ಮಧ್ಯಪ್ರಾಚ್ಯ ಧಗಧಗನೇ ಉರಿದು ರೌದ್ರಾವತಾರ ತಾಳಿದೆ.. ಬಹುದೊಡ್ಡ ಶತ್ರುಗಳಾದ ಇಸ್ರೇಲ್-ಇರಾನ್ (israel-iran war)ಜಿದ್ದಿಗೆ ಬಿದ್ದು ರಣಭೀಕರ ದಾಳಿಗಳನ್ನ ನಡೆಸಿವೆ.. ಎರಡೂ ರಾಷ್ಟ್ರಗಳ ಪರಮೋಚ್ಚ ನಾಯಕರೇ ತಮ್ಮ ತಮ್ಮ ತಲೆಗಳನ್ನು ಉಳಿಸಿಕೊಳ್ಳಲು ಅಡಗುತಾಣವನ್ನು ಸೇರಿಕೊಳ್ಳುವಷ್ಟು ಉದ್ವಿಗ್ನತೆ ತೀವ್ರಗೊಂಡಿದೆ.. ಹೀಗಿರುವಾಗ ವಿಶ್ವದ ಮೂರನೇ ಮಹಾಯುದ್ಧ ಶುರುವಾಗಲಿದ್ಯಾ ಅನ್ನೋ ಚರ್ಚೆಗಳು ಎಲ್ಲೆಡೆ ಹರಿದಾಡ್ತಿವೆ.. ಅಮೆರಿಕ ಕೂಡ ಇರಾನ್‌ಗೆ ಬದುಕಲಾಗದ ಸಂದೇಶವೊಂದನ್ನ ರವಾನಿಸಿದೆ.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲ ಖಮೇನಿಗೆ (ayatullah al khomeini) ಶರಣಾಗುವಂತೆ ಟ್ರಂಪ್ (donald trump) ಈಗಾಗಲೇ ವಾರ್ನಿಂಗ್ ನೀಡಿದ್ರು.. ಆದ್ರೆ ಇದಕ್ಕೆ ಕ್ಯಾರೇ ಅನ್ನದ ಖಮೇನಿ ನಾವು ಯಾವುದೇ ಬೆದರಿಕೆಗಳಿಗೆ ಹೆದರುವುದಿಲ್ಲ.. ಇರಾನ್ ಎಂದಿಗೂ ಶರಣಾಗುವುದಿಲ್ಲ ಅಂತ ತಿರುಗೇಟು ನೀಡಿದ್ರು.. ಎಚ್ಚರಿಕೆಗಳಿಗೆ ಹೆದರುವ ರಾಷ್ಟ್ರಗಳಿಗೆ ಅಮೆರಿಕ ಈ ರೀತಿಯಾಗಿ ವಾರ್ನಿಂಗ್ ನೀಡಬೇಕು.. ನಮಗಲ್ಲ.. ಒಂದೊಮ್ಮೆ ಅಮೆರಿಕಾ (United States) ಇಸ್ರೇಲ್ ಜೊತೆ ನಿಂತ್ರೆ ಬಹಳಷ್ಟು ಹಾನಿಗಳನ್ನ ಎದುರಿಸಬೇಕಾಗುತ್ತೆ ಅಂತ ಖಮೇನಿ ಖಡಕ್ ಸಂದೇಶ ರವಾನಿಸಿದ್ದಾರೆ.. ಇದು ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನ ಇನ್ನಷ್ಟು ಕೆರಳಿಸಿದೆ.. ಹೀಗಾಗಿಯೇ ಇಸ್ರೇಲ್ ಜೊತೆ ನಿಂತು ಇರಾನ್ ನಾಶ ಮಾಡಲು ಟ್ರಂಪ್ ಪಣ ತೊಟ್ಟಿದ್ದಾರೆ ಅಂತ ಹೇಳಲಾಗ್ತಿದೆ.
ಇರಾನ್ ಮೇಲೆ ದಾಳಿ ನಡೆಸುವ ಬಗ್ಗೆ ಟ್ರಂಪ್ ಒಪ್ಪಿಕೊಳ್ಳದೇ ಹೋದ್ರು ಅವರ ಧ್ವಂಧ್ವ ಹೇಳಿಕೆಗಳು ಈಗ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.. ಖಮೇನಿ ತನ್ನ ವಾರ್ನಿಂಗ್‌ನ ತಳ್ಳಿಹಾಕಿದ್ದಾರೆ.. ಪ್ರತಿಯೊಂದಕ್ಕೂ ಯೋಜನೆ ಸಿದ್ಧವಾಗಿದೆ.. ಅತಿಶೀಘ್ರದಲ್ಲೇ ಎಲ್ಲಕ್ಕೂ ಉತ್ತರ ಸಿಗಲಿದೆ.. ನಾನು ಏನು ಮಾಡುತ್ತೇನೆ ಅನ್ನೋದು ನನಗೂ ತಿಳಿದಿಲ್ಲ.. ಯಾರಿಗೂ ತಿಳಿದಿಲ್ಲ ಅಂತ ಟ್ರಂಪ್ ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ.. ಜೊತೆಗೆ ಒಂದು ವಾರದೊಳಗೆ ಎಲ್ಲಕ್ಕೂ ಉತ್ತರ ಸಿಗಲಿದೆ ಎಂದಿದ್ದಾರೆ. ಟ್ರಂಪ್ ಇಸ್ರೇಲ್ ಜೊತೆ ಕೈಜೋಡಿಸಿ ಯುದ್ಧ ನಡೆಸಲು ತಮ್ಮ ಸಹಾಯಕರಿಗೆ ಅನುಮೋದನೆ ನೀಡಿದ್ದಾರೆ ಅಂತ ಹೇಳಲಾಗ್ತಿದೆ.. ಇದ್ರ ಜೊತೆಗೆ ಇರಾನ್‌ನಲ್ಲಿರುವ ಫೋರ್ಡೋ ಎನ್‌ರಿಚ್‌ಮೆಂಟ್ ಫೆಸಿಲಿಟಿ ಎಂಬ ಬಲಿಷ್ಠ ಬಂಕರ್ ನಾಶಪಡಿಸುವುದೇ ಅಮೆರಿಕದ ಮುಖ್ಯ ಗುರಿ ಎಂಬ ಮಾಹಿತಿ ಹೊರಬಿದ್ದಿದೆ.
ಮಿಲಿಟರಿ ಕ್ರಮಗಳ ವಿಚಾರದಲ್ಲಿ ಬಹುದೊಡ್ಡ ರಾಷ್ಟ್ರವೆನಿಸಿಕೊಂಡಿದ್ದ ಅಮೆರಿಕ ದೇಶವೇ ಇದೀಗ ರಣರಂಗಕ್ಕೆ ಕಾಲಿಟ್ಟಿದೆ ಅನ್ನೋ ವಿಚಾರಗಳು ಒಂಡು ಕಡೆಯಾದ್ರೆ.. ಅಮೆರಿಕಾ ಮಧ್ಯಪ್ರವೇಶವನ್ನು ಗಮನಿಸಿ ಮತ್ತಷ್ಟು ರಾಷ್ಟ್ರಗಳು ಇರಾನ್‌ಗೆ ಬೆಂಬಲಿಸುವ ಸಂಭವವೂ ಇದೆ.. ಹೀಗೆ ದಾಳಿಗಳು ಮುಂದುವರೆದರೆ ವಿಶ್ವದ ಮೂರನೇ ಮಹಾಯುದ್ಧಕ್ಕೆ ಘಟಿಸೋದು ಸುಳ್ಳಲ್ಲ.