Site icon BosstvKannada

ಹೃದಯಾಘಾತಕ್ಕೆ ಕೊರೋನಾ ಲಸಿಕೆ ಕಾರಣ? ಡಾ. ಸಿಎನ್ ಮಂಜುನಾಥ್ ಹಾರ್ಟ್‌ ಅಟ್ಯಾಕ್‌ ಹೆಚ್ಚಳದ ಬಗ್ಗೆ ಹೇಳಿದ್ದೇನು?

ಕರ್ನಾಟಕದಲ್ಲಿ ಹಿಂದೆಂದೂ ಕಾಣದಷ್ಟು ಹಾರ್ಟ್‌ ಅಟ್ಯಾಕ್‌ ಪ್ರಕರಣಗಳು ವರದಿ ಆಗ್ತಿವೆ. ಸಣ್ಣ ಮಕ್ಕಳಿಂದ ಹಿರಿಯರವರೆಗೆ ನಿಂತಲ್ಲೇ ಕುಸಿದು ಬೀಳುತ್ತಿದ್ದಾರೆ. ಪ್ರತಿದಿನವೂ ಒಂದಿಲ್ಲೊಂದು ಜಿಲ್ಲೆಗಳಿಂದ ಹೃದಯಾಘಾತದ ಪ್ರಕರಣಗಳು ವರದಿ ಆಗುತ್ತಲ್ಲೇ ಇವೆ. ಹಾಸನದಲ್ಲಿ ಪ್ರಕರಣಗಳು ಹೆಚ್ಚಾಗುತ್ತಲಿದ್ದು, ಜನ ಆತಂಕ್ಕೀಡಾಗಿದ್ದಾರೆ.

ಕೇವಲ ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲಿ ಹಾರ್ಟ್‌ ಅಟ್ಯಾಕ್‌ ಕೇಸ್‌ ಹೆಚ್ಚಾಗ್ತಿದೆ. ಹಾರ್ಟ್‌ ಅಟ್ಯಾಕ್‌ ಪ್ರಕರಣಗಳು ಹೆಚ್ಚಾಗೋದಿಕ್ಕೆ ಕೋವಿಡ್‌ ಲಸಿಕೆ ಕಾರಣ ಅನ್ನೋ ವದಂತಿ ಬಗ್ಗೆ ಭಾರೀ ಚರ್ಚೆಯಾಗ್ತಿದೆ.

ಇದಕ್ಕೆ ಉತ್ತರ ನೀಡಿರುವ ಹೃದ್ರೋಗ ತಜ್ಞ ಡಾ. ಸಿಎನ್ ಮಂಜುನಾಥ್ ಹಾರ್ಟ್‌ ಅಟ್ಯಾಕ್ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ. ಕೋವಿಡ್ ಪೂರ್ವದಿಂದಲೂ ಭಾರತದಲ್ಲಿ ಹಾರ್ಟ್ ಅಟ್ಯಾಕ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ 20 ವರ್ಷಗಳಿಂದಲೂ ಭಾರತದಲ್ಲಿ ಹಾರ್ಟ್ ಅಟ್ಯಾಕ್ ಸಂಖ್ಯೆ ಹೆಚ್ಚಾಗಿದೆ.

ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಈಗಾಗಲೇ Indian Council of Medical Research ಸಂಶೋಧನೆ ಮಾಡಿದೆ. ಕೋವಿಡ್ ಲಸಿಕೆಗೂ ಹಾರ್ಟ್ ಅಟ್ಯಾಕ್‌ಗೂ ಸಂಬಂಧವಿಲ್ಲ ಎಂದಿದ್ದಾರೆ. ಇನ್ನು, ಅತಿಯಾದ ಬೊಜ್ಜು, ಮಾಂಸಾಹಾರ ಸೇವನೆ, ಧೂಮಪಾನ, ಮದ್ಯಪಾನ, ಫಾಸ್ಟ್‌ಫುಡ್‌ ಸೇವನೆಯಿಂದ ಹಾರ್ಟ್‌ ಅಟ್ಯಾಕ್‌ ಸಂಖ್ಯೆಗಳು ಹೆಚ್ಚಾಗಿರಹುದು ಎಂದು ಹಲವು ತ‌ಜ್ಞರು ಅಭಿಪ್ರಾಯಪಟ್ಟಿದ್ದಾರೆ.

Exit mobile version