Site icon BosstvKannada

ಸತ್ಯ ಹೇಳಿದ್ದಕ್ಕೆ ಕೆ.ಎನ್.ರಾಜಣ್ಣ ಅವರ ತಲೆದಂಡ : ಆರ್.ಅಶೋಕ್

ಹೈಕಮಾಂಡ್ ಸೂಚನೆ ಮೇರೆಗೆ ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ರಾಜೀನಾಮೆ ಸಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಆರ್.ಅಶೋಕ್, ಸತ್ಯ ಹೇಳಿದ್ದಕ್ಕೆ ಕೆ.ಎನ್.ರಾಜಣ್ಣ ಅವರ ತಲೆದಂಡವಾಗಿದೆ. ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ಲೇವಡಿ ಮಾಡಿದ್ದಾರೆ.

ಮತಗಳ್ಳತನ ಆರೋಪದ ಬಗ್ಗೆ ರಾಜಣ್ಣ ಸತ್ಯ ಹೇಳಿದ್ದರು. ಅದಕ್ಕೆ ರಾಜಣ್ಣ ತಲೆದಂಡವಾಗಿದೆ. ಸತ್ಯ ಹೇಳಿದರೆ ಕಾಂಗ್ರೆಸ್ ನವರಿಗೆ ಆಗಲ್ಲ. ಸೆಪ್ಟೆಂಬರ್ ನಲ್ಲಿ ಪ್ರಳಯ ಆಗುತ್ತೆ ಎಂದು ರಾಜಣ್ಣ ಹೇಳಿದ್ದರು. ಕಳೆದ ಎರಡು ದಿನಗಳ ಹಿಂದೆಯೇ ಕಾಂಗ್ರೆಸ್ ಹೈಕಮಾಂಡ್ ನಾಯಕರು ರಾಜೀನಾಮೆ ಪಡೆಯಲು ಸೂಚಿಸಿದ್ದಾರೆ ಎಂದು ಗೊತ್ತಾಗಿತ್ತು. ಈಗ ಸಚಿವರ ರಾಜೀನಾಮೆ ಪಡೆದಿದ್ದಾರೆ. ಈ ಮೂಲಕ ವಾಲ್ಮೀಕಿ ಸಮಾಜದವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದರು.

Exit mobile version