Site icon BosstvKannada

ಸ್ನೇಹಿತನ ಪರ ಮಾತನಾಡಿದ್ದೇ ತಪ್ಪಾ? ಇವರಿಗೆ ಮನುಷ್ಯತ್ವನೇ ಇಲ್ವಾ?

ರಾಯಚೂರು: ಸ್ನೇಹಿತನನ್ನು ಬೈದಿದ್ದನ್ನು ಪ್ರಶ್ನಿಸಿದ ವ್ಯಕ್ತಿಯನ್ನೇ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.
ಈ ಘಟನೆ ರಾಯಚೂರಿನ (Raichuru) ಜಹೀರಾಬಾದ್‌ ನ ಮಾವಿನ ಕೆರೆ ಹತ್ತಿರ ನಡೆದಿದೆ. 22 ವರ್ಷದ ವಿಶಾಲ್ ಕೊಲೆಯಾಗಿರುವ ಯುವಕ. ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ರಾಜು ಹಾಗೂ ಬಸವರಾಜ್ ಕೊಲೆ ಮಾಡಿದ್ದಾರೆಂದು ತಿಳಿದು ಬಂದಿದೆ.

ಶುಕ್ರವಾರ (ಜ.23) ತಡರಾತ್ರಿ 1 ಗಂಟೆ ವೇಳೆಗೆ ಹತ್ಯೆಗೊಳಗಾದ ಯುವಕ ತನ್ನ ಸ್ನೇಹಿತನನ್ನು ಬೈದಿದ್ದಕ್ಕೆ ಆರೋಪಿಗಳಿಗೆ ಪ್ರಶ್ನೆ ಮಾಡಿದ್ದಾನೆ. ಆಗ ಆರೋಪಿಗಳು ಹಾಗೂ ವ್ಯಕ್ತಿಯ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತೆರಳಿ, ಆರೋಪಿಗಳಿಬ್ಬರು ವಿಶಾಲ್ ನನ್ನು ಮನಬಂದಂತೆ ಥಳಿಸಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಸದರ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version