BosstvKannada

ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಹೃತಿಕ್ ರೋಷನ್ ಸಾಥ್ : ಹಿಂದಿ ಟ್ರೈಲರ್ ರಿಲೀಸ್‌ಗೆ ಮುಹೂರ್ತ!

ಕನ್ನಡದ ಬಹುನೀರಿಕ್ಷಿತ ಚಿತ್ರದಲ್ಲಿ ಕಾಂತಾರ ಚಾಪ್ಟರ್‌ 1 ಸಹ ಒಂದು.. ರಿಷಬ್ ಶೆಟ್ಟಿ ನಿರ್ದೇಶಿಸಿ, ವಿಜಯ್ ಕಿರಗಂದೂರು ನಿರ್ಮಾಣ ಮಾಡುತ್ತಿರುವ ಕಾಂತಾರ ಚಾಪ್ಟರ್‌ 1 ಅಕ್ಟೋಬರ್‌ 2ರಂದು ವಿಶ್ವದಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. 7 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಕಾಂತಾರ ಚಿತ್ರದ ಹಿಂದಿ ಟ್ರೈಲರ್ ಸೆಪ್ಟೆಂಬರ್‌ 22ರ ವಿಜಯದಶಮಿಯ ಮೊದಲನೇ ದಿನದಂದು ಮಧ್ಯಾಹ್ನ 12.45 ಕ್ಕೆ ಬಿಡುಗಡೆಯಾಗಲಿದೆ. ಕಾಂತಾರ ಚಿತ್ರ ತಂಡಕ್ಕೆ ಬಾಲಿವುಡ್​ ನಟ ಗ್ರೀಕ್ ಗಾಡ್ ಎಂದೇ ಕರೆಯಲ್ಪಡುವ ಹೃತಿಕ್ ರೋಷನ್ ಸಾಥ್‌ ನೀಡಿದ್ದಾರೆ.

ಕನ್ನಡ ಅಷ್ಟೇ ಅಲ್ಲದೇ, ದೇಶ ವಿದೇಶಗಳಲ್ಲೂ ಹೈಪ್‌ ಕ್ರಿಯೆಟ್‌ ಮಾಡಿರುವ ಕಾಂತಾರ ಸಾವಿರ ಕೋಟಿಯ ಸರದಾರ ಆಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದ್ರ ಮಧ್ಯೆ ಬಾಲಿವುಡ್ ಸ್ಟಾರ್‌ ನಟ ಹೃತಿಕ್ ರೋಷನ್ ಹಿಂದಿ ಟ್ರೈಲರ್ ಬಿಡುಗಡೆ ಮಾಡುತ್ತಿದ್ದು, ಚಿತ್ರ ತಂಡಕ್ಕೆ ಆನೆ ಬಲ ಬಂದಂತಾಗಿದೆ. ಈ ಕುರಿತಾಗಿ ತಮ್ಮ ಎಕ್ಸ್‌ ಖಾತೆಯಲ್ಲಿ ರಿಷಬ್ ಶೆಟ್ಟಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಜೊತೆಯಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆಯು ಸಹ ತಮ್ಮ ಅಧಿಕೃತ ಪೇಜ್‌ನಲ್ಲಿ ಪೋಸ್ಟ್‌ ಮಾಡಿದೆ. ಪ್ರಕೃತಿ ಶಕ್ತಿಯು ಸೂಪರ್‌ಸ್ಟಾರ್‌ನ ಬೆಂಕಿಯನ್ನು ಭೇಟಿಯಾದಾಗ ಎಂದು ಬರೆದುಕೊಂಡಿರುವ ರಿಷಬ್, ಕಾಂತಾರ ಅಧ್ಯಾಯ 1ರ ಹಿಂದಿ ಟ್ರೇಲರ್ ಅನ್ನು ಅದ್ಭುತ ನಟ ಹೃತಿಕ್ ರೋಷನ್‌ ಅವರು ಅನಾವರಣಗೊಳಿಸಲಿದ್ದಾರೆ. ಕಾಂತಾರ ಗರ್ಜನೆ ಈಗ ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತದೆ ಎಂದು ಕ್ಯಾಪ್ಷನ್‌ ಹಾಕಿದ್ದು, ಅಭಿಮಾನಿಗಳು ಫುಲ್‌ ಥ್ರಿಲ್‌ ಆಗಿದ್ದಾರೆ.

Read Also : ಒಮಾನ್ ವಿರುದ್ಧ ಗೆದ್ದು ಬೀಗಿದ ಸೂರ್ಯಕುಮಾರ್ ಪಡೆ : ಸೂಪರ್ 4ರ ಹಂತವನ್ನು ಪ್ರವೇಶಿಸಿದ ಭಾರತ

Exit mobile version