ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಮತ್ತಷ್ಟು ಕುತೂಹಲ ಮೂಡಿಸಿದೆ. ನಾಲ್ಕನೇ ಪಂದ್ಯದಲ್ಲಿ ಸೋಲುವ ಹಂತದಲ್ಲೂ ಭಾರತ ಪಂದ್ಯವನ್ನು ಡ್ರಾ ಮಾಡಿಕೊಂಡ ಪರಿಣಾಮ ಸರಣಿ ಫಲಿತಾಂಶದ ಮೇಲಿದ್ದ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಆದ್ರೆ ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್‌ನ ಕೀಳು ಮನಸ್ಥಿತಿ ಅನಾವರಣವಾಗಿದೆ.
ನಾಲ್ಕನೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 138 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 386 ರನ್ ಗಳಿಸಿತ್ತು. 5ನೇ ದಿನದ ಆಟ ಕೊನೆಯಾಗಲು ಇನ್ನೂ 15 ಓವರ್ ಬಾಕಿ ಇತ್ತು. ಇತ್ತ ಜಡೇಜಾ 89 ರನ್, ಸುಂದರ್ 80 ರನ್ ಗಳಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಾ ಇದ್ರು.. ಆದ್ರೆ ಎಲ್ಲಿ ಇವರಿಬ್ಬರು ಶತಕ ಸಿಡಿಸಿ ಅವರ ಆತ್ಮವಿಶ್ವಾಸ ಹೆಚ್ಚುತ್ತೋ ಅನ್ನೋ ದುರಾಲೋಚನೆಯಿಂದ ಪಂದ್ಯವನ್ನು ಡ್ರಾ ಮಾಡುವ ಆಫರ್ ಕೊಡ್ತಾರೆ..
ಆದ್ರೆ ಇದಕ್ಕೆ ಕ್ಯಾರೇ ಅನ್ನದ ಜಡ್ಡು ಹಾಗೂ ವಾಷಿಂಗ್‌ಟನ್ ಇಬ್ಬರು ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.. ಭಾರತವನ್ನು ಸೋಲಿನ ಸುಳಿಯಿಂದ ಪಾರು ಮಾಡಿದ್ರು. ಇದ್ರಿಂದಾಗಿ ಇಂಗ್ಲೆಂಡ್ ಆಟಗಾರರು ಭಾರೀ ಮುಖಭಂಗ ಅನುಭವಿಸಿದ್ದಾರೆ. ಸದ್ಯ ಐದನೇ ಹಾಗೂ ಕೊನೆಯ ಪಂದ್ಯ ಅತ್ಯಂತ ನಿರ್ಣಾಯಕವಾಗಿದ್ದು ಭಾರೀ ಕುತೂಹಲ ಮೂಡಿಸಿದೆ.

