Site icon BosstvKannada

ಜನಾರ್ದನ ರೆಡ್ಡಿ ಓರ್ವ ನೀಚ, ರಾಕ್ಷಸ; ಭರತ್ ರೆಡ್ಡಿ

ಬಳ್ಳಾರಿ ಬ್ಯಾನರ್ ಕಿಚ್ಚು ದೊಡ್ಡ ಮಟ್ಟದ ಹಿಂಸಾಚಾರಕ್ಕೆ ಕಾರಣವಾಗಿದೆ. ಇಂದು ನಾಯಕರ ಆರೋಪ- ಪ್ರತ್ಯಾರೋಪಗಳು ಜೋರಾಗಿವೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನಾರಾ ಭರತ್ ರೆಡ್ಡಿ, ಜನಾರ್ದನ ರೆಡ್ಡಿ ಓರ್ವ ನೀಚ. ರಾಕ್ಷಸ. ಅವನೇ ರೋಡಿಗೆ ಬಂದು ಈ ರೀತಿ ಗಲಾಟೆ ಮಾಡಿದ್ದಾನೆ. ನಾವು ಅವನ ಮನೆ ಮುಂದೆ ಬ್ಯಾನರ್ ಹಾಕಿಲ್ಲ. ಕಾರ್ಯಕ್ರಮ ಹಾಳು ಮಾಡುವುದಕ್ಕಾಗಿ ಆತ ಈ ರೀತಿ ಮಾಡುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಆತ ತನ್ನ ಬೆಂಬಲಿಗರೊಂದಿಗೆ ಸೇರಿ ರಾಕ್ಷಸತನ ಪ್ರದರ್ಶಿಸುತ್ತಿದ್ದಾನೆ. ನಾನು ವಿಷಯವನ್ನು ಡೈವರ್ಟ್ ಮಾಡಲ್ಲ. ಹಿಂದಿನಿಂದಲೂ ಬಳ್ಳಾರಿಯಲ್ಲಿ ಆತನ ರಾಕ್ಷಸತನ, ನೀಚತನ ನಡೆದುಕೊಂಡೇ ಬರುತ್ತಿದೆ. ಇದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ವಾಲ್ಮೀಕಿ ಅಜ್ಜನ ಕಾರ್ಯಕ್ರಮ ಮಾಡಬಾರದು ಎಂಬ ನಿಟ್ಟಿನಲ್ಲಿ ಆತ ಈ ರೀತಿ ಮಾಡುತ್ತಿದ್ದಾನೆ. ಯಾರೇ ಏನೇ ವಿರೋಧಿಸಿದರೂ ನಾನು ವಾಲ್ಮೀಕಿ ಅಜ್ಜನ ಜಯಂತಿ ಮಾಡುತ್ತೇನೆ. ನನ್ನ ಕಾರ್ಯಕರ್ತನ ಸಾವಾಗಿದೆ. ನಾನು ಕಾರ್ಯಕ್ರಮ ಮಾಡದಿದ್ದರೆ ಆತನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ಎಷ್ಟೇ ರಾಕ್ಷಸರು ಅಡ್ಡ ಬಂದರೂ ನಾನು ಕಾರ್ಯಕ್ರಮ ಮಾಡ್ತೇನೆ. ಪಕ್ಷದ ರಾಜ್ಯ ನಾಯಕರು, ಹೈಕಮಾಂಡ್, ಡಿಕೆ ಶಿವಕುಮಾರ್ ನನ್ನ ಜೊತೆ ಮಾತನಾಡಿದ್ದಾರೆ ಎಂದಿದ್ದಾರೆ.

Exit mobile version