ಬೆಂಗಳೂರು: ಕಳೆದ ಐದಾರೂ ದಿನಗಳಿಂದ ದೇಶದಲ್ಲಿ ಇಂಡಿಗೋ (Indigo) ವಿಮಾನಯಾನ ಸಂಸ್ಥೆಯಲ್ಲಿ ಸಮಸ್ಯೆ ಉಂಟಾಗಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಹಲವು ವಿಮಾನಯಾನ ಸಂಸ್ಥೆಗಳು ಭಾರೀ ಲಾಭ ಮಾಡಿಕೊಳ್ಳಲು ಪ್ರಯಾಣಿಕರ ಸುಲಿಗೆಗೆ ಮುಂದಾಗಿವೆ. ಈ ಮಧ್ಯೆ ಕಾಶ್ಮೀರದ ಬಾರಾಮುಲ್ಲಾದಿಂದ ಬೆಂಗಳೂರಿಗೆ 5 ವರ್ಷದ ಬಾಲಕಿ ಥೆನ್ ನಲ್ ಅಶ್ವಿನ್ ಒಬ್ಬಳೇ ಪ್ರಯಾಣಿಸಿದ್ದಾಳೆ. ಈ ಸುದ್ದಿ ಕೇಳಿ ಜನ ಆಶ್ಚರ್ಯ ಪಡುತ್ತಿದ್ದಾರೆ.
ಬಾರಾಮುಲ್ಲಾದಿಂದ ಬೆಂಗಳೂರಿಗೆ (Bengaluru) ತನ್ನ ಅಜ್ಜಿಯ ಮನೆಗೆ ಥೆನ್ ನಲ್ ಮಾವ ಆದರ್ಶ್ ಜೊತೆ ಬರಬೇಕಿತ್ತು. ಆದರೆ ಡಿ. 5 ರಂದು ಟಿಕೆಟ್ ಬುಕಿಂಗ್ ಕ್ಯಾನ್ಸಲ್ ಆಗಿತ್ತು. ನಂತರ ಡಿ.6 ರಂದು ಕೂಡ ಟಿಕೆಟ್ ಕ್ಯಾನ್ಸಲ್ ಆಗಿದೆ. ಹೀಗಾಗಿ ಕೇರ್‌ಟೇಕರ್ ಜೊತೆ ಥೆನ್ ನಲ್ ಬೆಂಗಳೂರಿಗೆ ಬಂದಿದ್ದಾಳೆ.
ಬಾರಾಮುಲ್ಲಾನಲ್ಲಿ ಹೆಚ್ಚಿನ ಚಳಿಯಿದ್ದು ಮಗುವಿನ ಆರೋಗ್ಯ ಸ್ಥಿತಿ ಹಾಳಾಗಬಾರದೆಂಬ ಕಾರಣಕ್ಕೆ ಕುಟುಂಬಸ್ಥರು ಈ ನಿರ್ಧಾರ ಕೈಗೊಂಡಿದ್ದರು ಎನ್ನಲಾಗಿದೆ.. ಥೆನ್ ನಲ್ ಕರೆದುಕೊಂಡು ಬರಲು ಅವಳ ಮಾವ ಬುಕ್ ಮಾಡಿದ ಎರಡು ಕಡೆಯ ಫ್ಲೈಟ್ ಟಿಕೆಟ್ ರೇಟ್ ಹಾಗೂ ಮತ್ತೊಮ್ಮೆ ಬುಕ್ ಮಾಡಿದ ಮೂರು ಟಿಕೆಟ್ ಹಾಗೂ ಕೇರ್ ಟೇಕರ್‌ಗೆ ನೀಡಿದ ಹಣ ಸೇರಿ ಒಟ್ಟು 50 ಸಾವಿರ ರೂ. ಹಣವನ್ನು ಕೂಡ ಕುಟುಂಬಸ್ಥರು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ವಿಮಾನಯಾದ ಇಂಡಿಗೋ ಸಂಸ್ಥೆಯ ಈ ತೊಂದರೆಯಿಂದಾಗಿ ಪ್ರಯಾಣಿಕರು ಸಾಕಷ್ಟು ಸಂಕಟ ಪಡುತ್ತಿದ್ದು, ಸದ್ಯದಲ್ಲಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡುತ್ತಿದ್ದಾರೆ.

