BosstvKannada

India-England Match: ಇಂಡಿಯಾ-ಇಂಗ್ಲೆಂಡ್‌ ಮ್ಯಾಚ್‌ ಈ RCB ಸ್ಟಾರ್ಸ್‌ ಮೇಲೆಯೇ ಫ್ಯಾನ್ಸ್‌ ಕಣ್ಣು!

ಇಂದು ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್‌ India-England)ನಡುವಿನ ಮೊದಲ ಟಿ-ಟ್ವೆಂಟಿ ಪಂದ್ಯಕ್ಕೆ ಎರಡೂ ತಂಡಗಳು ರೆಡಿಯಾಗಿವೆ. 5 ಮ್ಯಾಚ್‌ಗಳ ಈ ಸರಣಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಬಗ್ಗು ಬಡಿಯಲು ಸೂರ್ಯಕುಮಾರ್‌ ಯಾದವ್‌(Suryakumar Yadav) ನೇತೃತ್ವದ ಟೀಮ್‌ ಇಂಡಿಯಾ(Team India) ಯುವ ಪಡೆ ತಯಾರಿ ಮಾಡಿಕೊಂಡಿದೆ. ಕೋಲ್ಕತ್ತದ ಈಡನ್‌ ಗಾರ್ಡನ್‌ನಲ್ಲಿ ನಡೆಯೋ ಈ ಮ್ಯಾಚ್‌ಗೆ ಆಡುವ 11 ಆಟಗಾರರ ಹೆಸರನ್ನು ಇಂಗ್ಲೆಂಡ್‌ ಈಗಾಗಲೇ ಫೈನಲ್‌ ಮಾಡಿದೆ. ಅದರಲ್ಲಿ ಮೂವರು ಆರ್‌ಸಿಬಿ ಆಟಗಾರರೇ ಇದ್ದು ಆರ್‌ಸಿಬಿ(RCB) ಅಭಿಮಾನಿಗಳಂತೂ ಇವರ ಆಟ ನೋಡೋಕೆ ಕಾಯ್ತಿದ್ದಾರೆ

ಈಗಾಗಲೇ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಸೇರಿ ಹಲವು ಟೂರ್ನಮೆಂಟ್‌ಗಳನ್ನು ಗೆದ್ದು ಟೀಮ್‌ ಇಂಡಿಯಾ (Team India) ಜೋಶ್‌ನಲ್ಲಿದೆ. ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌(Suryakumar Yadav) ಮಾತ್ರವಲ್ಲದೆ ಹಾರ್ದಿಕ್‌ ಪಾಂಡ್ಯಾ, ಸಂಜು ಸ್ಯಾಮ್ಸನ್‌, ತಿಲಕ್‌ ವರ್ಮಾ, ಅಭಿಶೇಕ್‌ ಶರ್ಮಾ, ಅಕ್ಷರ್‌ ಪಟೇಲ್‌, ಅರ್ಶದೀಪ್‌ ಸಿಂಗ್‌ ಹೀಗೆ ಎಲ್ಲ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಯುವ ಆಟಗಾರರ ಪರ್ಫಾರ್ಮೆನ್ಸ್‌ ಮೇಲೆ ಕೋಚ್‌ ಗಂಭೀರ್‌ ಕಣ್ಣಿಟ್ಟು ಮಾರ್ಗದರ್ಶನ ಮಾಡ್ತಿದ್ದಾರೆ. ಆದ್ರೆ, ಇಂಗ್ಲೆಂಡ್‌ ಪರಿಸ್ಥಿತಿ ಭಿನ್ನವಾಗಿದೆ. ಕಳೆದ 11 ವರ್ಷಗಳಿಂದ ಆಂಗ್ಲರ ವಿರುದ್ಧ ಟಿ 20ಯಲ್ಲಿ ಟೀಮ್‌ ಇಂಡಿಯಾ ಪಾರುಪತ್ಯ ಮೆರೆಯುತ್ತಿದೆ. ಹಾಗಾಗಿ ಈ ಬಾರಿ ಗೆಲ್ಲುವ ಹಠದೊಂದಿಗೆ ಕೋಚ್‌ ಬ್ರೆಂಡನ್‌ ಮೆಕ್ಲಮ್‌ ಮತ್ತು ಕ್ಯಾಪ್ಟನ್‌ ಜೋಶ್‌ ಬಟ್ಲರ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೆಚ್ಚಿನ ಯುವ ಆಟಗಾರರನ್ನೇ ಹೊಂದಿರುವ ಈ ಟೀಮ್‌ನಲ್ಲಿರುವವರೆಲ್ಲರೂ ಟಿ 20 ಸ್ಪೆಷಲಿಸ್ಟ್‌ಗಳೇ. ಹ್ಯಾರಿ ಬ್ರೂಕ್‌, ಜೋಫ್ರಾ ಅರ್ಚರ್‌, ಮಾರ್ಕ್‌ ವುಡ್‌ರಂತ ಅನುಭವಿ ಆಟಗಾರರಿದ್ರೂ ಹೆಚ್ಚಿನವರ ಕಣ್ಣು ನೆಟ್ಟಿರೋದು ಇಂಗ್ಲೆಂಡ್‌ ಟೀಮ್‌ನಲ್ಲಿರೋ ಮೂವರು ಆರ್‌ಸಿಬಿ ಪ್ಲೇಯರ್ಸ್‌ ಮೇಲೆಯೇ!

India-England Match

ಓಪನರ್‌ ಫಿಲ್‌ ಸಾಲ್ಟ್‌, ಆಲ್‌ರೌಂಡರ್‌ ಲಿಯಾಮ್‌ ಲಿವಿಂಗ್‌ಸ್ಟೋನ್‌, ಟಾಪ್‌ ಆರ್ಡರ್‌ ಬ್ಯಾಟರ್‌ ಜಾಕೋಬ್‌ ಬೆಥೆಲ್‌ ಈ ಬಾರಿ ಆರ್‌ಸಿಬಿ ಸೇರಿರುವ ಇಂಗ್ಲೆಂಡ್‌ ಸ್ಟಾರ್‌ಗಳು. ಈ ಮೂವರೂ ಹೊಡಿ ಬಡಿ ಆಟದಲ್ಲಿ ಎಕ್ಸ್‌ಪರ್ಟ್‌ ಆಗಿರೋದ್ರಿಂದ ಇವರ ಮೇಲೆ ಇಂಗ್ಲೆಂಡ್‌ ತಂಡ ಭಾರಿ ನಿರೀಕ್ಷೆ ಇಟ್ಕೊಂಡಿದೆ. ಆದ್ರೆ ಈ ಬಾರಿಯಾದ್ರೂ ಕಪ್‌ ಗೆಲ್ಲಲೇಬೇಕು ಅನ್ನೋ ಆಸೆ ಹೊಂದಿರೋ ಆರ್‌ಸಿಬಿ ಅಭಿಮಾನಿಗಳು ಮಾತ್ರ ಈ ಮೂವರು ಆರ್‌ಸಿಬಿ ಪ್ಲೇಯರ್ಸ್‌ಗಳ ಆಟ ನೋಡೋಕೆ ಕಾತರದಿಂದ ಕಾಯ್ತಾ ಇದ್ದಾರೆ.

Exit mobile version