿಕೆಯನ್ನ ಬ್ರಿಜೇಶ್‌ ಪಡೆದಿರ್ಲಿಲ್ಲ.

ಈ ಘಟನೆಯಾಗಿ ಎರಡು ತಿಂಗಳ ನಂತ್ರ ಬ್ರಿಜೇಶ್‌ ದೇಹದಲ್ಲಿ ರೇಬೀಸ್‌ ಲಕ್ಷಣಗಳು ಕಾಣಿಸಿಕೊಂಡಿವೆ. ಬ್ರಿಜೇಶ್‌ ಬಲಗೈ ಮರಗಟ್ಟಿದಂತೆ ಫೀಲ್‌ ಆಗೋಕೆ ಶುರುವಾಯ್ತು. ಕ್ರಮೇಣ ಇಡೀ ದೇಹವು ಮರಗಟ್ಟಲು ಪ್ರಾರಂಭಿಸಿತು. ಅಲ್ಲದೇ, ಗಾಳಿ ನೀರಿಗೆ ಹೆದರಲು ಪ್ರಾರಂಭಿಸಿದ್ರು. ತನಿಖೆಯ ನಂತರ ಬ್ರಿಜೇಶ್‌ಗೆ ರೇಬೀಸ್ ಇರುವುದು ದೃಢಪಟ್ಟಿದೆ ಮತ್ತು ಅವರು ಜೂನ್ 27 ರಂದು ನಿಧನರಾದರು.

ಸಾಮಾನ್ಯವಾಗಿ ರೇಬೀಸ್‌ ವೈರಸ್‌ ದೇಹವನ್ನ ಪ್ರವೇಶಿಸಿದ ನಂತ್ರ ಹಲವಾರು ವಾರಗಳವರೆಗೆ ಯಾವುದೇ ಲಕ್ಷಣಗಳು ಗೋಚರಿಸೋದಿಲ್ಲ. ಹೀಗಾಗಿ ನಾಯಿ ಕಚ್ಚಿತು ಸಣ್ಣ ಗಾಯ ಅಂತೆಲ್ಲಾ ನಿರ್ಲಕ್ಷ್ಯ ಮಾಡದೇ ತಕ್ಷಣ ರೇಬೀಸ್‌ ಲಸಿಕೆ ಪಡೆದುಕೊಳ್ಳಿ. ಇನ್ನು ಕೇವಲ ನಾಯಿಯಿಂದ ಮಾತ್ರವಲ್ಲ ಬೆಕ್ಕು, ಮಂಗ, ಬಾವಲಿ ಅಥವಾ ಇತರ ಸಸ್ತನಿಗಳ ಕಚ್ಚುವಿಕೆ, ಗೀರುಗಳು ಅಥವಾ ನೆಕ್ಕುವಿಕೆಯಿಂದಾಗಿ ರೇಬೀಸ್‌ ಹರಡುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ.

Exit mobile version