Site icon BosstvKannada

IPL 2025 : ಫೈನಲ್‌ ಪಂದ್ಯಕ್ಕೂ ಮುನ್ನ ಅಯ್ಯರ್‌ ಹೀಗಂದಿದ್ದೇಕೆ?

IPL 2025 ರ ಕ್ವಾಲಿಫೈಯರ್-2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವ ಮೂಲಕ ಪಂಜಾಬ್ ಕಿಂಗ್ಸ್ ತಂಡ ಭರ್ಜರಿ ಎಂಟ್ರಿ ನೀಡಿದೆ. ಈ ಗೆಲುವಿನ ರೂವಾರಿ, ನಾಯಕ ಶ್ರೇಯಸ್ ಅಯ್ಯರ್ ಫೈನಲ್‌ಗೆ ಕಾಲಿಟ್ಟ ನಂತರ ತಮ್ಮ ತಂಡದ ಯಶಸ್ಸಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಅದರ ಜೊತೆಗೆ, ಪಂದ್ಯದ ನಂತರ ಆರ್‌ಸಿಬಿ ತಂಡಕ್ಕೆ ಖಡಕ್ ಸಂದೇಶವನ್ನೂ ರವಾನಿಸಿದ್ದಾರೆ.‌ ಆ ಸಂದೇಶ ಏನು ಅಂತ ಹೇಳ್ತೀವಿ ಅದಕ್ಕೂ ಮೊದಲು ಬಾಸ್‌ ಟಿವಿ ಕನ್ನಡ ಚಾನಲ್‌ ಸಬ್‌ಸ್ಕರೈಬ್‌ ಮಾಡಿ.

ಐಪಿಎಲ್ 2025 ರ ಕ್ವಾಲಿಫೈಯರ್ 2 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಶ್ರೇಯಸ್ ಅಯ್ಯರ್ ನೀಡಿದ ಅಜೇಯ 87 ರನ್‌ಗಳ ಇನ್ನಿಂಗ್ಸ್, ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿತು. ಕೇವಲ 41 ಎಸೆತಗಳಲ್ಲಿ ಮೂಡಿಬಂದ ಈ ಅಮೋಘ ಆಟ, ಶ್ರೇಯಸ್ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಸಾಮರ್ಥ್ಯಕ್ಕೆ ಉತ್ತಮ ನಿದರ್ಶನವಾಗಿದೆ. ಕಳೆದ ವರ್ಷದಲ್ಲಿ ಕ್ರಿಕೆಟ್‌ನಲ್ಲಿ ಅನೇಕ ಮಹತ್ವದ ಯಶಸ್ಸನ್ನು ಸಾಧಿಸಿರುವ ಶ್ರೇಯಸ್, ಈ ಆವೃತ್ತಿಯ ಐಪಿಎಲ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

ಈಗ ಫೈನಲ್‌ ಪಂದ್ಯಕ್ಕೂ ಮುನ್ನ ಮಾತನಾಡಿರುವ ಶ್ರೇಯಸ್‌ ಒತ್ತಡದ ಸಂದರ್ಭಗಳಲ್ಲಿ ಶಾಂತವಾಗಿರುವುದೇ ತಮ್ಮ ಯಶಸ್ಸಿನ ಮಂತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಪರಿಸ್ಥಿತಿ ದೊಡ್ಡದಾದಷ್ಟೂ, ನೀವು ಶಾಂತವಾಗಿದ್ದರೆ ಫಲಿತಾಂಶಗಳು ಹೆಚ್ಚಿರುತ್ತವೆ. ಇಂದು ಅದಕ್ಕೆ ಒಂದು ಪರಿಪೂರ್ಣ ಉದಾಹರಣೆಯಾಗಿದೆ, ಒತ್ತಡದಲ್ಲಿಯೂ ಸಹ ತಮ್ಮ ಸಹಜ ಆಟದ ಮೇಲೆ ಗಮನ ಹರಿಸಿದ್ದೇ ಈ ಗೆಲುವಿಗೆ ಕಾರಣ ಎಂದು ಶ್ರೇಯಸ್ ಒತ್ತಿ ಹೇಳಿದರು.

ಕೆಲಸ ಇನ್ನೂ ಪೂರ್ಣಗೊಂಡಿಲ್ಲ ಎಂದು ಶ್ರೇಯಸ್ ಅಯ್ಯರ್ ಹೇಳುವ ಮೂಲಕ ಫೈನಲ್‌ನಲ್ಲಿರುವ ಆರ್‌ಸಿಬಿ ತಂಡಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಪಂದ್ಯಕ್ಕೂ ಮುನ್ನವೇ ತಾವು ಆಟಗಾರರಿಗೆ ಆಕ್ರಮಣಕಾರಿಯಾಗಿ ಆಡಲು ಸೂಚಿಸಿದ್ದೆ. ನಾನು ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಗಿತ್ತು. ಇನ್ನೊಂದು ತುದಿಯಿಂದ ಬ್ಯಾಟ್ಸ್‌ಮನ್‌ಗಳು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಸಧ್ಯ ಫೈನಲ್ ಕದನಕ್ಕೂ ಮುನ್ನ ಆರ್‌ಸಿಬಿಯ ಹೃದಯ ಬಡಿತ ತಪ್ಪಿದೆ ಎಂದು ಶ್ರೇಯಸ್ ಅಯ್ಯರ್ ನೀಡಿದ ಹೇಳಿಕೆ ಈಗ ಭಾರಿ ವೈರಲ್ ಆಗಿದೆ.

Exit mobile version