Site icon BosstvKannada

ಕುಡಿಯ ಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ಪಾಪಿ ಪತಿ ಮಾಡಿದ್ದೇನು?

ಚಿಕ್ಕಬಳ್ಳಾಪುರ: ಕುಡಿದು ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.

ಈ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹುದುಗೂರು ಎಂಬಲ್ಲಿ ನಡೆದಿದೆ. ಪಾವನಿ(30) ಕೊಲೆಯಾಗಿರುವ ದುರ್ದೈವಿ ಎನ್ನಲಾಗಿದ್ದು, ಪತಿ ರಾಘವೇಂದ್ರ ಕೊಲೆ ಮಾಡಿರುವ ಪಾಪಿ ಪತಿ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ 5 ವರ್ಷಗಳ ಹಿಂದೆ ಬಂಧಿತ ಆರೋಪಿ ರಾಘವೇಂದ್ರ ಹಾಗೂ ಕೊಲೆಯಾಗಿರುವ ಪಾವನಿ ಮದುವೆಯಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಗಂಡು ಮಗು ಇದೆ. ಇತ್ತೀಚೆಗೆ ಪಾಪಿ ಪತಿಯೂ ಪತ್ನಿಯ ಊರಿಗೆ ಹೋಗಿದ್ದಾನೆ. ಆದರೆ, ಮನೆಗೆ ಹೋಗಿಲ್ಲ. ಈ ವಿಷಯ ತಿಳಿದು ಪಾವನಿ ಪ್ರಶ್ನಿಸಿದ್ದಾರೆ. ಊರಿಗೆ ಬಂದರೂ ಮನೆಗೆ ಏಕೆ ಬಂದಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಈ ಕಾರಣಕ್ಕೆ ಪತಿ ಹಾಗೂ ಪತ್ನಿಯ ಮಧ್ಯೆ ಜೋರು ಗಲಾಟೆ ನಡೆದಿದೆ ಎನ್ನಲಾಗಿದೆ. ಗಲಾಟೆ ವಿಕೋಪಕ್ಕೆ ತೆರಳಿ ಪತಿಯು ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆ ಪಾಪಿ ಪತಿಯು ಪತ್ನಿಯ ಕುತ್ತಿಗೆಗೆ ಕುತ್ತಿಗೆಗೆ ವೇಲ್ ನಿಂದಿ ಬಿಗಿದು ಕೊಲೆ ಮಾಡಿದ್ದಾನೆ. ಕುತ್ತಿಗೆಗೆ ವೇಲ್ ಬಿಗಿದು ಪತ್ನಿ ಪಾವನಿಯ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಗು ಅನಾಥವಾಗಿದೆ.

Exit mobile version