Site icon BosstvKannada

ಅವಧಿಗೂ ಮುನ್ನವೇ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್‌ ರಾಜೀನಾಮೆ.. ಇವರೇ ಮುಂದಿನ ಉಪರಾಷ್ಟ್ರಪತಿ ಆಗಲಿದ್ದಾರಾ?

ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್‌ ರಾಜೀನಾಮೆ ನೀಡಿದ್ದಾರೆ. ಉಪಾಧ್ಯಕ್ಷ ಜಗದೀಪ್ ಧನಕರ್ ಸೋಮವಾರ ಆರೋಗ್ಯ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಅವಧಿಗೂ ಮುನ್ನವೇ ಧನ್ಕರ್‌ ರಾಜೀನಾಮೆ
ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಬಾಪತಿ ಜಗದೀಪ್‌ ಧನ್ಕರ್‌ ತಮ್ಮ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ಸಲ್ಲಿಸಿದ್ದಾರೆ. ದೇಶದ ಉನ್ನತ ಸ್ಥಾನಗಳ ಪೈಕಿ ರಾಷ್ಟ್ರಪತಿ, ಪ್ರಧಾನಮಂತ್ರಿ ಆದ ಬಳಿಕ ಉಪರಾಷ್ಟ್ರಪತಿಗೆ ನೀಡಲಾಗುತ್ತೆ. ಆದ್ರೆ, ಧನ್ಕರ್‌ ಅವರ ದಿಢೀರ್‌ ರಾಜೀನಾಮೆಯಿಂದ ಸಂಚಲನ ಸೃಷ್ಟಿಯಾಗಿದೆ. ಜಗದೀಪ್‌ ಧನ್ಕರ್‌ ಅವರಿಗೆ 74 ವರ್ಷ ವಯಸ್ಸಾಗಿದ್ದು, ಅನಾರೋಗ್ಯದ ಕಾರಣ ವೈದ್ಯಕೀಯ ಸಲಹೆ ಮೇರೆಗೆ ರಾಜೀನಾಮ ನೀಡಿದ್ದಾರೆ.

ದೇಶದ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ರಾಷ್ಟ್ರಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಸಂಪುಟಕ್ಕೆ ಅವರು ತಮ್ಮ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲೇ ಹೊಸ ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಸಲು ತಯಾರಿ ಸಾಗಿದೆ.

ಮುಂದಿನ ಉಪರಾಷ್ಟ್ರಪತಿ ಯಾರು?

ಹಾಗಾದ್ರೆ ಮುಂದಿನ ಉಪರಾಷ್ಟ್ರಪತಿ ಯಾರಾಗಲಿದ್ದಾರೆ ಎಂಬ ಚರ್ಚೆ ಕೂಡ ಶುರುವಾಗಿದೆ. ರಾಜ್ಯಸಭಾ ಉಪ ಸಭಾಪತಿಯೂ ಆದ ಜನತಾದಳ ಸಂಸದ ಹರಿವಂಶ್‌ ಅವರು 2020ರಿಂದ ಉಪಸಭಾಪತಿ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸರ್ಕಾರದ ವಿಶ್ವಾಸವನ್ನು ಗಳಿಸಿದ್ದಾರೆ. ಈ ಕಾರಣಕ್ಕೆ ಅವರು ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ.

Exit mobile version