ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಡ್ರಿಂಕ್ಸ್ ಮಾಡಿದವರನ್ನೆಲ್ಲ ಪೊಲೀಸರು ಮನೆಗೆ ಹೋಗಿ ಮುಟ್ಟಿಸುತ್ತಾರೆನ್ನುವುದು ನಿಮ್ಮ ಕಲ್ಪನೆ ಎಂದು ಗೃಹ ಪರಮೇಶ್ವರ್ (G Parameshwar) ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಬಾ ಕುಡಿದಿರುವವರು, ನಡೆಯಲು ಆಗದಿರುವವರನ್ನ ವಿಶ್ರಾಂತಿ ಸ್ಥಳಕ್ಕೆ ಬಿಡುತ್ತೇವೆ. ಕೆಲವರು ಪ್ರಜ್ಞೆ ಇರದ ಮಟ್ಟಕ್ಕೆ ಕುಡಿಯುತ್ತಾರೆ. ಅಂಥವರಿಗಾಗಿ 15 ಕಡೆ ರೆಸ್ಟಿಂಗ್ ಪ್ಲೇಸ್ ಮಾಡಿದ್ದೇವೆ. ನಶೆ ಇಳಿಯುವವರೆಗೂ ಇಟ್ಟುಕೊಂಡು ನಂತರ ಕಳಿಸುತ್ತೇವೆ ಎಂದಿದ್ದಾರೆ.
ಬಾರ್, ಪಬ್ ಓಪನ್ ಇಡಲು ಸಮಯ ನಿಗದಿ ಮಾಡಲಾಗಿದೆ. ಟೈಮಿಂಗ್ ಪ್ರಕಾರ ಬಾರ್ ಮುಚ್ಚಬೇಕು. ರಾತ್ರಿ ಒಂದು ಗಂಟೆಗೆ ಎಲ್ಲ ಬಾರ್‌ಗಳನ್ನು ಮುಚ್ಚಬೇಕು. ಮುಚ್ಚದಿದ್ರೆ ಕೇಸ್ ಹಾಕುತ್ತೇವೆ. ಡ್ರಿಂಕ್ ಆಂಡ್ ಡ್ರೈವ್‌ಗೆ ಅದೇ ರೀತಿಯಲ್ಲಿ ಕೇಸ್ ಇರುತ್ತೆ. 160 ಸ್ಪಾಟ್ ಐಡೆಂಟಿಫೈ ಮಾಡಿದ್ದಾರೆ. ಒಂದು ಹಂತದವರೆಗೆ ಬಿಡುತ್ತೇವೆ. ಹಂತ ಮೀರಿದಾಗ ಡ್ರೈವ್ ಮಾಡುವುದು ಕಷ್ಟವಾಗುತ್ತದೆ. ಆಗ ಅಪಘಾತಗಳಾಗಿ ಸಾಯುತ್ತಾರೆ. ಎರಡು ದಿನ ನಾವು ಕಂಟ್ರೋಲ್ ಮಾಡಿದ್ರೆ ಕೆಲವರ ಪ್ರಾಣ ಉಳಿಯುತ್ತವೆ ಎಂದಿದ್ದಾರೆ.
ಹೆಚ್ಚು ಜನರು ಸೇರಿದ ಸ್ಥಳದಲ್ಲಿ ಬೇರೆ ಬೇರೆ ಆಯಾಮದಲ್ಲಿ ಪೊಲೀಸರು ಭದ್ರತೆ ಕಲ್ಪಿಸಿರುತ್ತಾರೆ. ಪೊಲೀಸ್ ರಿಗೆ ಬಾಡಿ ಕ್ಯಾಮರಾ ಹಾಕಿಕೊಳ್ಳಲು ಸೂಚಿಸಲಾಗಿದೆ. ಅದು ಡೈರೆಕ್ಟ್ ಆಗಿ ಕಮಾಂಡ್ ಸೆಂಟರ್‌ಗೆ ಕನೆಕ್ಟ್ ಆಗಿರುತ್ತೆ. ಹೆಚ್ಚಿನ ಪೋರ್ಸ್ ಬೇಕಾದರೆ ಆ ಸ್ಥಳಕ್ಕೆ ಬರುತ್ತೆ ಎಂದು ಮಾಹಿತಿ ನೀಡಿದ್ದಾರೆ.

