Site icon BosstvKannada

RCB Vs PBKS : ಫೈನಲ್‌ ಹೊತ್ತಿನಲ್ಲೇ ಆರ್‌ಸಿಬಿಗೆ ಆಘಾತ..! ಈ ಆಟಗಾರ ಪಂದ್ಯದಿಂದ ಔಟ್?‌

ಐಪಿಎಲ್‌ (IPL) ಸೀಸನ್‌ 18ರ ಫೈನಲ್‌ ಗೆಲ್ಲಲು ಆರ್‌ಸಿಬಿ ಹಾಗೂ ಪಂಜಾಬ್‌ (RCB Vs PBKS) ಹೈವೋಲ್ಟೇಜ್‌ ಮ್ಯಾಚ್‌ಗೆ ಕೌಂಟ್‌ಡೌನ್‌ ಶುರುವಾಗಿದೆ. ಇಂತಹ ಹೊತ್ತಿನಲ್ಲಿ ಆರ್‌ಸಿಬಿ ತಂಡಕ್ಕೆ ಆಘಾತವೊಂದು ಉಂಟಾಗಿದೆ. ಫೈನಲ್‌ ಮ್ಯಾಚ್‌ ಸನಿಹದಲ್ಲಿರುವಾಗ್ಲೇ ಆರ್‌ಸಿಬಿಯ ಪ್ರಮುಖ ಆಟಗಾರ ಅಲಭ್ಯರಾಗುವ ಸಾಧ್ಯತೆ ಇದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಫೈನಲ್‌ ಮ್ಯಾಚ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.

ಈ ನಿರ್ಣಾಯಕ ಪಂದ್ಯಕ್ಕೆ ಆರ್​ಸಿಬಿ ತಂಡದ ಹೊಡಿಬಡಿ ದಾಂಡಿಗ ಟಿಮ್ ಡೇವಿಡ್ ಅಲಭ್ಯರಾಗುವ ಸಾಧ್ಯತೆಯಿದೆ. ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಫೀಲ್ಡಿಂಗ್​ ವೇಳೆ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದ ಡೇವಿಡ್ ಸೋಮವಾರದವರೆಗೆ ಯಾವುದೇ ಅಭ್ಯಾಸ ನಡೆಸಿಲ್ಲ.

ಹೀಗಾಗಿ ಇಂದು ನಡೆಯಲಿರುವ ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಿಂದ ಸಹ ಅವರು ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಇತ್ತ ಟಿಮ್ ಡೇವಿಡ್ ಫೈನಲ್ ಪಂದ್ಯವಾಡುವ ಬಗ್ಗೆ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಕೂಡ ಖಚಿತ ಮಾಹಿತಿ ನೀಡಿಲ್ಲ.

ಡೇವಿಡ್ ಅವರ ಫಿಟ್​ನೆಸ್ ಮೇಲೆ ವೈದ್ಯರು ನಿಗಾವಹಿಸಿದ್ದು, ಮಂಗಳವಾರ ಸಂಜೆಯೊಳಗೆ ಅವರು ಆಡುವ ಪರಿಸ್ಥಿತಿಯಲ್ಲಿದ್ದರೆ ಮಾತ್ರ ಕಣಕ್ಕಿಳಿಯಲಿದ್ದಾರೆ ಅಂತಾ ತಿಳಿಸಿದ್ದಾರೆ.. ಇದು ಆರ್‌ಸಿಬಿ ಅಭಿಮಾನಿಗಳನ್ನು ಆತಂಕಕ್ಕೀಡು ಮಾಡಿದೆ..

Exit mobile version