BosstvKannada

ಊಟಕ್ಕಿಂತ ಮುಂಚೆ ಇದನ್ನ ತಿಂದ್ರೆ 99% ಕಾಯಿಲೆಗಳು ದೂರ

ಈಗಿನ ನಮ್ಮ ಲೈಫ್‌ಸ್ಟೈಲ್‌ ಯಾವ್‌ ಥರ ಆಗಿದೆ ಅಂದ್ರೆ ಕೈತುಂಬಾ ಸಂಬಳ ಬರ್ತಿದ್ರೂ ಕೂಡ ಮನೆ ಊಟ ತಿನ್ನೋಕೆ ಆಗ್ತಿಲ್ಲ. ಅಡುಗೆ ಮಾಡೋಕೆ ಟೈಮಿಲ್ಲ. ಹೀಗಾಗಿ ಹೋಟೆಲ್‌ ಫುಡ್‌ಗೆ ಡಿಪೆಂಡ್‌ ಆಗಿದ್ದೀವಿ. ಇದ್ರಿಂದ ಕಾಯಿಲೆಗಳು ಬರೋದು ಸಾಮಾನ್ಯ. ಹಾಗಂತ ಉಪವಾಸ ಅಂತೂ ಕೂರೋಕಾಗಲ್ಲ. ಹಾಗಿದ್ರೆ ಆರೋಗ್ಯ ಚನ್ನಾಗಿರ್ಬೇಕು ಅಂದ್ರೆ ಏನ್‌ ಮಾಡ್ಬೇಕು? ಅನ್ನೋ ಚಿಂತೆ ಬಿಟ್‌ ಬಿಡಿ. ಇವತ್ತು ನಾವು ಆರೋಗ್ಯವನ್ನ ಇಂಪ್ರೂವ್‌ ಮಾಡ್ಕೊಳೋದಿಕ್ಕೆ ಫಾಲೋ ಮಾಡ್ಬೇಕಾಗಿರುವಂತಹ ಒಂದು ಗೋಲ್ಡನ್‌ ರೂಲ್‌ ಬಗ್ಗೆ ಮಾತಾಡೋಣ. ಈ ರೂಲ್‌ಅನ್ನ ನೀವು ನಿಮ್ಮ ಲೈಫ್‌ಸ್ಟೈಲ್‌ನಲ್ಲಿ ಇಂಕ್ಲೂಡ್‌ ಮಾಡ್ಕೊಂಡ್ರೆ 90% ಕಾಯಿಲೆಗಳು ನಿಮ್‌ ಹತ್ರಕ್ಕೂ ಸುಳಿಯೋದಿಲ್ಲ. ನೀವು ಹೆಲ್ದಿ, ಫಿಟ್‌ ಹಾಗೂ ಸ್ಯಾಟಿಫೈಡ್‌ ಲೈಫನ್ನ ಎಂಜಾಯ್‌ ಮಾಡ್ಬೋದು.

ನೀವು ಊಟ ಮಾಡೋ ಮುಂಚೆ ಈ ಒಂದು ಸೂಪರ್‌ ಫುಡ್‌ಅನ್ನ ತಿಂದ್ರೆ, ಹೋಟೆಲ್‌ ಫುಡ್‌ ಅಥವಾ ಅನ್‌ಹೆಲ್ದಿ ಫುಡ್‌ನಿಂದ ಏನೇನ್‌ ಡ್ಯಾಮೇಜ್‌ ನಿಮ್‌ ದೇಹಕ್ಕೆ ಆಗುತ್ತಲ್ಲ ಅದು 50% ಕಡಿಮೆ ಆಗುತ್ತೆ. ಇನ್ನೂ ಕೆಲವ್ರಿಗೆ 100% ವರ್ಕ್‌ ಆಗಿದ್ದೂ ಇದೆ. ಆದ್ರೆ ಇದನ್ನ ಒಂದ್‌ ದಿನ ಫಾಲೋ ಮಾಡಿದ್ರೆ ಸಾಕಾಗಲ್ಲ ಪ್ರತಿದಿನ ನೀವ್‌ ಮಾಡ್ಬೇಕಾಗುತ್ತೆ. ಸೋ ತುಂಬಾನೇ ಸಿಂಪಲ್‌.. ನೀವು ರೆಗ್ಯುಲರ್‌ ಆಗಿ ತಿನ್ನೋ ಊಟಕ್ಕೆ ಒಂದರ್ಧ ಗಂಟೆ ಮುಂಚೆ ತರಕಾರಿ, ಸೊಪ್ಪು, ಹಣ್ಣುಗಳನ್ನ ತಿನ್ನಿ. ಹಣ್ಣುಗಳನ್ನ ಯಾವಾಗ್ಲೂ ಖಾಲಿ ಹೊಟ್ಟೆಯಲ್ಲಿ ತಿನ್ನಿ. ಊಟದ ಜೊತೆ ಊಟದ ನಂತ್ರ ಯಾವುದೇ ಕಾರಣಕ್ಕೂ ತಿನ್ಬಾರ್ದು. ಹಣ್ಣು ಹಾಗೂ ಇತರ ಆಹಾರಗಳ ಸೇವನೆಯ ಮಧ್ಯೆ ಅಟ್‌ ಲೀಸ್ಟ್‌ ಅರ್ಧ ಗಂಟೆ ಅಂತರವಿರಲಿ. ಸಪೋಸ್‌ ನೀವು ಬೆಳಗ್ಗೆ ಒಂದು ಆಪಲ್‌ ಅಥವಾ ಒಂದು ದಾಳಿಂಬೆ ಹಣ್ಣನ್ನ ತಿಂದ್ರಿ ಅನ್ಕೊಳಿ.. ಅರ್ಧ ಗಂಟೆ ಬಳಿಕ ನಿಮ್ಮಿಷ್ಟದ ಬ್ರೇಕ್‌ಫಾಸ್ಟ್‌ ಮಾಡ್ಬಹುದು. ಅಥವಾ ಬ್ರೇಕ್‌ಫಾಸ್ಟ್‌ ಸ್ಕಿಪ್‌ ಮಾಡಿ ಬರೀ ಹಣ್ಣುಗಳನ್ನೇ ತಿನ್ಬಹುದು. ತುಂಬಾ ನ್ಯೂಟ್ರಿಯೆಂಟ್‌ ಡಿಫೀಷಿಯನ್ಸಿಯಿಂದಾಗಿ ಸಪ್ಲಿಮೆಂಟ್ಸ್‌ ಮೊರೆ ಹೋಗ್ತಾರೆ. ಅದರ ಬದಲಾಗಿ ಹಣ್ಣುಗಳನ್ನ ತಿನ್ನಿ. ಇದ್ರಿಂದ ಪೋಷಕಾಂಶಗಳ ಕೊರತೆಯಾಗೋದಿಲ್ಲ.

ಇನ್ನು, ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳೋದೇ ಕಾರ್ಬೋಹೈಡ್ರೇಟ್ಸ್‌ಅನ್ನ ಜಾಸ್ತಿ ತಿನ್ನೋದ್ರಿಂದ. ಕಾರ್ಬೋಹೈಡ್ರೇಟ್ಸ್‌ ಅಂದ್ರೆ ಆಹಾರದಲ್ಲಿರುವ ಸಕ್ಕರೆಯಂಶ. ಅಕ್ಕಿ, ಗೋಧಿ, ಮೈದಾ, ರಾಗಿ, ಜೋಳ ಈ ರೀತಿ ನೀವು ಯಾವುದೇ ಧಾನ್ಯಗಳನ್ನ ಸೇವಿಸಿದ್ರೂ ಅದ್ರಲ್ಲಿ ಕಾರ್ಬೋಹೈಡ್ರೇಟ್ಸ್‌ ಯಥೇಚ್ಚವಾಗಿರುತ್ತೆ.. ಇವುಗಳ ಸೇವನೆ ಕಡಿಮೆ ಮಾಡ್ಬೇಕು ಅಂದ್ರೆ ತರಕಾರಿ, ಸೊಪ್ಪುಗಳನ್ನ ಹೆಚ್ಚಾಗಿ ತಿನ್ನಿ. ನೀವಿದನ್ನ ಊಟದ ಜೊತೆ ತಿನ್ನೋದ್ರ ಬದಲಾಗಿ ಊಟಕ್ಕೆ ಅರ್ಧ ಗಂಟೆ ಮುಂಚೆ ತಿಂದ್ರೆ ಬಹಳ ಒಳ್ಳೇದು. ಫಾರ್‌ ಎಕ್ಸಾಂಪಲ್‌, ಮಧ್ಯಾಹ್ನ ಪಿಜ್ಜಾ ಅಥವಾ ಬರ್ಗರ್‌ ತಿಂತೀರಾ ಅನ್ಕೊಳಿ. ಇದಿಕ್ಕೆ ಅರ್ಧ ಗಂಟೆ ಅಥವಾ ಅಟ್‌ ಲೀಸ್ಟ್‌ ಒಂದು 15 ನಿಮಿಷ ಮುಂಚೆ ನೀವು ವೆಜೆಟೇಬಲ್ಸ್‌ ತಿಂದ್ರೆ ಪಿಜ್ಜಾ, ಬರ್ಗರ್‌ನಂತಹ ಆಹಾರಗಳಿಂದ ನಿಮ್ಮ ದೇಹಕ್ಕೆ ಅಷ್ಟೊಂದು ಡ್ಯಾಮೇಜ್‌ ಆಗೋದಿಲ್ಲ. ಹಾಗೆ ಹಣ್ಣು, ತರಕಾರಿ, ಸೊಪ್ಪುಗಳು ಫೈಬರ್‌ನಿಂದ ಸಮೃದ್ಧವಾಗಿವೆ. ಫೈಬರ್‌ ನಿಮ್ಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತೆ. ಸೋ ನೀವು 2 ಬರ್ಗರ್‌ ತಿನ್ನೋ ಬದ್ಲು ಒಂದನ್ನ ತಿಂದ್ರೂ ಹೊಟ್ಟೆ ತುಂಬುತ್ತೆ. ಇನ್ನು, ತರಕಾರಿಯನ್ನ ನೀವು ಹಸಿಯಾಗಿ ಆದ್ರೂ ತಿನ್ಬಹುದು ಅಥವಾ ಸ್ಟೀಮ್‌ ಮಾಡಿ ಕೂಡ ಸೇವನೆ ಮಾಡ್ಬಹುದು. ಬೇಕಿದ್ರೆ ಸ್ವಲ್ಪ ಪೆಪ್ಪರ್‌, ಲೆಮನ್‌ ಈ ರೀತಿಯ ಸ್ಪೈಸಸ್‌ ಬಳಸ್ಬಹುದು. ಇನ್ನು ಲೆಟಸ್‌, ಪುದೀನಾ, ಕೊತ್ತಂಬರಿ ಸೊಪ್ಪು ಇವುಗಳನ್ನ ಕೂಡ ತರಕಾರಿಗೆ ಮಿಕ್ಸ್‌ ಮಾಡಿ ತಿನ್ಬಹುದು. ಹಾಗೆ ಮೊಳಕೆ ಕಾಳುಗಳು, ಮೈಕ್ರೋಗ್ರೀನ್ಸ್‌, ನೆನೆಸಿದ ಕಡಲೆಬೀಜ, ಬಾದಾಮಿ ಈ ರೀತಿಯ ಪ್ರೋಟೀನ್‌ ರಿಚ್‌ ಆಹಾರಗಳನ್ನ ಕೂಡ ಸೇವಿಸಬಹುದು.

ಪ್ರಾರಂಭದಲ್ಲಿ ಇದು ಸ್ವಲ್ಪ ಕಷ್ಟ ಅನ್ನಿಸ್ಬಹುದು. ಸೋ, ಒಂದೇ ಬಾರಿ ಜಾಸ್ತಿ ತಿನ್ನೋದ್ರ ಬದಲಾಗಿ ಸ್ವಲ್ಪ ಸ್ವಲ್ಪವೇ ತಿನ್ನೋದಿಕ್ಕೆ ಟ್ರೈ ಮಾಡಿ. ನೀವಿದನ್ನ ರೆಗ್ಯುಲರ್‌ ಆಗಿ ಪಾಲನೆ ಮಾಡಿದ್ರೆ ನಿಮ್ಮ ಆರೋಗ್ಯ ಸುಧಾರಿಸುವಲ್ಲಿ ಇದು ಗೇಮ್‌ಚೇಂಜರ್‌ ರೀತಿ ಕೆಲಸ ಮಾಡುತ್ತೆ. ಅಲ್ಲದೇ ನಮ್ಮ ಆರೋಗ್ಯ ಇಂಪ್ರೂವ್‌ ಆಗೋದ್ರಲ್ಲಿ ಯಾವುದೇ ಡೌಟ್‌ ಇಲ್ಲ.

Read Also : ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ : ಕಂಬನಿ ಮಿಡಿದ ಗಣ್ಯರು

Exit mobile version