ರಾಯಚೂರು: ಮಂತ್ರಾಲಯದ (Mantralaya) ರಾಘವೇಂದ್ರ ಸ್ವಾಮಿ (Shri Raghavendra Swamy)ಯ ಭಕ್ತರು ಅಪಾರ. ಹಲವರ ಬದುಕಲ್ಲಿ ರಾಯರು ಪವಾಡ ಮಾಡಿದ್ದಾರೆಂದು ಭಕ್ತರು ನಂಬಿದ್ದಾರೆ. ಹೀಗಾಗಿ ಮಂತ್ರಾಲಯಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಮಂತ್ರಾಲಯದಲ್ಲಿ ಹುಂಡಿ ಎಣಿಸುವ ಕಾರ್ಯ ನಡೆದಿದ್ದು, ಕೇವಲ 21 ದಿನಗಳಲ್ಲಿ 3.06 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಮಂತ್ರಾಲಯದಲ್ಲಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ 21 ದಿನಗಳಲ್ಲಿ 3,6,81,661 ರೂ. ಕಾಣಿಕೆ ಬಂದಿದೆ. ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಎರಡು ತಿಂಗಳಲ್ಲಿ ಕೋಟ್ಯಂತರ ರೂಪಾಯಿ ಕಾಣಿಕೆ ಸಂಗ್ರಹವಾಗಿದ್ದು, ಕಾಣಿಕೆಯಲ್ಲಿ 2,97,44,661 ರೂ. ಕರೆನ್ಸಿ ನೋಟುಗಳು ಹಾಗೂ 9,37,000 ರೂ. ನಾಣ್ಯಗಳು ಕೂಡ ಇವೆ. ಅಲ್ಲದೇ, 23 ಗ್ರಾಂ ಚಿನ್ನ, 490 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಹುಂಡಿಯಲ್ಲಿ ಪತ್ತೆಯಾಗಿವೆ. ನೂರಾರು ಸಿಬ್ಬಂದಿಗಳು ಹಾಗೂ ವಿವಿಧ ಸೇವಕರು ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.

Share.
Leave A Reply