ಬೀಜಿಂಗ್: ಭಾರತ ಮತ್ತು ಪಾಕಿಸ್ತಾನ (India-Pakistan) ಮಧ್ಯೆ ನಡೆಯುತ್ತಿದ್ದ ಯುದ್ಧ ನಿಲ್ಲಿಸಿದ್ದು ನಾನೇ ಅಂತಾ ಇತ್ತೀಚೆಗಷ್ಟೇ ಟ್ರಂಪ್ (Donald Trump) ಬಾಯಿ ಬಾಯಿ ಬಡಿದುಕೊಂಡಿದ್ದರೂ ಇದಕ್ಕೆ ಭಾರತ ತಿರುಗೇಟು ಕೊಟ್ಟಿತ್ತು. ಈಗ ಚೀನಾ ಮಧ್ಯೆ ಪ್ರವೇಶಿಸಿದ್ದು, ಯುದ್ಧ ನಿಲ್ಲಿಸಿದ್ದು ನಾನು ಅಂತಾ ಹೇಳಿದೆ.
ಚೀನಾದ (China) ವಿದೇಶಾಂಗ ಸಚಿವ ವಾಂಗ್ ಯಿ, ಮೇ ತಿಂಗಳಲ್ಲಿ ಭಾರತ-ಪಾಕಿಸ್ತಾನ ಉದ್ವಿಗ್ನತೆ ಶಮನಕ್ಕೆ ಚೀನಾ ಮಧ್ಯಸ್ಥಿಕೆ ವಹಿಸಿತ್ತು ದಿದ್ದಾರೆ. ಟ್ರಂಪ್ ಯುದ್ಧದ ನಿಲ್ಲಿಸಿದ್ದರ ಬಗ್ಗೆ ಹೇಳಿಕೆ ನೀಡಿದ ನಂತರ ಭಾರತ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ದೃಢವಾಗಿ ತಿರಸ್ಕರಿಸಿತ್ತು. ನೇರ ದ್ವಿಪಕ್ಷೀಯ ಸಂವಹನದ ಮೂಲಕ ಕದನ ವಿರಾಮವನ್ನು ಸಾಧಿಸಲಾಗಿದೆ ಎಂದು ಭಾರತ ಸ್ಪಷ್ಟಪಡಿಸಿದರೂ, ಈಗ ಎರಡೂ ರಾಷ್ಟ್ರಗಳು ತಮ್ಮ ಉದ್ಧಟತನದ ಹೇಳಿಕೆ ನೀಡುತ್ತಿವೆ.
ಇತ್ತೀಚೆಗೆ ಸ್ಥಳೀಯ ಯುದ್ಧಗಳು ಮತ್ತು ಗಡಿಯಾಚೆಗಿನ ಘರ್ಷಣೆಗಳು ಹೆಚ್ಚಾಗಿ ಭುಗಿಲೆದ್ದಿವೆ. ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆ ಹರಡುತ್ತಲೇ ಇತ್ತು. ಶಾಶ್ವತವಾದ ಶಾಂತಿಯನ್ನು ನಿರ್ಮಿಸಲು, ನಾವು ವಸ್ತುನಿಷ್ಠ ಮತ್ತು ನ್ಯಾಯಯುತ ನಿಲುವನ್ನು ತೆಗೆದುಕೊಂಡಿದ್ದೇವೆ. ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಿದ್ದೇವೆ ಎಂದು ಬೀಜಿಂಗ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಪರಿಸ್ಥಿತಿ ಮತ್ತು ಚೀನಾದ ವಿದೇಶಾಂಗ ಸಂಬಂಧಗಳ ಕುರಿತಾದ ವಿಚಾರ ಸಂಕಿರಣದಲ್ಲಿ ಚೀನಾ ವಿದೇಶಾಂಗ ಸಚಿವ ಮಾತನಾಡಿದ್ದಾರೆ.
ಉತ್ತರ ಮ್ಯಾನ್ಮಾರ್, ಇರಾನಿನ ಪರಮಾಣು ಸಮಸ್ಯೆ, ಪಾಕಿಸ್ತಾನ ಮತ್ತು ಭಾರತದ ನಡುವಿನ ಉದ್ವಿಗ್ನತೆ, ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ಸಮಸ್ಯೆಗಳು ಮತ್ತು ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವೆ ನಡೆಯುತ್ತಿದ್ದ ಸಂಘರ್ಷವನ್ನು ನಿಲ್ಲಿಸಲು ಮಧ್ಯಸ್ಥಿಕೆ ವಹಿಸಿದ್ದೇವೆಂದು ಕೂಡ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಮೇ 7 ರಂದು ಪ್ರಾರಂಭವಾದಾಗ ಎರಡೂ ದೇಶಗಳ ಸೇನೆಗಳ ಡಿಜಿಎಂಗಳ ನೇರ ಮಾತುಕತೆಯ ನಂತರ ಸಂಘರ್ಷ ನಿಲ್ಲಿಸಲಾಗಿತ್ತು. ಆದರೆ, ಚೀನಾ ಮತ್ತು ಅಮೆರಿಕ ತಮ್ಮ ಉದ್ಧಟತನದ ಹೇಳಿಕೆಯನ್ನು ನೀಡುತ್ತಿವೆ.

