Site icon BosstvKannada

ಸುದೀಪ್ ಗೆ ನಾನು ಒಳ್ಳೆಯದನ್ನೇ ಬಯಸುತ್ತೇನೆ; ಸುದೀಪ್

ಸುದೀಪ್ (Sudeep) ಹಾಗೂ ದರ್ಶನ್ (Darshan) ಸ್ಟಾರ್‌ ವಾರ್ ಸದ್ಯಕ್ಕೆ ಬ್ರೇಕ್ ಬಿದ್ದಂತೆ ಕಾಣುತ್ತದೆ. ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿರುವ ಕಿಚ್ಚ ಸುದೀಪ್, ಯಾವಾಗಲೂ ಒಳ್ಳೆಯದನ್ನೇ ಬಯಸುತ್ತೇನೆ ಎಂದಿದ್ದಾರೆ.

ಅಭಿಮಾನಿಗಳಿಗಾಗಿ ಕ್ಯೂ & ಎ ಏರ್ಪಡಿಸಿದ್ದರು ಕಿಚ್ಚ. ಈ ವೇಳೆ ಅಭಿಮಾನಿಯೊಬ್ಬರು ದರ್ಶನ್ ಹಾಗೂ ಸುದೀಪ್ ಒಟ್ಟಿಗೆ ಇರುವ ಫೋಟೋ ಹಾಕಿ, ಈ ಫೋಟೋ ಬಗ್ಗೆ ಒನ್ ಲೈನ್ ಆನ್ಸರ್ ಕೊಡುವಂತೆ ಹೇಳಿದರು. ಇದಕ್ಕೆ ಉತ್ತರಿಸಿದ ಸುದೀಪ್, ‘ಅವರಿಗೆ ಸದಾ ಒಳ್ಳೆಯದನ್ನೇ ಬಯಸುತ್ತೇನೆ’ ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಕಿಚ್ಚ ಸುದೀಪ್ ಯುದ್ಧಕ್ಕೆ ಸಿದ್ಧ ಎಂದು ಹೇಳಿದ್ದರು. ಇದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಅಭಿಮಾನಿಗಳು ಕೆಂಡಕಾರಿದ್ದರು. ಹೀಗಾಗಿ ಅಭಿಮಾನಿಗಳ ಮಧ್ಯೆ ದೊಡ್ಡ ವಾರ್ ನಡೆದಿತ್ತು. ಅಲ್ಲದೇ, ವಿಜಯಲಕ್ಷ್ಮೀ ದರ್ಶನ್ ಅವರ ವಿರುದ್ಧ ಹಲವು ಕಿಡಿಗೇಡಿಗಳು ಕೆಟ್ಟ ಕಮೆಂಟ್ ಮಾಡಿದ್ದರು. ಹೀಗಾಗಿ ಹಲವು ಕಮೆಂಟ್ ಗಳನ್ನು ಮುಂದಿಟ್ಟುಕೊಂಡು ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಮಧ್ಯೆ ಸುದೀಪ್ ಅವರು ದರ್ಶನ್ ಬಗ್ಗೆ ಹೇಳಿರುವ ಮಾತು ಎಲ್ಲೆಡೆ ಸದ್ದು ಮಾಡುತ್ತಿದೆ.

Exit mobile version