ರಾಜ್ಯದಲ್ಲಿ ಹೃದಯಾಘಾತ ಕೇಸ್‌ಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿವೆ. ಹಾಸನದಲ್ಲಿ ಹಾರ್ಟ್‌ಅಟ್ಯಾಕ್ ಪ್ರಕರಣಗಳು ಹೆಚ್ಚಾದಂತೆ, ರಾಜ್ಯದ ಇತರೆ ಜಿಲ್ಲೆಗಳಲ್ಲೂ ಹೃದಯಾಘಾತಕ್ಕೆ ಜನ ಬಲಿಯಾಗ್ತಿದ್ದಾರೆ. ಇದೀಗ ಕರ್ತವ್ಯನಿರತ ಪೊಲೀಸ್ ಅಧಿಕಾರಿಯೂ ಹಾರ್ಟ್‌ಅಟ್ಯಾಕ್‌ಗೆ ಜೀವಬಿಟ್ಟಿದ್ದಾರೆ.
ಹುಬ್ಬಳ್ಳಿಯ ಎಪಿಎಂಸಿ ನವನಗರ ಠಾಣೆ ಎಎಸ್‌ಐಯೊಬ್ಬರು ಬೆಳಗಾವಿ ಜಿಲ್ಲೆಯ ಗೋಕಾಕನಲ್ಲಿ ನಡೆಯುತ್ತಿದ್ದ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವದ ಬಂದೋಬಸ್ತ್ ಕರ್ತವ್ಯಕ್ಕೆ ತೆರಳಿದ್ದಾಗ ತೀವ್ರ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. 54 ವರ್ಷದ ಎಲ್.ಎಂ. ಮೀರಾನಾಯಕ ಅವರು ಶನಿವಾರ ಬೆಳಗ್ಗೆ 6:30 ಗಂಟೆ ಸುಮಾರಿಗೆ ಗೋಕಾಕಿನಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇವರು ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ ಬಂದೋಬಸ್ತ್ ಕರ್ತವ್ಯಕ್ಕೆಂದು ಗೋಕಾಕಗೆ ಹೋಗಿದ್ದರು. ಈ ವೇಳೆ ರಾತ್ರಿ ಚೆಕ್ ಪೋಸ್ಟ್ ಕರ್ತವ್ಯ ಮುಗಿಸಿ ಅವರು ವಾಸ್ತವ್ಯವಿದ್ದ ಎಸ್‌ಸಿ, ಎಸ್‌ಟಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಿಶ್ರಾಂತಿ ಮಾಡುತ್ತಿದ್ದಾಗ ತೀವ್ರ ಹೃದಯಾಘಾತದಿಂದ ಮೃಪಟ್ಟಿರುವುದಾಗಿ ತಿಳಿದು ಬಂದಿದೆ.

