Site icon BosstvKannada

ಏಷ್ಯಾಕಪ್‌ನಲ್ಲಿ ಭಾರತಕ್ಕೆ ಮೊದಲ ಪಂದ್ಯ : ಎದುರಾಳಿ UAE ಸವಾಲನ್ನ ಎದುರಿಸಲಿದೆ ಟೀಂ ಇಂಡಿಯಾ!

ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ ಕ್ರಿಕೆಟ್‌ ಅಭಿಮಾನಿಗಳ ಬಿಸಿ ಹೆಚ್ಚಿಸಿದೆ. ಏಷ್ಯಾ ಕಪ್‌ ಗೆಲ್ಲುವ ತವಕದಲ್ಲಿರುವ ಟೀಂ ಇಂಡಿಯಾ ಇಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ. ದುಬೈನಲ್ಲಿ ನಡೆಯಲಿರುವ ಮೊದಲ ಕದನದಲ್ಲಿ ಟೀಮ್​ ಇಂಡಿಯಾ ಯುಎಇ ಸವಾಲನ್ನ ಎದುರಿಸಲಿದೆ.

ಮುಂದಿನ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಬೇಕಾಗಿರುವುದರಿಂದ ಈ ಪಂದ್ಯವು ಭಾರತ ತಂಡಕ್ಕೆ ಮಹತ್ವದ್ದಾಗಿದೆ. ಏಷ್ಯಾಕಪ್‌ನಲ್ಲಿ ಮೊದಲ ಬಾರಿಗೆ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ ಮುನ್ನಡೆಸುತ್ತಿದ್ದಾರೆ. ಮುಖ್ಯ ಕೋಚ್‌ ಆಗಿರುವ ಗೌತಮ್‌ ಗಂಭೀರ್‌, ಭಾರತ ತಂಡದಲ್ಲಿ ಹೆಚ್ಚು ಆಲ್‌ರೌಂಡರ್‌ಗಳಿಗೆ ಆದ್ಯತೆ ನೀಡಿದ್ದಾರೆ.

ಬ್ಯಾಟಿಂಗ್ ಅನ್ನು ಬಲಪಡಿಸಲು ಮತ್ತು ಎಂಟನೇ ಕ್ರಮಾಂಕದವರೆಗೆ ಉತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊಂದಲು ಆಲ್‌ರೌಂಡರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಅಂತಾ ಹೇಳಲಾಗ್ತಿದೆ. ಇನ್ನು ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಹಾಗೂ ಜಿತೇಶ್ ಶರ್ಮಾ ಆಯ್ಕೆಯ ಸಮಸ್ಯೆ ಸದ್ಯಕ್ಕೆ ಬಗೆಹರಿದಿದೆ. ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್‌ಗಿಂತ ಜಿತೇಶ್ ಅವರ ಫಿನಿಷರ್ ಪಾತ್ರಕ್ಕೆ ಆದ್ಯತೆ ಸಿಗುವುದು ಖಚಿತವಾಗಿದೆ ಅಂತಾ ಹೇಳಲಾಗ್ತಿದೆ.

Read Also : ಏಷ್ಯಾಕಪ್‌ ಕಾದಾಟಕ್ಕೆ ಕ್ಷಣಗಣನೆ.. ಮೂವರ ಮೇಲೆ ಎಲ್ಲರ ಕಣ್ಣು!

Exit mobile version