ಭಾರತದಲ್ಲಿ ಇನ್ಮುಂದೆ ನಿಮ್ಗೆ ಸಿಗಲಿದೆ ಇ-ಪಾಸ್‌ಪೋರ್ಟ್. ಇದು ನೆಕ್ಸ್ಟ್ ಜನರೇಷನ್ ಪಾಸ್‌ಪೋರ್ಟ್ ಆಗಿದ್ದು, ಈಗಿನಿಂದ ಹೊಸದಾಗಿ ಅರ್ಜಿ ಸಲ್ಲಿಸುವ ಎಲ್ಲ ಅರ್ಜಿದಾರರಿಗೂ ಇ-ಪಾಸ್‌ಪೋರ್ಟ್ ಮಾತ್ರ ನೀಡಲಾಗ್ತಿದೆ. ಪ್ರತಿ ಇ-ಪಾಸ್‌ಪೋರ್ಟ್‌ನಲ್ಲಿ ಅತ್ಯಂತ ಸುರಕ್ಷಿತ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಚಿಪ್ ಮತ್ತು ಆಂಟೆನಾ ಅಳವಡಿಸಲಾಗಿದೆ. ಈ ಚಿಪ್‌ನಲ್ಲಿ ಅರ್ಜಿದಾರರ ಫೋಟೋ, ಫಿಂಗರ್‌ಪ್ರಿಂಟ್, ಇತರ ಬಯೊಮೆಟ್ರಿಕ್ ಮಾಹಿತಿ, ವೈಯಕ್ತಿಕ ವಿವರಗಳು ಎಲ್ಲವನ್ನೂ ಎನ್‌ಕ್ರಿಪ್ಟೆಡ್ ಮತ್ತು ಡಿಜಿಟಲ್ ಸಿಗ್ನೇಚರ್ ಸಹಿತ ಸಂಗ್ರಹಿಸಲಾಗುತ್ತೆ. ಇದ್ರಿಂದ ಏರ್‌ಪೋರ್ಟ್‌ನಲ್ಲಿ ನಿಮ್ಮ ಸಮಯ ವ್ಯರ್ಥವಾಗೋದಿಲ್ಲ. ಕೇವಲ 3-4 ಸೆಕೆಂಡ್‌ಗಳಲ್ಲಿ ಪಾಸ್‌ಪೋರ್ಟ್ ಸ್ಕ್ಯಾನ್ ಆಗುತ್ತೆ. ಅಲ್ಲದೇ ಇಮಿಗ್ರೇಷನ್ ಕೌಂಟರ್‌ಗಳಲ್ಲಿ ಕ್ಯೂ ಕೂಡ ಕಡಿಮೆಯಾಗುತ್ತೆ.
ಇನ್ನು, ಫಿಸಿಕಲ್ ಪಾಸ್‌ಪೋರ್ಟ್‌ಗಳಿಗೂ ಕೂಡ ಮಾನ್ಯತೆ ಇದೆ. ವ್ಯಾಲಿಡಿಟಿ ಎಕ್ಸ್‌ಪೈರ್ ಆಗುವವರೆಗೂ ಅವುಗಳನ್ನ ಬಳಸ್ಬಹುದು. ಈ ಹೊಸ ತಲೆಮಾರಿನ ಪಾಸ್‌ಪೋರ್ಟ್‌ಗಳ ಮೂಲಕ ವಂಚನೆಯನ್ನು ಬಹುತೇಕ ಶೂನ್ಯಕ್ಕೆ ಇಳಿಸುವ ಗುರಿಯನ್ನ ಸರ್ಕಾರ ಹೊಂದಿದೆ. ಪಾಸ್‌ಪೋರ್ಟ್ ತಿರುಚುವಿಕೆ, ಡೂಪ್ಲಿಕೇಟ್ ತಯಾರಿಕೆ ಅಸಾಧ್ಯ. ಯಾಕಂದ್ರೆ ಅರ್ಜಿ ಸಲ್ಲಿಸುವಾಗ್ಲೇ ಕೇಂದ್ರೀಯ ಸರ್ವರ್‌ನಲ್ಲಿ ಬಯೊಮೆಟ್ರಿಕ್ ಪರಿಶೀಲನೆ ಮಾಡಲಾಗುತ್ತೆ. ಇದ್ರಿಂದ ಒಬ್ಬ ವ್ಯಕ್ತಿಗೆ ಒಂದು ಪಾಸ್‌ಪೋರ್ಟ್ ಮಾತ್ರ ಸಾಧ್ಯ. ಈವರೆಗೆ ಒಟ್ಟು 90 ಲಕ್ಷಕ್ಕೂ ಅಧಿಕ ಇ-ಪಾಸ್‌ಪೋರ್ಟ್‌ಗಳು ಜನರ ಕೈಗೆ ಸಿಕ್ಕಿವೆ. 2035ರ ಜೂನ್ ತಿಂಗಳ ವೇಳೆಗೆ ದೇಶದಲ್ಲಿ 100% ಇ-ಪಾಸ್‌ಪೋರ್ಟ್‌ಗಳನ್ನಾಗಿ ಸಂಪೂರ್ಣ ಪರಿವರ್ತನೆ ಮಾಡುವ ಗುರಿಯನ್ನ ಸರ್ಕಾರ ಹೊಂದಿದೆ.
ಪಾಸ್‌ಪೋರ್ಟ್ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆ

