ಕೊಡಗಿನಲ್ಲಿ ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟ ಭರ್ಜರಿಯಾಗಿ ನಡೆಯಿತು.. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಹಯೋಗದಲ್ಲಿ ಈ ಕ್ರೀಡೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಮಡಿಕೇರಿ ಸಮೀಪದ ತಾಳತ್ ಮನೆಯ ಮಲ್ಲನ ಬೆಳ್ಯಪ್ಪನವರ ಗದ್ದೆಯಲ್ಲಿ ಈ ಕ್ರೀಡಾಕೂಟ ರಂಗು ಮೂಡಿಸಿತ್ತು. ಹ್ಯಾಂಡ್ ಬಾಲ್, ಹಗ್ಗ ಜಗ್ಗಾಟ, ಕೆಸರು ಗದ್ದೆ ಓಟ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಜಿಲ್ಲೆಯ ಪತ್ರಕರ್ತರು ಪಾಲ್ಗೊಂಡು ಎಂಜಾಯ್‌ ಮಾಡಿದ್ರು. ಎಲ್ಲಾ ವಿಭಾಗದಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಂಡಿದ್ದು ಹ್ಯಾಂಡ್ ಬಾಲ್ ವಿಭಾಗದಲ್ಲಿ ನಾಟಿ ಬಾಯ್ಸ್ ತಂಡ ಪ್ರಥಮ, ಮಡ್ ಫೀಲ್ಡರ್ಸ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಕೆಸರುಗದ್ದೆ ಕ್ರೀಡಾಕೂಟದಿಂದ ಮಸ್ತ್‌ ಮನರಂಜನೆ..!

ಇನ್ನೂ ಹಗ್ಗ ಜಗ್ಗಾಟದಲ್ಲಿ ಮಡ್ ಫೈಟರ್ಸ್ ತಂಡ ಪ್ರಥಮ, ನಾಟಿ ಬಾಯ್ಸ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಕೆಸರುಗದ್ದೆ ಓಟದ ಮಹಿಳಾ ವಿಭಾಗದಲ್ಲಿ ವತ್ಸಲ ಎಸ್.ಆರ್. ಪ್ರಥಮ, ಬಿ.ಆರ್.ಸವಿತಾ ರೈ ದ್ವಿತೀಯ ಸ್ಥಾನವನ್ನು ಪಡೆದುಕೊಂಡ್ರು. ಪುರುಷರ 40 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಗೋಪಾಲ್ ಸೋಮಯ್ಯ ಪ್ರಥಮ, ಅಜ್ಜಮಾಡ ರಮೇಶ್ ಕುಟ್ಟಪ್ಪ ದ್ವಿತೀಯ ಹಾಗೂ ಪಾರ್ಥ ಚಿಣ್ಣಪ್ಪ ತೃತೀಯ ಸ್ಥಾನವನ್ನು ಪಡೆದುಕೊಂಡರು. ಕಿರಿಯರ ವಿಭಾಗದಲ್ಲಿ ಇಸ್ಮಾಯಿಲ್ ಪ್ರಥಮ, ದಿವಾಕರ್ ಜಾಕಿ ದ್ವಿತೀಯ ಹಾಗೂ ನವೀನ್ ಡಿಸೋಜಾ ತೃತೀಯ ಬಹುಮಾನ ಪಡೆದುಕೊಂಡರು.

ಒಟ್ನಲ್ಲಿ ಸುದ್ದಿ ಸಮಾಚಾರ ಅಂತ ಫುಲ್‌ ಬ್ಯುಸಿಯಾಗಿರ್ತಿದ್ದ ಕೊಡಗಿನ ಪತ್ರಕರ್ತರು ಮನರಂಜನೆಗೆ ಅಂತ ತಮ್ಮ ಸಮಯವನ್ನು ಮೀಸಲಿಟ್ಟು ಸಖತ್‌ ಎಂಜಾಯ್‌ ಮಾಡಿದ್ರು. ಮೈ-ಕೈ ಕೆಸರಾಗಿಸಿಕೊಂಡು ಚಿಕ್ಕ ಮಕ್ಕಳಂತೆ ಆಟವಾಡಿದ್ರು.. ಇನ್ನೂ ಈ ಕ್ರೀಡಾಕೂಟ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರು ಕೂಡ ಪತ್ರಕರ್ತರ ಕೇಸರಿನಾಟ ನೋಡಿ ಮಸ್ತ್‌ ಮಜಾ ಮಾಡಿದ್ರು.

Share.
Leave A Reply