BosstvKannada

Hemavati Link Canal ಯೋಜನೆಯ ಭವಿಷ್ಯ ವೇನು..? ಯಾರಿಗೂ ಜಗ್ಗಲ್ವಾ ಡಿಕೆಶಿ..?

ಕೆನಾಲ್ ಕಾಮಗಾರಿ (Hemavati Link Canal)ಗೆ ಸಾವಿರಾರು ಪ್ರತಿಭಟನಾಕಾರರಿಂದ ಮುತ್ತಿಗೆ, ಸ್ಥಳದಲ್ಲಿನ ಕಾಮಗಾರಿ ಸಲಕರಣೆಗಳು ಧ್ವಂಸ.. ನೀರಿಗಾಗಿ ಶುರುವಾದ ಕಿಚ್ಚು ಇದೀಗ ನಮ್ಮದೇ ರಾಜ್ಯದ ಎರಡು ಜಿಲ್ಲೆಗಳ ಮಧ್ಯೆ ತೀವ್ರಗೊಂಡಿದೆ.. ನೀರು ಹಂಚಿಕೆಯ ವಿಷಯ ಇದೀಗ ಪ್ರತೀಕಾರದ ಜ್ವಾಲೆಯಾಗಿ ಹೊತ್ತಿ ಉರಿಯುತ್ತಿದೆ..

ಈಗಾಗಲೇ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾರ್ಪಾಡು ಮಾಡುವ ಡಿಸಿಎಂ ಡಿಕೆ ಶಿವಕುಮಾರ್‌ ನಡೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗ್ತಿವೆ.. ಹೀಗಿರುವಾಗ ಅದೇ ರಾಮನಗರ ಹಾಗೂ ಮಾಗಡಿಗೆ ಹೇಮಾವತಿ ನೀರು ಹರಿಸುವ ಡಿಕೆಶಿ ಪ್ರಯತ್ನಕ್ಕೆ ತಾತ್ಕಾಲಿಕ ಬ್ರೇಕ್‌ ಬಿದ್ದಿದೆ..

ತುಮಕೂರಿನ ಗುಬ್ಬಿಯ ಸಂಕಾಪುರದಲ್ಲಿನ ಕಾಮಗಾರಿ ಸ್ಥಳದಲ್ಲಿ ರೈತರು, ಪ್ರತಿಭಟನಾಕಾರರು ಪಾದಯಾತ್ರೆ ಮಾಡಿ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನ ತಡೆ ಹಿಡಿದಿದ್ದಾರೆ. ಪ್ರತಿಭಟನೆಯ ಜ್ವಾಲೆಯನ್ನ ತಾರಕ ಕ್ಕೇರಿಸಿದ್ದಾರೆ.. ಲಿಂಕ್‌ ಕೆನಾಲ್‌ ಮೂಲಕ ಹೇಮಾವತಿ ನೀರು ಹರಿಸಲು ಶತಾಯ ಗತಾಯ ಬಿಡಲ್ಲ ಅಂತ ಪಟ್ಟು ಹಿಡಿದಿದ್ದಾರೆ.. ಸರ್ಕಾರವೂ ಕೂಡ ಅವರ ಆಕ್ರೋಶಕ್ಕೆ ಮಣಿದು ಕಾಮಗಾರಿಗೆ ತಾತ್ಕಾಲಿಕ ಬ್ರೇಕ್‌ ಹಾಕಿದೆ..

ತುಮಕೂರು ರೈತರು ಹೇಮಾವತಿ ಲಿಂಕ್ ಕೆನಾಲ್ ಯೋಜನೆಯನ್ನು ಇಷ್ಟೊಂದು ವಿರೋಧಿಸಲು ಕಾರಣವೂ ಕೂಡ ಇದೆ.. ಹಾಸನ ಜಿಲ್ಲೆಯಲ್ಲಿ ಹರಿಯುವ ಹೇಮಾವತಿ ನದಿ, ಗೊರೂರು ಜಲಾಶಯದಿಂದ ತುಮಕೂರಿಗೆ ವರ್ಷಕ್ಕೆ 24 ಟಿಎಂಸಿ ನೀರು ಹಂಚಿಕೆ ಆಗಬೇಕು.. ಆದ್ರೆ ಇದುವರೆಗೂ ಅದು ಸಾಧ್ಯವಾಗಿಲ್ಲ..

ಆದ್ರೆ ಅದನ್ನ ಬಿಟ್ಟು ಗುಬ್ಬಿ ತಾಲ್ಲೂಕಿನ ಸಂಕಾಪುರದಿಂದ ಪೈಪ್ ಲೇನ್‌ ಮೂಲಕ ಕುಣಿಗಲ್ ಮಾರ್ಗವಾಗಿ ಮಾಗಡಿ ಗೆ ನೀರು ಹರಿಸಲು ಯೋಜನೆ ರೂಪಿಸಲಾಗ್ತಿದೆ.. ನೈಸರ್ಗಿಕವಾಗಿ ನಾಲೆಗಳ ಮೂಲಕ ನೀರು ಹರಿಸುವುದನ್ನು ಬಿಟ್ಟು ಸ್ಟೀಲ್ ಪೈಪ್ ಬಳಸಿ ಮಾಗಡಿಗೆ ನೀರು ಹರಿಸಿದ್ರೆ ತುಮಕೂರು ಜನಕ್ಕೆ ಹೇಮಾವತಿ ನೀರು ಸಿಗದಂತೆ ಆಗಲಿದೆ ಅನ್ನೋ ಆತಂಕ ಅಲ್ಲಿನ ರೈತರಲ್ಲಿ ಮನೆ ಮಾಡಿದೆ.. ಹೀಗಾಗಿಯೇ ಅವರೆಲ್ಲಾ ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿ ಸ್ತಿದ್ದಾರೆ.

ಇನ್ನು ತಮ್ಮ ಕನಸಿನ ಯೋಜನೆಯನ್ನು ಡಿಸಿಎಂ ಡಿಕೆಶಿ ಅರ್ಧಕ್ಕೆ ನಿಲ್ಲಿಸ್ತಾರಾ ಅನ್ನೋದು ಈಗ ಯಕ್ಷ ಪ್ರಶ್ನೆಯಾ ಗಿದೆ. ಯಾಕಂದ್ರೆ ತುಮಕೂರಿನ ಪ್ರಭಾವಿ ಸಚಿವರೂ ಕೂಡ ಡಿಕೆಶಿಯ ಹಠಕ್ಕೆ ಮಣಿದು ತುಮಕೂರು ರೈತರ ವಿರೋಧದ ನಡುವೆಯೂ ಯೋಜನೆಯನ್ನು ಪೂರ್ಣಗೊಳಿಸಲು ಸಾಥ್‌ ಕೊಟ್ಟಿದ್ದಾರೆ..

2019ರಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸಮಿಶ್ರ ಸರ್ಕಾರವಿದ್ದಾಗ ಆದೇಶಗೊಂಡ ಯೋಜನೆ, ಬಳಿಕ ಬಿಜೆಪಿ ಸರ್ಕಾರದಲ್ಲಿ ರದ್ದಾಗಿತ್ತು. ಆದ್ರೀಗ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದ್ಮೇಲೆ ಜೀವ ಪಡೆದಿದೆ.. ಇದೀಗ 1,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗ್ತಿರುವ ಈ ಯೋಜನೆಯನ್ನ ಬಿಜೆಪಿಯವರಾದ್ರೂ ಸರಿ, ಪ್ರತಿಭಟನಾಕಾರರು ಆದ್ರೂ ಸರಿ ಯಾರೇ ಅಡ್ಡ ಬಂದ್ರೂ ಪೂರ್ಣಗೊಳಿಸುತ್ತೇವೆ ಅನ್ನೋ ಚಲದಲ್ಲಿ ಡಿಕೆಶಿ ಇದ್ದಾರೆ ಎನ್ನಲಾಗಿದೆ..

ಸದ್ಯ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಸರ್ಕಾರ ತಾತ್ಕಾಲಿಕ ಬ್ರೇಕ್‌ ಹಾಕಿದೆ.. ಆದ್ರೆ ಅದರಿಂದ ಶುರುವಾಗಿರೋ ಕಿಚ್ಚು ಇನ್ನೂ ಶಮನವಾಗಿಲ್ಲ.. ಪ್ರತಿಭಟನಾಕಾರರ ಆಕ್ರೋಶಕ್ಕೆ ಸರ್ಕಾರ ಮಣಿದು ನೈಸರ್ಗಿಕವಾಗಿ ನಾಲೆಗಳ ಮೂಲಕವೇ ಮಾಗಡಿಗೆ ನೀರು ಹರಿಸಲು ಮುಂದಾಗುತ್ತಾ.. ಅಥವಾ ತುಮಕೂರು ಭಾಗದ ರೈತರನ್ನು ಮನವೊಲಿಸಿ ಯೋಜನೆಯನ್ನು ಪೂರ್ಣಗೊಳಿಸುತ್ತಾ ಅನ್ನೋದು ಸದ್ಯದ ಕುತೂಹಲ..

Exit mobile version