ಕಲ್ಯಾಣ ಮಂಟಪದಲ್ಲಿ (Hassan) ನೆಂಟರೆಲ್ಲಾ ಸೇರಿದ್ರು.. ಅಕ್ಷತೆ ಹಾಕಲು ಎಲ್ಲರೂ ಕಾತರದಿಂದ ಕಾಯುತ್ತಿದ್ರು.. ಇನ್ನೇನು ಹುಡುಗ ತಾಳಿ ಕಟ್ತಾನೆ.. ಊಟ ಮಾಡ್ಕೊಂಡು ಹೋಗೋಣ ಅಂತಾ ಆತುರದಲ್ಲಿದ್ದ ಸಂಬಂಧಿಕರು, ಬಂಧುಗಳಿಗೆ ಬರಸಿಡಿಲೇ ಬಡಿದಂತಾಗಿತ್ತು.. ಯಾಕಂದ್ರೆ, ಇನ್ನೇನು ತಾಳಿ ಕಟ್ಬೇಕು ಅನ್ನೋವಷ್ಟರಲ್ಲೇ ಹುಡುಗಿ ದಿಢೀರ್ ಯುಟರ್ನ್ ಹೊಡೆದಿದ್ದು, ಮದುವೆನೇ ಬೇಡ ಅಂತಾ ಕಲ್ಯಾಣ ಮಂಟಪದಿಂದ ಓಡಿ ಹೋಗಿದ್ದಾರೆ..
ಇಂಥಾದ್ದೊಂದು ವಿಚಿತ್ರ ಘಟನೆ ನಡೆದಿದ್ದು ಹಾಸನದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ.. ಹಾಸನ ತಾಲೂಕಿನ, ಬೂವನಹಳ್ಳಿ ಗ್ರಾಮದ ಯುವತಿ ಹಾಗೂ ಆಲೂರು ತಾಲೂಕಿನ ಯುವಕನ ಜೊತೆ ಮದುವೆ ನಿಶ್ಚಯವಾಗಿತ್ತು. ಕುಟುಂಬಸ್ಥರು, ಬಂಧು ಮಿತ್ರರು ಹಾಗೂ ಸಂಬಂಧಿಕರು ಖುಷಿ ಖುಷಿಯಾಗಿ ಮದುವೆಯಲ್ಲಿ ಓಡಾಡುತ್ತಿದ್ದರು.
ಆದ್ರೇ ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಯುವತಿಗೆ ಕರೆಯೊಂದು ಬಂದಿದೆ… ಅಷ್ಟೇ.. ಒಂದೇ ನಿಮಿಷದಲ್ಲಿ ಯುವತಿ, ಮದುವೆ ಬೇಡ ಅಂತಾ ಹಠ ಹಿಡಿದು ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಆದ್ರೆ ಯುವತಿ ಹೀಗೆ ಮಾಡಿದ್ದಕ್ಕೆ ಒಂದು ಕಾರಣ ಕೂಡ ಇದೆ. ಅದು ಏನೆಂದರೆ ಯುವತಿ ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದಳಂತೆ. ಹೀಗಾಗಿ ತಾಳಿ ಕಟ್ಟಲು ಬಂದ ವರನ ಹತ್ತಿರ ನನಗೆ ಈ ಮದುವೆ ಬೇಡ ಅಂತಾ ಹಠ ಹಿಡಿದಿದ್ದಾಳೆ.
Also Read: Darshan Case: ದರ್ಶನ್‌ಗೆ ಬಾತುಕೋಳಿ ಸಂಕಷ್ಟ…ಪತಿ-ಪತ್ನಿಗೆ ಸಮನ್ಸ್ ಜಾರಿ!
ಇನ್ನು, ಮದುವೆ ಬೇಡವೇ ಬೇಡ ಎಂದು ಹಠ ಹಿಡಿದ ಯುವತಿ ನೋಡಿದ ವರ ನನಗೂ ಬೇಡ ಅಂತ ಹೇಳಿದ್ದಾನೆ. ಮಗಳು ಮದುವೆ ಬೇಡ ಎಂದಿದ್ದಕ್ಕೆ ಪೋಷಕರು ಕಣ್ಣೀರಿಟ್ಟಿದ್ದಾರೆ. ಆಗ ಬಡಾವಣೆ ಹಾಗೂ ನಗರ ಠಾಣೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.. ಸದ್ಯ ಯುವತಿಯ ದಿಢೀರ್ ನಿರ್ಧಾರದಿಂದ ಮದುವೆ ನಿಂತು ಹೋಗಿದ್ದು, ಕುಟುಂಬಸ್ಥರಿಗೆ ಬೇಸರ ತರಿಸಿದೆ..

