ಜಪಾನ್ ದೇಶ ಹಲವು ಮೊದಲುಗಳಿಗೆ ಕಾರಣವಾಗಿದೆ. ಅದ್ರಲ್ಲೂ ಹೊಸ ಟೆಕ್ನಾಲಜಿ ವಿಷ್ಯ ಬಂದಾಗ ಜಪಾನ್ ಯಾವಾಗ್ಲೂ ಮುಂಚೂಣಿಯಲ್ಲಿರುತ್ತೆ. ಇದೀಗ ಕೃತಕ ರಕ್ತವನ್ನ ತಯಾರಿಸುವ ಮೂಲಕ ಮತ್ತೊಮ್ಮೆ ಜಗತ್ತಿನ ಹುಬ್ಬೇರಿಸುವಂತೆ ಮಾಡಿದೆ.
ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಕೃತಕ ಬ್ಲಡ್ ಕಂಡು ಹಿಡಿಯಲು ಜಪಾನ್ ಪ್ರಯೋಗ ನಡೆಸಿದೆ.. ಈ ಕೃತಕ ಬ್ಲಡ್‌ಅನ್ನ ಕಂಡುಹಿಡಿಯೋದಕ್ಕೆ ಕಾರಣ ಜಪಾನ್‌ನ ಜನಸಂಖ್ಯೆ.. ಯಾಕಂದ್ರೆ, ಜಪಾನ್‌ನ ಪಾಪ್ಯುಲೇಷನ್ ತುಂಬಾನೆ ಕಡಿಮೆ ಆಗ್ತಿದೆ. ಅದ್ರಲ್ಲೂ ವೃದ್ಧರ ಸಂಖ್ಯೆ ಹೆಚ್ಚಾಗ್ತಿದೆ.

ಕಳೆದ ವರ್ಷದ ಸ್ಟಾಟಿಸ್‌ಟಿಕ್ಸ್ ನೋಡೋದಾದ್ರೆ, 2024ರಲ್ಲಿ, ಜಪಾನ್‌ನಲ್ಲಿ 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಸಂಖ್ಯೆ 36 ಮಿಲಿಯನ್‌ಗಿಂತಲೂ ಹೆಚ್ಚಿತ್ತು. ಅಂದ್ರೆ, ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಮೂವತ್ತರಷ್ಟು ಕೇವಲ ವೃದ್ಧರೇ ಇದ್ದಾರೆ ಎಂದರ್ಥ. ಇದ್ರಿಂದ ಸಮಸ್ಯೆ ಏನಾಗ್ತಿದೆ ಅಂದ್ರೆ, ಜಪಾನ್‌ನಲ್ಲಿ ಬ್ಲಡ್ ಡೊನೇಟ್ ಮಾಡುವವರ ಸಂಖ್ಯೆ ಕಡಿಮೆ ಆಗ್ತಾ ಬಂದಿದೆ.
ಯಾಕಂದ್ರೆ, ಹೆಚ್ಚಿನ ವೃದ್ಧರು ರಕ್ತದಾನ ಮಾಡಲು ಸಾಧ್ಯವಿಲ್ಲ. ಹೀಗಾಗಿ, ರಕ್ತದ ಲಭ್ಯತೆ ಕಡಿಮೆಯಾಗ್ತಿದೆ. ಆಕ್ಸಿಡೆಂಟ್‌ನಂತ ಎಮರ್ಜೆನ್ಸಿ ಸಿಚುವೇಷನ್‌ಗಳಲ್ಲಿ ಜಪಾನ್‌ನಲ್ಲಿ ರಕ್ತವೇ ಸಿಕ್ತಾ ಇರ್ಲಿಲ್ಲ. ಇದ್ರಿಂದ ಅದೆಷ್ಟೋ ಮಂದಿ ಪ್ರಾಣ ಕಳ್ಕೊಂಡಿದ್ದಾರೆ.
ಇನ್ನು, ಯಾರಾದ್ರೂ ರಕ್ತದಾನ ಮಾಡಿದ್ರೂ ಕೂಡ, ಡೊನೇಟ್ ಮಾಡಿದವರ ಬ್ಲಡ್‌ಅನ್ನ ಕೂಡ ಒಂದು ತಿಂಗಳಿಗಿಂತ ಜಾಸ್ತಿ ಸ್ಟೋರ್ ಮಾಡಿಟ್ಕೊಳೋಕೆ ಆಗೋದಿಲ್ಲ. ಮೊದ್ಲೇ ಡೊನೇಟ್ ಮಾಡುವವರ ಸಂಖ್ಯೆ ಕಡಿಮೆ, ಅದ್ರಲ್ಲೂ ಡ್ಯೂರೇಬಿಲಿಟಿ ಸಮಸ್ಯೆ ಬರ್ತಾ ಇರೋದ್ರಿಂದ ಜಪಾನ್ ಈ ಹೊಸ ಆವಿಷ್ಕಾರಕ್ಕೆ ಮುಂದಾಗಿದೆ. ಈ ಕೃತಕ ರಕ್ತವನ್ನ ಎರಡು ವರ್ಷಗೂ ಸುರಕ್ಷಿತವಾಗಿ ಇಡ್ಬಹುದು.
ಕೃತಕ ರಕ್ತಕಣಗಳ ಇನ್ನೊಂದು ಸ್ಪೆಷಾಲಿಟಿ ಏನಂದ್ರೆ ಯಾವುದೇ ರಕ್ತದ ಗುಂಪಿನ ವ್ಯಕ್ತಿಗೂ ಕೂಡ ನೀಡ್ಬಹುದು. ಹೀಗಾಗಿ, ಅದೇ ಗುಂಪಿನ ರಕ್ತ ಸಿಗದೇ ಆಗ್ತಿದ್ದ ತೊಂದರೆಗಳಿಗೆ ಇದು ಬೆಸ್ಟ್ ಸಲ್ಯೂಷನ್ ಆಗಿದೆ. ಯಾಕಂದ್ರೆ, ಕೆಲ ವೊಮ್ಮೆ ಅದೇ ಗುಂಪಿನ ರಕ್ತ ಸಿಗದೇ ಫರ್ದರ್ ಮೆಡಿಕಲ್ ಪ್ರೊಸೀಜರ್ ಮಾಡೋದಿಕ್ಕೆ ಬಹಳ ತೊಂದರೆ ಆಗುತ್ತೆ. ಸೋ, ತುರ್ತು ಪರಿಸ್ಥಿತಿಯಲ್ಲಿ ರಕ್ತದ ಗುಂಪನ್ನು ಪರಿಶೀಲಿಸದೆಯೇ ತಕ್ಷಣದ ಚಿಕಿತ್ಸೆಯನ್ನು ನೀಡಲು ಕೃತಕ ಬ್ಲಡ್‌ನಿಂದ ಸಾಧ್ಯವಾಗುತ್ತೆ.
ಈ ಕೃತಕ ರಕ್ತವನ್ನ ತಯಾರಿಸುವ ಪ್ರಕ್ರಿಯೆ ಸ್ಟೆಮ್ ಸೆಲ್ಸ್ ನಿಂದ ಪ್ರಾರಂಭವಾಗುತ್ತೆ. ವಿಜ್ಞಾನಿಗಳು ವಿವಿಧ ರೀತಿಯ ರಕ್ತ ಕಣಗಳಾಗಿ ರೂಪಾಂತರಗೊಳ್ಳುವ ಸ್ಟೆಮ್ ಸೆಲ್ಸ್ ಗಳನ್ನು ಬಳಸುತ್ತಾರೆ. ನಂತರ ಅವುಗಳನ್ನು ಪ್ರಯೋಗಾಲಯದಲ್ಲಿ ಬೆಳೆಸಿ ಕೃತಕ ರಕ್ತವನ್ನು ತಯಾರಿಸಲಾಗುತ್ತೆ. ಈ ಪ್ರಕ್ರಿಯೆಯು ಸ್ಟೆಮ್ ಸೆಲ್ಸ್ ನಿಂದ ಪ್ರಾರಂಭವಾಗುತ್ತೆ. ವಿಜ್ಞಾನಿಗಳು ವಿವಿಧ ರೀತಿಯ ರಕ್ತ ಕಣಗಳಾಗಿ ರೂಪಾಂತರಗೊಳ್ಳುವ ಸ್ಟೆಮ್ ಸೆಲ್ಸ್‌ನ್ನ ಬಳಸುತ್ತಾರೆ. ನಂತರ ಅವುಗಳನ್ನು ಪ್ರಯೋಗಾಲಯದಲ್ಲಿ ಬೆಳೆಸಿ ಕೃತಕ ರಕ್ತ ತಯಾರಿಸಲಾಗುತ್ತದೆ.
ನಾರಾ ವೈದ್ಯಕೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಿರೋಮಿ ಸಕೈ ಈ ಯೋಜನೆಯ ನೇತೃತ್ವ ವಹಿಸಿದ್ದಾರೆ. ಸೋ, ಬೇಸಿಕಲಿ ಇದು ಲ್ಯಾಬ್‌ನಲ್ಲಿ ತಯಾರಿಸಲಾಗುವಂತ ರಕ್ತ.. ಇನ್ನು, ಎಲ್ಲಾ ಅಂದುಕೊಂಡಂತೆ ಆದ್ರೆ, 2030 ರ ವೇಳೆಗೆ ಈ ಕೃತಕ ರಕ್ತದ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸುವುದಾಗಿ ಜಪಾನ್ ಘೋಷಿಸಿದೆ.
ಒಂದ್ವೇಳೆ, ಜಪಾನ್‌ನಲ್ಲಿ ಈ ಪ್ರಯೋಗ ಯಶಸ್ವಿಯಾಗಿ ಯಾವುದೇ ಅಡ್ಡಪರಿಣಾಮಗಳು ಕಾಣಿಸಿಕೊಳ್ಳದಿದ್ರೆ, ಮುಂದಿನ ಹಂತದಲ್ಲಿ ಅದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನಿರ್ಧರಿಸಲಾಗುತ್ತೆ. ಎಲ್ಲದ್ರಲ್ಲೂ ಕೃತಕ ರಕ್ತ ಪಾಸ್ ಆಯ್ತು ಅಂದ್ರೆ, ಶೀಘ್ರದಲ್ಲೇ ಇತರ ದೇಶಗಳಲ್ಲೂ ಲಭ್ಯವಾಗಲಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಯನ್ನ ತರೋದಂತೂ ನಿಶ್ಚಿತ…