India Pakistan War: ಭಾರತ & ಪಾಕಿಸ್ತಾನ ಮಧ್ಯೆ ಇರುವ ಯುದ್ಧದ ಭೀತಿ ಹಾಗೂ ಉಧ್ವಿಗ್ನತೆ ಕುರಿತು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಪಾಕಿಸ್ತಾನದ ಉಗ್ರರು ನಮ್ಮ ಪ್ರವಾಸಿಗರ ಮೇಲೆ ಏಕಾಏಕಿ ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ವೈಮಾನಿಕ ದಾಳಿ ಪ್ರಾರಂಭ ಆಯ್ತು.. ಯುದ್ಧ ಅನ್ನೋದಕ್ಕಿಂತ ಹೆಚ್ಚಾಗಿ ಪ್ರಧಾನ ಮಂತ್ರಿ ಹಾಗೂ ರಕ್ಷಣಾ ಸಚಿವರು, ಹಲವಾರು ಸಭೆಗಳನ್ನು ಮಾಡಿ. ಉಗ್ರ ಚಟುವಟಿಕೆಗೆ ಅಂತಿಮ ಇತಿಶ್ರೀ ಹಾಡಬೇಕು ಎಂಬ ಹಿನ್ನೆಲೆಯಲ್ಲಿ ನಮ್ಮ ದೇಶದ ಮೇಲೆ ಪಾಕಿಸ್ತಾನದ ಬೆಂಬಲದೊಂದಿಗೆ ಉಗ್ರರು ಆಕ್ರಮಣ ನಡೆಸಿದರು.
ನಮ್ಮ ದೇಶದ ಇಮೆಜ್ ಗೆ ದಕ್ಕೆ ಬರಬಾರದಂತೆ, ಪ್ರಧಾನ ಮಂತ್ರಿ ಹಾಗೂ ಅಧಿಕಾರಿಗಳು ತೆಗೆದುಕೊಂಡ ನಿರ್ಧಾರ ಉಗ್ರರಿಗೆ ಶಿಕ್ಷೆ ಕೊಡಬೇಕು ಎಂಬ ದೃಷ್ಟಿಯಿಂದ ನಮ್ಮ ಸೈನಿಕರು ದೇಶಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ.. ಸೈನಿಕರು ಯಶಸ್ವಿಯಾಗಿ ಕೆಲಸ ಮಾಡಿದ್ದಲ್ಲದೇ, ಪಾಕಿಸ್ತಾನ ಶರಣಾಗುವಂತೆ ಮಾಡಿದ್ದಾರೆ ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ(India Pakistan War) ಎನ್ನುವ ಬದಲಾಗಿ, ಪಾಕಿಸ್ತಾನಕ್ಕೆ ಮುಖಭಂಗ ಇದು. ಪಾಕಿಸ್ತಾನದ ಮೇಲೆ ಮುಂದಿನ ದಿನಗಳಲ್ಲಿ ಆಗುವ ಅನಾಹುತ ಹಿನ್ನೆಲೆ ಪಾಕಿಸ್ತಾನಕ್ಕೆ ನಡುಕ ಉಂಟಾಗಿದೆ. ಮಧ್ಯಸ್ಥಿಕೆ ಬಗ್ಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮಾತಾಡಿದ್ದಾರೆ.ನಾವು ಇಲ್ಲಿಯವರೆಗೆ ಯಾವುದೇ ಮಧ್ಯಸ್ಥಿಕೆಗೆ ಅವಕಾಶ ಕೊಟ್ಟಿಲ್ಲ.
ಪಿಓಕೆ ವಿಚಾರದಲ್ಲಿ ನಾವು ಯಾವುದೇ ಮಧ್ಯಸ್ಥಿಕೆಗೆ ಅವಕಾಶ ಕೊಟ್ಟಿಲ್ಲ.ಇವತ್ತು ಸಹ ಯಾವುದೇ ಥರ್ಡ್ ಪಾರ್ಟಿ ನ ಮಧ್ಯಸ್ಥಿಕೆ ಇಟ್ಟುಕೊಳ್ಳಲು ಪ್ರಶ್ನೆಯೇ ಇಲ್ಲ. ನಮಗೆ ಶಕ್ತಿ ಇದೆ ಎಂದು ಮೋದಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಇಂದು ನಡೆಯಬೇಕಿದ್ದ ಡಿಜಿಎಂಒಗಳ ಸಭೆ ಮುಂದೋಗಿದೆ ಎಂಬ ಮಾಹಿತಿ ಇದೆ. ನೋಡೋಣ ಏನಾಗುತ್ತೆ ಅಂತ ಗೊತ್ತಾಗುತ್ತದೆ ಎಂದು ಹೇಳಿದರು.
ಕದನ ವಿರಾಮ ಬೇಡವಾಗಿತ್ತು, ವಾರ್ ನಡೆಯಬೇಕಿತ್ತು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೇಂದ್ರಸಚಿವರು, ಇಲ್ಲಿ ಎರಡೂ ರೀತಿಯ ಅಭಿಪ್ರಾಯ ಇದೆ. ಪಾಕಿಸ್ತಾನವನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕಾದರೆ ಯುದ್ಧ ಆಗಬೇಕಿತ್ತು ಎಂಬುದು ಒಂದು ವರ್ಗದ ಜನರ ಅಭಿಪ್ರಾಯ. ನಮಗೆ ಆಗುವ ಪ್ರಾಣಹಾನಿ ಇರಬಹುದು. ನಮ್ಮ ಯೋಧರ ಪ್ರಾಣಹಾನಿ ವಿಚಾರ ಇರಬಹುದು.
Also Read: Operation Sindoor : ಆಪರೇಷನ್ ಸಿಂಧೂರ್ ಕುರಿತು ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಸೇನಾಧಿಕಾರಿಗಳು
ನಾವು ನಮ್ಮ ಶಕ್ತಿ ಇದೆ ಅಂತ ಹೇಳಿ ದೊಡ್ಡ ಮಟ್ಟದಲ್ಲಿ ಇನ್ನೊಂದು ದೇಶದ ಮೇಲೆ ಗದಾಪ್ರಹಾರ ಮಾಡಿದ್ರೆ. ಉಕ್ರೇನ್ ಹಾಗೂ ರಷ್ಯಾ ದೇಶವನ್ನು ನೋಡ್ತಿದ್ದೇವೆ. ಎರಡ ದೇಶಗಳು ಯುದ್ದ ಮಾಡಿ ಏನ್ ಸಾಧನೆ ಮಾಡ್ತಿದೆ..? ಇಲ್ಲಿ ಪಾಕಿಸ್ತಾನ ಪಾಠ ಕಲಿಯಬೇಕು. ವಿಶ್ವಕ್ಕೆ ಒಂದು ಸಂದೇಶವನ್ನು ಪ್ರಧಾನಿ ಮೋದಿ ಕೊಟ್ಟಿದ್ದಾರೆ. ಅಮೆರಿಕದ ನೇತೃತ್ವದಲ್ಲಿ ಕದನ ವಿರಾಮ ಸಭೆ ನಡೆದರು ಪಾಕ್ ಮತ್ತೆ ಪುಂಡಾಟ ಮುಂದುವರಿಸಿದೆ. ಪಾಕಿಸ್ತಾನ ಏನೇ ಉಪಟಳ ಕೊಟ್ರು.. ಅಂತಿಮವಾಗಿ ಪಾಕಿಸ್ತಾನಕ್ಕೆ ದೊಡ್ಡ ಮಟ್ಟದ ಪೆಟ್ಟು ಬೀಳುತ್ತದೆ. ಎರಡು ದಿನ ನಡೆದ ಯುದ್ಧದಲ್ಲಿ ಭಾರತದ ಶಕ್ತಿಯನ್ನು ನಮ್ಮ ಸೈನಿಕರು ತೋರಿಸಿದ್ದಾರೆ. ಪಾಕಿಸ್ತಾನ ಈಗ ಎಚ್ಚೆತ್ತುಕೊಳ್ಳದಿದ್ದರೆ ಪಾಕಿಸ್ತಾನ ಸಂಪೂರ್ಣ ಸರ್ವನಾಶ ಆಗಲಿದೆ ಎಂದರು.

