ಸಿಂಗಲ್ ಲೈಫ್ ಈಸ್ ಪೀಸ್ ಫುಲ್ ಲೈಫ್ ಅಂತಾರೆ ಈಗಿನ ಹುಡುಗ್ರು.. ಮಗ ಸಿಂಗಲ್ ಆಗಿ ಇರೋಣ.. ಹುಡುಗಿ ಸಹವಾಸ ನಮ್ಗ್ಯಾಕೆ ಅಂತಾ ಅದೇಷ್ಟೋ ಹುಡುಗ್ರು ಹುಡುಗಿರ್ ಕಂಡ್ರೆ ಮಾರು ದೂರ ಓಡಿ ಹೋಗ್ತಾರೆ.. ಅಂತಹದ್ರಲ್ಲಿ ಮದ್ವೆಗೆ ಹುಡುಗಿ ಸಿಗ್ತಿಲ್ಲಾ ಅಂತಾ ಕೆಲವು ಯುವಕರು ಡಿಸಿಗೆ ಪತ್ರ ಬರೆದಿರೋ ಸಂಗತಿಯೂ ನಡೆದಿದೆ.
ಇಂತಹ ಪ್ರಕರಣಗಳು ಇದೇ ಮೊದಲೆನಲ್ಲಾ.. ಆದ್ರೆ ಇದೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋದ ಈ ಭೂಪ ವಯಸ್ಸಾದರೂ ಮದುವೆಗೆ ಕನ್ಯೆ ಸಿಗ್ತಿಲ್ಲಾ ಅಂತಾ ತನ್ನ ಜೀವನಕ್ಕೆ ವಿದಾಯ ಹೇಳಿದ್ದಾನೆ. ಹೌದು.. ಮದ್ವೆಗೆ ಕನ್ಯೆ ಸಿಗ್ತಿಲ್ಲಾ ಅಂತಾ ಮನನೊಂದು ಯುವಕನೋರ್ವ ಸೂಸೈಡ್ ಮಾಡಿಕೊಂಡಿದ್ದಾನೆ.
ಈ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ ನಡೆದಿದೆ. ಅವಿನಾಶ ಚಾವಡಿ ಎಂಬ 29 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಡ್ರೈವರ್ ಕೆಲಸ ಮಾಡಿಕೊಂಡಿದ್ದ ಅವಿನಾಶ, ಮದುವೆಗಾಗಿ ಕನ್ಯೆ ಹುಡುಕುತ್ತಿದ್ದರು. ಆದರೆ, ಇದುವರೆಗೆ ಎಲ್ಲಿಯೂ ಕನ್ಯೆ ಸಿಕ್ಕಿರಲಿಲ್ಲ. ಅದು ಬೇರೆ ತನ್ನ ಸ್ನೇಹಿತರಿಗೆಲ್ಲರಿಗೂ ವಿವಾಹವಾಗಿದ್ದು, ತನಗೆ ಹೆಣ್ಣು ಸಿಗುತ್ತಿಲ್ವಲ್ಲ ಅಂತಾ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚೆನ್ನಾಗಿ ದುಡಿಯುತ್ತೇನೆ. ನನಗೆ ವಯಸ್ಸಾದರೂ ಮದುವೆಯಾಗಲು ಇದುವರೆಗೂ ಯಾವುದೇ ಹೆಣ್ಣು ಸಿಗುತ್ತಿಲ್ಲ. ನಮ್ಮೂರಿನಲ್ಲಿರುವ ನನ್ನ ವಯಸ್ಸಿನ ಎಲ್ಲರಿಗೂ ಮದುವೆಯಾಗಿದೆ ಎಂದು ಮಗ ಅವಿನಾಶ ನೊಂದುಕೊಂಡಿದ್ದ. ಮಂಗಳವಾರ ಮಧ್ಯಾಹ್ನ ಮನೆಯಲ್ಲೇ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಾಯಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪೊಲೀಸರು ಯುಡಿಆರ್ (ಅಸಹಜ ಸಾವು) ದಾಖಲಿಸಿಕೊಂಡಿದ್ದಾರೆ.

