ತುಮಕೂರಿನಲ್ಲಿ (Tumkur) ಹೇಮಾವತಿ ನೀರಿಗಾಗಿ (Hemavati water) ಬೃಹತ್ ಹೋರಾಟ ನಡೆಯುತ್ತಿದೆ. ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕಾಲುವೆ (Hemavati Link Canal Row) ಕಾಮಗಾರಿ ವಿರೋಧಿಸಿ ಬಿಜೆಪಿ ಶಾಸಕ ಸುರೇಶ್ ಗೌಡ (BJP MLA Suresh Gowda) ಸೇರಿದಂತೆ ಹಲವು ಜನಪ್ರತಿನಿಧಿಗಳು ಹೋರಾಟ ನಡೆಸಿದ್ದರು. ಇದಕ್ಕೆ ಕೆಲವು ಮಠಾಧೀಶರು, ರೈತ ಸಂಘಟನೆಗಳು, ಸ್ಥಳೀಯ ಸಂಘಟನೆಗಳು, ಸಾರ್ವಜನಿಕರರು ಕೈಜೋಡಿಸಿದ್ದರು. ಹೆದ್ದಾರಿ ರಸ್ತೆ ತಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ಈ ಹೋರಾಟವನ್ನ ರೈತರು ಮುಂದುವರೆಸಿದ್ದಾರೆ. ಪೈಪ್ ಲೈನ್ ಪುಡಿಗಟ್ಟಿರೋ ರೈತರು, ಬೃಹತ್ ಪೈಪ್‌ಗಳನ್ನು ಕೆನಾಲ್‌ಗೆ ತಳ್ಳಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ಸ್ಥಳದಲ್ಲಿ ಜೆಸಿಬಿ ಯಂತ್ರಗಳನ್ನ ತಾವೇ ಚಾಲನೆ ಮಾಡಿದ ರೈತರು, ಬೃಹತ್ ಪೈಪ್‌ಗಳನ್ನು ಕೆನಾಲ್‌ಗೆ ತಳ್ಳಿ, ಪುಡಿ ಪುಡಿ ಮಾಡಿದ್ದಾರೆ

ಬಿಜೆಪಿ ಹಾಗೂ ರೈತ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ರೈತರ ಹೊಲ, ಭೂಮಿಯನ್ನ ನಾಶ ಪಡಿಸುತ್ತಿದ್ದಾರೆ ಎಂದು ಆಕ್ರೊಶ ವ್ಯಕ್ತಪಡಿಸಿದ್ರು. ಸಾವಿರಾರು ಸಂಖ್ಯೆಯಲ್ಲಿ ರೈತರು ನೆರೆದಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಹೇಮಾವತಿ ಲಿಂಕ್‌ ಕೆನಾಲ್‌ ಮೂಲಕ ನೀರು ಮಾಗಡಿ, ರಾಮನಗರಕ್ಕೆ ಹೋದರೆ ತುಮಕೂರು ಜನರಿಗೆ ಅನ್ಯಾಯ ವಾಗಲಿದೆ ಅಂತ ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರ ಯಾವುದೇ ಮುಂದಾಲೋಚನೆ ಇಲ್ಲದೆ ಯೋಜನೆ ಜಾರಿಗೊಳಿಸಿದೆ. ಇದೊಂದು ಅವೈಜ್ಞಾನಿಕ ಕಾಮಗಾರಿ. ಕೂಡಲೇ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಶಾಸಕರು, ಮಠಾಧೀಶರು, ರೈತರಿಂದ ಪ್ರತಿಭಟನೆ
ಇದಕ್ಕೂ ಮುನ್ನ ಬಿಜೆಪಿ ಶಾಸಕ ಸುರೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ವಿವಿಧ ಮಠಗಳ ಸ್ವಾಮೀಜಿಗಳು, ರೈತರು ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಈ ವೇಳೆ ಹೆದ್ದಾರಿ ರಸ್ತೆ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಸೌಧದಲ್ಲಿ ಮಹತ್ವದ ಸಭೆ
ಇನ್ನು ತುಮಕೂರಿನಲ್ಲಿ ಹೇಮಾವತಿ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಇತ್ತ ವಿಧಾನ ಸೌಧದಲ್ಲಿ ಮಹತ್ವದ ಸಭೆ ನಡೆಸಲಾಯ್ತು. ಸಿಎಂ ಡಿಕೆಶಿ ಜೊತೆ ಡಾ. ಜಿ. ಪರಮೇಶ್ವರ್ ಚರ್ಚೆ ನಡೆಸಿದರು. ತುಮಕೂರಿನಲ್ಲಿ ಸದ್ಯದ ಪರಿಸ್ಥಿತಿ, ಹೋರಾಟಗಾರರ ಬೇಡಿಕೆಗಳ ಕುರಿತು ಚರ್ಚೆ ನಡೆಸಿದ್ರು.

ಹೋರಾಟದ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಇನ್ನು ಈ ಬಗ್ಗೆ ವಿಧಾನ ಸೌಧದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಮಾನಸಿಕವಾಗಿ ಎಲ್ಲ ಶಾಸಕರಿಗೂ ವಿಷಯ ಗೊತ್ತಿದೆ. ಕೃಷ್ಣಪ್ಪ ಮತ್ತು ಸುರೇಶ್ ಮಾತಾಡಿದ್ದಾರೆ, ಅವರಿಗೆ ಅರಿವಿದೆ. ಹೋರಾಟ ಮಾಡುವುದು ತಪ್ಪು ಎಂದು ಹೇಳಲ್ಲ ಅಂತ ಹೇಳಿದ್ದಾರೆ. ಎಲ್ಲರೂ ನಮ್ಮ ಜನರು. ಅಲ್ಲಿ ಇರುವ ರೈತರು ನಾಮವಂತರೇ. ಅಲ್ಲಿ ಇರುವ ಎಲ್ಲರ ಹಿತವನ್ನೂ ನಾವು ಕಾಪಾಡುತ್ತೇವೆ ಅಂತ ಡಿಕೆಶಿ ಹೇಳಿದ್ದಾರೆ.

Share.
Leave A Reply