ಪ್ರಾದೇಶಿಕ ಪಕ್ಷದ ಮಾಸ್ ಲೀಡರ್.. ಜೆಡಿಎಸ್ ಪಕ್ಷದಲ್ಲಿ ಹೊಸ ಕಿಚ್ಚಿನ ಜನಕ.. ರೈತರ ಪಾಲಿನ ದೇವರು ಅಂತಾನೇ ಫೇಮಸ್ ಆಗಿರೋ ನಾಯಕ ಅಂದ್ರೆ ಅದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ.. ಸೆಡ್ಡು ಹೊಡೆದು ವಾಕ್ಸಮರಕ್ಕೆ ನಿಂತ್ರೆ ಗಂಟೆಗಟ್ಟಲೇ ನಿರರ್ಗಳವಾಗಿ ಸರ್ಕಾರದ ವಿರುದ್ಧ ಮಾತಿನ ಮತಾಪು ಸಿಡಿಸ್ತಾ ಇದ್ರು.. ಆದ್ರೆ ಕಳೆದ ಕೆಲ ಸಮಯದಿಂದ ಹೆಚ್‌ಡಿಕೆ ಫುಲ್ ಸೈಲೆಂಟ್ ಆಗಿಬಿಟ್ಟಿದ್ರು.. ಕುಗ್ಗಿ ಹೋದ ದೇಹ.. ಹೊಳಪಿಲ್ಲದ ಮುಖ.. ಏರುಧ್ವನಿಯೇ ಇಲ್ಲದ ಮಾತು… ಹೀಗೆ ಕುಗ್ಗಿಹೋಗಿದ್ದ ಕುಮಾರಸ್ವಾಮಿಯವರನ್ನು ಕಂಡು ಅಭಿಮಾನಿಗಳೆಲ್ಲಾ ಆತಂಕಕ್ಕೊಳಗಾಗಿದ್ರು.. ಆದ್ರೆ ಇದೀಗ ಅವರ ಆರೋಗ್ಯ ವಿಚಾರದಲ್ಲಿ ಬಿಗ್ ಅಪ್ಡೇಟ್ ಸಿಕ್ಕಿದೆ.. ಯಾರೂ ಊಹಿಸಿರದ ರೀತಿಯಲ್ಲಿ ಕುಮಾರಸ್ವಾಮಿ ಆರೋಗ್ಯದಲ್ಲಿ ಬದಲಾವಣೆ ಆಗಿದೆ..

ಕುಮಾರಸ್ವಾಮಿಯವರ ಆರೋಗ್ಯದ ಬಗ್ಗೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿತ್ತು.. ಅವರು ಕೂಡ ಕೇಂದ್ರ ಸಚಿವರಾದ ಮೇಲೆ ರಾಜ್ಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ರು.. ಎಚ್‌ಡಿಕೆಯವರು ಸೊರಗಿದಂತೆ ಕಾಣುತ್ತಿದ್ದುದರಿಂದ ಅವರ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಅಂತೂ ಜನರು ಗಾಬರಿಗೊಂಡು ಕಮೆಂಟ್ಸ್ ಹಾಕ್ತಿದ್ರು.. ಬೇಗ ಚೇತರಿಸಿಕೊಳ್ಳಿ ಅಂತ ಪ್ರಾರ್ಥನೆ ಮಾಡ್ತಿದ್ರು.. ಹೀಗೆ ಹೆಚ್‌ಡಿಕೆ ಆರೋಗ್ಯ ಸ್ಥಿತಿ ಹೈಲೈಟ್ ಆಗ್ತಿದ್ರೂ ಕೂಡ ಅವರಿಂದ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ.. ಆದ್ರೀಗ ಮಾಜಿ ಪ್ರಧಾನಿ ದೇವೇಗೌಡ್ರು ತಮ್ಮ ಮಗನ ಆರೋಗ್ಯದ ಬಗ್ಗೆ ಮೌನಮುರಿದಿದ್ದಾರೆ.. ಎಲ್ಲಾ ವದಂತಿ, ಪ್ರಶ್ನೆಗಳಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ.. ಅಲ್ಲದೇ ಸ್ವತಃ ಕುಮಾರಸ್ವಾಮಿಯವರೇ ತಮ್ಮ ಹೆಲ್ತ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ..
ಸುದ್ದಿಗೋಷ್ಠಿ ವೇಳೆ ಜೆಡಿಎಸ್‌ನ ಕಾರ್ಯತಂತ್ರಗಳ ಬಗ್ಗೆ ವಿವರಿಸುವಾಗ ದೇವೇಗೌಡ್ರು ಹೆಚ್‌ಡಿಕೆ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.. ನಾಲ್ಕೈದು ತಿಂಗಳಿಂದ ಕುಮಾರಸ್ವಾಮಿಯವರ ಆರೋಗ್ಯದಲ್ಲಿ ಸಮಸ್ಯೆ ಇದ್ದಿದ್ದು ನಿಜ.. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ ಕಾರಣ ಅವರು ರಾಜ್ಯ ಪ್ರವಾಸದಿಂದ ದೂರ ಉಳಿದಿದ್ರು.. ಹೊರ ದೇಶದ ವೈದ್ಯರಿಂದ ಹೆಚ್‌ಡಿಕೆ ಚಿಕಿತ್ಸೆ ಪಡೆದಿದ್ದಾರೆ.. ಹೀಗಾಗಿ ಅವರು ಸುಧಾರಿಸಿಕೊಂಡಿದ್ದಾರೆ.. ವೈದ್ಯರೂ ಕೂಡ ರಾಜಕೀಯದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಲು ಅನುಮತಿ ನೀಡಿದ ಕಾರಣ ಇನ್ಮುಂದೆ ಕುಮಾರಸ್ವಾಮಿ ಫುಲ್ ಆಕ್ಟೀವ್ ಆಗಲಿದ್ದಾರೆ ಅಂತ ದೇವೇಗೌಡ್ರು ಹೇಳಿದ್ದಾರೆ.. ರಾಜ್ಯಾದ್ಯಂತ ಪ್ರವಾಸ ಮಾಡಿ ಜನರ ಸಮಸ್ಯೆಗಳಿಗೆ ದಾರಿದೀಪವಾಗಲಿದ್ದಾರೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ..
ಫುಲ್ ಸೊರಗಿಹೋಗಿದ್ದ ಕುಮಾರಸ್ವಾಮಿಯವರು ದಿನಗಳೆದಂತೆ ಚೇತರಿಸಿಕೊಳ್ಳುತ್ತಿರುವುದಕ್ಕೆ ಮತ್ತಷ್ಟು ಮಾಹಿತಿ ಸಿಕ್ಕಿದೆ. ತಮ್ಮ ಆಪ್ತರೊಬ್ಬರ ಬಳಿ ಮಾತಾಡಿರುವ ಎಚ್‌ಡಿಕೆ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಶ್ವಾಸಕೋಶದಲ್ಲಿ ಸೋಂಕು ಉಂಟಾಗಿತ್ತು. ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದಿದ್ದು, ಈಗ ಆರೋಗ್ಯ ಸಮಸ್ಯೆ ಸರಿ ಹೋಗಿ ಸುಧಾರಿಸಿಕೊಂಡಿದ್ದೀನಿ ಬ್ರದರ್.. ಅಂತ ಸ್ವತಃ ಕುಮಾರಸ್ವಾಮಿಯವರೇ ಆಪ್ತರ ಬಳಿ ಹೇಳಿಕೊಂಡಿದ್ದ ವಿಚಾರ ಬಾಸ್ ಟಿವಿಗೆ ದೊರಕಿತ್ತು. ವಾಸ್ತವದಲ್ಲಿ ಎಚ್‌ಡಿಕೆ ಆರೋಗ್ಯಕ್ಕೆ ಏನಾಗಿತ್ತು ಹೇಳ್ತೀವಿ ನೋಡಿ. ಕೆಲ ವರ್ಷಗಳ ಹಿಂದ ಹಾರ್ಟ್ ಆಪರೇಷನ್ ಆದ ನಂತರ ಎಚ್‌ಡಿಕೆ ತೂಕದಲ್ಲಿ ಬಾರೀ ಏರಿಕೆಯಾಗಿತ್ತು. ಹೀಗೆ ಸ್ಥೂಲಕಾಯರಾಗುತ್ತಿದ್ದಂತೆ ಹೃದಯದ ವಾಲ್ವ್‌ಗಳ ಮೇಲೆ ಒತ್ತಡ ಹೆಚ್ಚಾಗಿ ಮಹಾಪಧಮನಿಯ ಕವಾಟ ಸಂಕುಚಿತವಾಗುವ ಅಪಾಯದ ಬಗ್ಗೆ ಇವರಿಗೆ ಚಿಕಿತ್ಸೆ ನೀಡುವ ಅಪೊಲೋ ಆಸ್ಪತ್ರೆಯ ವೈದ್ಯರು ಎಚ್ಚರಿಸಿದ್ದರು. ಹಾಗಾಗಿ ತಕ್ಷಣ ಎಚ್ಚೆತ್ತುಕೊಂಡ ಎಚ್ಡಿಕೆ, ಹಿತಮಿತ ಆಹಾರ ಹಾಗೂ ನಿಯಮಿತ ವಾಕಿಂಗ್ ರೂಢಿಸಿಕೊಂಡು ತೂಕ ಇಳಿಸಿಕೊಳ್ಳುತ್ತಿದ್ದರು. ಇದೇ ವೇಳೆ ಹೆಚ್ಚಿನ ಸುತ್ತಾಟ, ಕಾರ್ಯಕರ್ತರ ಭೇಟಿಯ ನಂತರ ಶ್ವಾಸಕೋಶದ ಇನ್ಫೆಕ್ಷನ್ ಕಾಣಿಸಿಕೊಂಡಿದ್ದರಿಂದ ಮತ್ತಷ್ಟು ವೀಕ್ ಆಗಿದ್ರು. ಹಾಗಾಗಿ ಕೃಶರಾದಂತೆ ಕಾಣಿಸ್ತಾ ಇದ್ರು ಮತ್ತು ಧ್ವನಿಯಲ್ಲಿಯೂ ಸುಸ್ತು ವ್ಯಕ್ತವಾಗುತ್ತಿತ್ತು. ಇದೀಗ ಸೂಕ್ತ ಚಿಕಿತ್ಸೆಯ ನಂತರ ಮತ್ತೆ ಅಗತ್ಯಕ್ಕೆ ತಕ್ಕಷ್ಟು ತೂಕ ಪಡೆದುಕೊಂಡು ಉತ್ಸಾಹಭರಿತರಾಗಿದ್ದಾರೆ. ಈಗ ಅವರ ಆರೋಗ್ಯವೂ ಕೂಡ ಸರಿಹೋಗಿದೆ.. ಇದರ ಜೊತೆಗೆ ಈಗೀಗ ಅವರ ಹಾವಭಾವ, ಮಾತು, ಚಟುವಟಿಕೆ ಎಲ್ಲವೂ ಮೊದಲಿನಂತೆ ಆಗಿರೋದು ಗೊತ್ತಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಇತ್ತೀಚೆಗೆ ದೆಹಲಿಯಲ್ಲಿ ಪ್ರೆಸ್‌ಮೀಟ್ ಮಾಡಿದ ಕುಮಾರಸ್ವಾಮಿಯವರು ಅಬ್ಬರಿಸಿ ಮಾತನಾಡಿದ್ದರು.
Read Also: ಬೊಜ್ಜು ಕರಗಿಸಲು ಇಲ್ಲಿದೆ ಬೆಸ್ಟ್ ಪ್ಲ್ಯಾನ್ : ಗ್ರೀನ್ ಟೀ ಕುಡಿಯುವ ಮುಂಚೆ ಇದನ್ನು ಪಾಲಿಸಿ