Site icon BosstvKannada

Israel-Iran conflict : ಅಮೆರಿಕ ಏರ್‌ಸ್ಟ್ರೈಕ್‌ಗೆ ಇರಾನ್‌ ಆಕ್ರೋಶ : 3,500 ಜನರಿಗ ಗಾಯ

ರಾನ್​-ಇಸ್ರೇಲ್​ ನಡುವಿನ (Israel-Iran conflict) ಯುದ್ಧರಂಗಕ್ಕೆ ಕೊನೆಗೂ ಅಮೆರಿಕಾ ಎಂಟ್ರಿ ಕೊಟ್ಟಿದೆ. ಇರಾನ್​ ದೇಶಕ್ಕೆ ಟ್ರಂಪ್​​​ ಎರಡು ವಾರದ ಗಡುವು ನೀಡಿದ ಬೆನ್ನಲ್ಲೇ ವಾಯುಸೇನೆ ಅಟ್ಯಾಕ್​​ ಮಾಡಿರೋದು ಇರಾನ್​ಗೆ ನುಂಗಲಾರದ ತುತ್ತಾಗಿದೆ. ಇರಾನ್​ನ ಮೂರು ಪರಮಾಣು ನೆಲೆಗಳ‌ ಮೇಲೆ ಅಮೆರಿಕಾ ದಾಳಿ ನಡೆಸಿದ್ದು, ಸ್ವತಃ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​​​ ಟ್ರಂಪ್ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಫೋರ್ಡೋ, ನಟಾಂಜ್​, ಎಸ್ಫ್​ಹಾನ್ ಮೇಲೆ ಅಮೆರಿಕಾ ದಾಳಿ ಮಾಡಿದೆ.

ಇರಾನ್ ಮೇಲಿನ ದಾಳಿಗೆ ಅಮೆರಿಕ ಬಂಕರ್ ಬಸ್ಟರ್ ಬಾಂಬ್‌ಗಳು, 30 ಟೊಮಾಹಾಕ್ ಕ್ಷಿಪಣಿಗಳನ್ನು ಬಳಸಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಟೊಮಾಹಾಕ್ ಕ್ಷಿಪಣಿಯು ಅಮೆರಿಕಾ ಅಭಿವೃದ್ಧಿಪಡಿಸಿದ ದೀರ್ಘ-ಶ್ರೇಣಿಯ, ಸಬ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದೆ. ಬೆಳಗಿನ ಜಾವ 03:45ಕ್ಕೆ ಈ ದಾಳಿ ನಡೆದಿದೆ.

ಇತ್ತ ಪರಮಾಣು ತಾಣಗಳ ಮೇಲಿನ ದಾಳಿಯನ್ನ ಇರಾನ್​ ಕೂಡಾ ಒಪ್ಪಿಕೊಂಡಿದೆ. ತಡರಾತ್ರಿ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆದಿದೆ ಅಂತ ಇರಾನ್​​​ನ ಇಸ್ಫಹಾನ್​ ಪ್ರಾಂತ್ಯದ ಭದ್ರತಾ ಉಪ ಗವರ್ನರ್​​ ಅಕ್ಬರ್ ಸಲೇಹಿ ಹೇಳಿದ್ದಾರೆ. ಇನ್ನು ಇರಾನ್​ನಲ್ಲಿ ಈವರೆಗೆ 3,500 ಜನ ಗಾಯಗೊಂಡಿದ್ದಾರೆ ಅಂತ ಇರಾನ್​ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇನ್ನು ಇರಾನ್ ಮೇಲಿನ ಅಮೆರಿಕದ ದಾಳಿಗೆ ಇಸ್ರೇಲ್‌ ಪ್ರತಿಕ್ರಿಯಿಸಿದೆ. ಇಸ್ರೇಲ್ ಪ್ರಧಾನಿ ನೆತನ್ಯಾಹು, ಟ್ರಂಪ್‌ಗೆ ಧನ್ಯವಾದ ಅರ್ಪಿಸಿದ್ದಾರೆ. ಅಧ್ಯಕ್ಷ ಟ್ರಂಪ್, ನಾನು ಮತ್ತು ಇಸ್ರೇಲ್ ಜನರು ನಿಮಗೆ ಧನ್ಯವಾದಗಳು ಹೇಳ್ತಿದ್ದೀವಿ. ಟ್ರಂಪ್ ಅವರ ನಾಯಕತ್ವವು ಇತಿಹಾಸದ ತಿರುವು ಸೃಷ್ಟಿಸಿದೆ ಅಂತ ಬಣ್ಣಿಸಿದ್ದಾರೆ. ಟ್ರಂಪ್​​ ನಿರ್ಧಾರವು, ಮಧ್ಯಪ್ರಾಚ್ಯ ಮತ್ತು ಅದರಾಚೆಗೆ, ಭವಿಷ್ಯದಲ್ಲಿ ಶಾಂತಿ ಕೊಂಡೊಯ್ಯಲು ಸಹಾಯ ಆಗಲಿದೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್​ ಪರ ನಿಂತಿರೋ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಇರಾನ್​ ಮೇಲೆ ಯುದ್ಧ ಸಾರಿರೋ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ದಾಳಿ ಮಾಡಿರೋ ಬಗ್ಗೆ ಪೋಸ್ಟ್​ ಮಾಡಿರೋ ಟ್ರಂಪ್​, ಇರಾನ್‌ನ ಮೂರು ಪರಮಾಣು ಕೇಂದ್ರಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಮೇಲೆ ನಾವು ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದ್ದೇವೆ. ಈಗ ಎಲ್ಲಾ ವಿಮಾನಗಳು ಇರಾನ್ ವಾಯುಪ್ರದೇಶದ ಹೊರಗೆ ಹೋಗ್ತಿವೆ ಅಂತ ಬರೆದುಕೊಂಡಿದ್ದಾರೆ.

ದಾಳಿ ಬಳಿಕ ಶ್ವೇತಭವನದಲ್ಲಿ ಮಾತನಾಡಿರುವ ಟ್ರಂಪ್​ ನಾವು ಮತ್ತು ಇಸ್ರೇಲಿ ಪ್ರಧಾನಿ ಒಂದು ತಂಡವಾಗಿ ಕೆಲಸ ಮಾಡಿದ್ದೇವೆ ಅಂತ ಹೇಳಿದ್ದಾರೆ. ಜೊತೆಗೆ ಇಸ್ರೇಲ್​ ಪ್ರಧಾನಿ ನೆತನ್ಯಾಹುಗೆ ನಾನು ಧನ್ಯವಾದ ಹೇಳಲು ಮತ್ತು ಅಭಿನಂದಿಸಲು ಬಯಸುತ್ತೇನೆ . ಬಹುಶಃ ಯಾವುದೇ ತಂಡವು ಹಿಂದೆಂದೂ ಮಾಡದ ರೀತಿಯಲ್ಲಿ ಕೆಲಸ ಮಾಡಿದ್ದೇವೆ.

Read Also : ಇಂದೇ ನಿರ್ಧಾರವಾಗುತ್ತಾ‌ ಮೊದಲ ಟೆಸ್ಟ್‌ ವಿನ್ನರ್?

ಈಗಲೂ ಶಾಂತಿ ಸ್ಥಾಪಿಸದಿದ್ದರೆ ಮತ್ತಷ್ಟು ವಿನಾಶವನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ರಾಷ್ಟ್ರಕ್ಕೆ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಜಗತ್ತಿನ ನಂಬರ್ ಒನ್ ಭಯೋತ್ಪಾದಕ ರಾಷ್ಟ್ರದ ಪರಮಾಣು ಬಾಂಬ್ ತಯಾರಿಕೆಯನ್ನು ತಡೆಯುವುದು ಮುಖ್ಯವಾಗಿತ್ತು. ಈ ನಿಟ್ಟಿನಲ್ಲಿ ಅಮೆರಿಕಾ ದಾಳಿ ಮಾಡಿದೆ. ಇದು ಜಾಗತಿಕ ಭದ್ರತೆಗೆ ಇದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

Exit mobile version