Site icon BosstvKannada

ಇಂಡೋ-ಆಂಗ್ಲೋ ಕದನ : ದಾಖಲೆಯಲ್ಲೂ ಮೇಲುಗೈ ಸಾಧಿಸಿದ ಟೀಂ ಇಂಡಿಯಾ!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 2-2ರೊಂದಿಗೆ ಸಮ ಮಾಡಿಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಕೊನೆಯ ಟೆಸ್ಟ್‌ನ ಕೊನೆಯ ದಿನ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡುವ ಮೂಲಕ 6 ರನ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿದೆ. ಆದ್ರೆ ಈ ಸರಣಿ ಹಲವು ದಾಖಲೆಗಳಿಗೆ ಸಾಕ್ಷಿಯಾಯ್ತು.

96 ವರ್ಷಗಳ ದಾಖಲೆ ಸಮ

ವಿಶೇಷ ಎಂದರೆ, ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯು ಒಂದು ಐತಿಹಾಸಿಕ ದಾಖಲೆಯನ್ನು ಸೃಷ್ಟಿಸಿದೆ. ಹೌದು, ಈ ಸರಣಿಯಲ್ಲಿ ಎರಡೂ ತಂಡಗಳು ಒಟ್ಟಿಗೆ 14 ಬಾರಿ 300 ರನ್‌ಗಳಿಗಿಂತ ಹೆಚ್ಚು ರನ್‌ಗಳಿಸಿವೆ. ಇದರ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ಸರಣಿಯಲ್ಲಿ ಅತಿ ಹೆಚ್ಚು ಬಾರಿ 300+ ರನ್‌ಗಳನ್ನು ಸಾಧಿಸಿದ 96 ವರ್ಷಗಳ ದಾಖಲೆಯನ್ನು ಈ ಸರಣಿ ಸಮನಾಗಿಸಿದೆ. 1928-29ರಲ್ಲಿ ನಡೆದ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಒಟ್ಟಿಗೆ 14 ಬಾರಿ 300+ ರನ್‌ಗಳನ್ನು ಸಾಧಿಸಿದ್ದು ದಾಖಲೆಯಾಗಿತ್ತು. ಈ ದಾಖಲೆಯನ್ನು ಈಗ ಭಾರತ-ಇಂಗ್ಲೆಂಡ್ ಸರಣಿ ಸಮನಾಗಿಸಿದೆ.

ಜುಲೈ 20ರಂದು ಲೀಡ್ಸ್‌ನಲ್ಲಿ ಆರಂಭವಾದ ಈ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೇ ಎರಡೂ ತಂಡಗಳು ಎಲ್ಲಾ ನಾಲ್ಕು ಇನಿಂಗ್ಸ್‌ಗಳಲ್ಲೂ 300 ರನ್‌ಗಳನ್ನು ದಾಟಿದವು. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಮೂರು ಬಾರಿ, ಮಾಂಚೆಸ್ಟರ್ ಮತ್ತು ಓವಲ್ ಪಂದ್ಯಗಳಲ್ಲಿ ತಲಾ ಎರಡು ಬಾರಿ 300+ ರನ್‌ಗಳು ದಾಖಲಾಗಿತ್ತು. ಉಳಿದಂತೆ ಓವಲ್ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು 63ನೇ ಓವರ್‌ನಲ್ಲಿ 300 ರನ್‌ಗಳನ್ನು ದಾಟಿದಾಗ ಈ ಐತಿಹಾಸಿಕ ದಾಖಲೆ ನಿರ್ಮಾಣವಾಯ್ತು.

ಇನ್ನು, ಈ ಸರಣಿಯಲ್ಲಿ ಭಾರತ ತಂಡವೊಂದೇ 8 ಬಾರಿ 300 ರನ್‌ಗಳಿಗಿಂತ ಹೆಚ್ಚು ಸಾಧಿಸಿದೆ. ಒಂದು ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಬಾರಿ 350+ ರನ್‌ಗಳನ್ನು 7 ಬಾರಿ ಸಾಧಿಸಿದ ತಂಡವಾಗಿ ಭಾರತ ಹೊಸ ದಾಖಲೆ ಸೃಷ್ಟಿಸಿದೆ.

Exit mobile version