ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ನಲ್ಲಿ ಆರ್ಟಿಸನ್ಸ್ ಗ್ರೇಡ್-IV ಹುದ್ದೆಗಳು ಖಾಲಿ ಇದ್ದು, ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. BHELನಲ್ಲಿ ಒಟ್ಟು 515 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ತಮಿಳುನಾಡು – ಮಧ್ಯಪ್ರದೇಶ – ಕರ್ನಾಟಕ – ಉತ್ತರ ಪ್ರದೇಶ ಈ ರಾಜ್ಯಗಳಿಗೆ ಪೋಸ್ಟಿಂಗ್ ಆಗಲಿದೆ.
ತಿಂಗಳಿಗೆ 29,500 ರೂಪಾಯಿಯಿಂದ 65,000 ರೂಪಾಯಿವರೆಗೆ ಮಾಸಿಕ ವೇತನ ಇರಲಿದೆ. BHEL ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು 10 ನೇ ತರಗತಿ, ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ITI ಪೂರ್ಣಗೊಳಿಸಿರಬೇಕು. ಜೊತೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 27 ವರ್ಷಗಳ ಒಳಗಿರಬೇಕು. ಆದ್ರೆ, OBC, SC/ST, ಕಂಪ್ಯೂಟರ್ ಆಧಾರಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಮೂಲಕ ಸಂದರ್ಶನ ಪ್ರಕ್ರಿಯೆ ನಡೆಯಲಿದೆ.

