ಆರ್ಸಿಬಿ ಮೊದಲ ಕಪ್ ಗೆದ್ದ ಸಂಭ್ರಮದಲ್ಲಿರಬೇಕಾದ ರಾಜ್ಯವೇ ಈಗ ಶೋಕಾಚರಣೆಯಲ್ಲಿ ಮುಳುಗಿದೆ.. ಕಪ್ ತಂದ ದುಃಖಕ್ಕೆ ಸದ್ಯ ರಾಜ್ಯದಲ್ಲಿ ಸೂತಕ ಮನೆಮಾಡಿದೆ.. ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣ (Chinnaswamy Stampede) ಹಂತ ಹಂತವಾಗಿ ತಿರುವು ಪಡೆದುಕೊಳ್ತಿರೋದು ಒಂದ್ಕಡೆಯಾದ್ರೆ.. ಬಾಳಿ ಬದುಕ ಬೇಕಾದ ಮಕ್ಕಳನ್ನ ಕಳೆದುಕೊಂಡ ಹೆತ್ತವರ ಆಕ್ರಂದನ ಹೇಳತೀರದಾಗಿದೆ.. 11 ಕುಟುಂಬಗಳ ಮನೆ ದೀಪ ಆರಿ ಹೋಗಿದೆ..

ಆರ್ಸಿಬಿ ಕಪ್ ಸಂಭ್ರಮದಲ್ಲಿದ್ದ ಫ್ಯಾನ್ಸ್ಗಳಲ್ಲಿ ಭೂಮಿಕ್ ಕೂಡ ಒಬ್ಬರು.. ಎಲ್ಲಾ ಆರ್ಸಿಬಿ ಫ್ಯಾನ್ಸ್ಗಳ ಹಾಗೇ ಭೂಮಿಕ್ ಕೂಡ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದರು.. ಆದ್ರೆ ವಿಧಿಯಾಟಕ್ಕೆ ಯಾರು ಹೊಣೆ.. ಸ್ಟೇಡಿಯಂ ಬಳಿ ಕಾದು ಕುಳ್ತಿದ್ದ ಜವರಾಯನ ಅಟ್ಟಹಾಸಕ್ಕೆ 11 ಮಂದಿ ಜೀವ ಬಿಟ್ಟಿದ್ದಾರೆ.. ಇವರಲ್ಲಿ 20 ವರ್ಷದ ಭೂಮಿಕ್ ಕೂಡ ಒಬ್ಬರಾಗಿದ್ದಾರೆ..

ನೆಚ್ಚಿನ ಆರ್ಸಿಬಿ ಆಟಗಾರರನ್ನು ನೋಡೋಕೆ ಅಂತ ಬಂದಿದ್ದ ಭೂಮಿಕ್ ಕಾಲ್ತುಳಿತದಲ್ಲಿ ಉಸಿರು ಚೆಲ್ಲಿದ್ದಾರೆ. ನಾಗಸಂದ್ರ ಮೂಲದ ಭೂಮಿಕ್ (20), ಫ್ರೆಂಡ್ಸ್ ಜೊತೆ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದ. ಆತನ ಎಲ್ಲಾ ಸ್ನೇಹಿತ ರು ಕ್ರೀಡಾಂಗಣದ ಒಳಗೋದ್ರೆ, ಭೂಮಿಕ್ ಮಾತ್ರ ಆಚೆಗೆ ಸಿಲುಕಿಕೊಂಡಿದ್ದ, ಆದರೆ ಇದೇ ವೇಳೆ ನಡೆದ ಕಾಲ್ತುಳಿತ ದಲ್ಲಿ ಜೀವಬಿಟ್ಟಿದ್ದಾನೆ.

ಆದ್ರೆ ಮುಂದೆ ಬಾಳಿ ಬದುಕಬೇಕಾದ ಮಗನನ್ನ ಕಳೆದ ಕೊಂಡ ತಂದೆಯ ಆಕ್ರಂದನ ಮುಗಿಲು ಮುಟ್ಟಿದೆ.. ಹಾಸನದ ಭೂಮಿಕ್ ಸಾವು ತಂದೆಯನ್ನ ಹುಚ್ಚನಂತೆ ಮಾಡಿಬಿಟ್ಟಿದೆ.. ಹಾಸನ ಜಿಲ್ಲೆ ಬೇಲೂರು ತಾ. ಕುಪ್ಪಗೋಡಿ ನಲ್ಲಿರುವ ಭೂಮಿಕ್ ಅಂತ್ಯಕ್ರಿಯೆ ಮಾಡಲಾಗಿದ್ದು, ಮಗನ ಸಮಾಧಿ ಮುಂದೆ ಭೂಮಿಕ್ ತಂದೆ ಲಕ್ಷ್ಮಣ್ ಆಕ್ರಂದನ ಮುಗಿಲು ಮುಟ್ಟಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ..

ಮಗನಿಗಾಗಿ ಖರೀದಿಸಿದ ಭೂಮಿಯಲ್ಲೇ ನನ್ನ ಮಗನ ಅಂತ್ಯ ಸಂಸ್ಕಾರ ಮಾಡುವ ಹಾಗಾಯಿತು. ಇದೇ ಜಾಗದಲ್ಲಿ ನನ್ನ ಮಗ ಓಡಾಡಿಕೊಂಡಿದ್ದ. ಇವತ್ತು ಇಲ್ಲೇ ಮಲಗಿದ್ದಾನೆ.. ಯಾವ ತಂದೆ – ತಾಯಿಗೂ ಇಂಥ ಪರಿಸ್ಥಿತಿ ಬರಬಾ ರದು ಎಂದು ಗೋಳಾಡಿದ್ದಾರೆ.. ಇಷ್ಟು ವರ್ಷ ಗೆಲ್ಲದೇ ಇರೋ ಕಪ್ನ ಯಾಕಾದ್ರೂ ಆರ್ಸಿಬಿ ಈ ವರ್ಷ ಗೆಲ್ತೋ.. ಸರ್ಕಾರದ ತಪ್ಪಿಗೆ, ಆರ್ಸಿಬಿ ಕಪ್ಗೆ ನಮ್ಮ ಮಕ್ಕಳು ಬೀದಿಯಲ್ಲಿ ಸಾಯೋ ಹಾಗಾಯ್ತು ಅಂತಾ ಮಮ್ಮಲು ಮರುಗಿದ್ದಾರೆ..


ನಮ್ಮ ಮಕ್ಕಳು ಬೀದಿಯಲ್ಲಿ ಸಾಯ್ತಿದ್ರೆ, ಸಿಎಂ, ಡಿಸಿಎಂ ಮಕ್ಕಳು ಮೊಮ್ಮಕ್ಕಳಿಗೊಸ್ಕರ ವೇದಿಕೆ ಮೇಲೆ ಸಂಭ್ರಮಿಸುತ್ತಿದ್ರು ಅಂತಾ ಸರ್ಕಾರದ ವಿರುದ್ಧ ಭೂಮಿಕ್ ತಂದೆ ಲಕ್ಷ್ಮಣ್ ಕಿಡಿಕಾರಿದ್ದಾರೆ..
ಇನ್ನು ಭೂಮಿಕ್ ತಂದೆ ಲಕ್ಷಣ್ ಒಬ್ಬ ಉದ್ಯಮಿ.. ಲಕ್ಷ್ಮಣ್ ದಂಪತಿಗೆ ಒಬ್ನೆ ಮಗ.. ತಮ್ಮ ನೂರು ಕೋಟಿ ಆಸ್ತಿಗೆ ಇದ್ದೊಬ್ಬನೇ ಒಬ್ಬ ವಾರಸುದಾರ ನನ್ನ ಕಳೆದುಕೊಂಡು ಕುಟುಂಬ ಈಗ ಬಡವಾಗಿದೆ.. ತಂದೆಯ ರೋಧನೆಗೆ ಎಂಥ ಕಟುಕನ ಕರುಳು ಕಿತ್ತುಬರುತ್ತದೆ.. ಮಗನ ಮಗನ ನೆನದು ಸಮಾಧಿಯನ್ನ ಅಪ್ಪಿಕೊಂಡು ಒಂದೇ ಸಮನೆ ಸಂಕಟ ದಿಂದ ಬಿಕ್ಕಿ ಬಿಕ್ಕಿ ಅಳುತ್ತಾ ಒದ್ದಾಡಿದ್ದಾರೆ..

ನನಗೆ ನನ್ನ ಮಗ ಬೇಕು, ಅಯ್ಯೋ, ನನ್ನ ಮಗ ಎಲ್ಲೋದ ಅಂತಾ ಮಗನಿಗಾಗಿ ಪ್ರಲಾಪಿಸುತ್ತಿದ್ದಾರೆ.. ಮಗನ ಅಗಲಿಕೆ ನೋವು ತಂದೆಗೆ ಕಗ್ಗತ್ತಲಿಗೆ ದೂಡಿದೆ.. ಅವರ ಸಂಕಟ ನೋಡಿದ್ರೆ ಹೊಟ್ಟೆಗೆ ಬೆಂಕಿ ಇಟ್ಟಂತಾಗುತ್ತದೆ. ಇಂತಹ ತಂದೆಯ ಒದ್ದಾಟದ ಪರಿಸ್ಥಿತಿ ಕಂಡು ಕರುನಾಡು ಮರುಗುತ್ತಿದೆ..
