ಹನುಮಂತು (Hanumantu) ಆಟಕ್ಕೆ ಬಿಗ್‌ಬಾಸ್‌ ಮಂದಿ ಫುಲ್‌ ಶಾಕ್‌! ಹನುಮಂತು ದಡ್ಡ ಅಲ್ಲ ಪಕ್ಕಾ ಬುದ್ಧಿವಂತ!, ದೋಸ್ತಿಗೆ ಬ್ರೇಕ್‌, ಹುನುಮಂತು ಮೈಂಡ್‌ ಗೇಮ್‌ಗೆ ಎಲ್ಲಾ ಶಾಕ್..‌ ಶಾಕ್‌!, ಟ್ರೋಫಿ ಗೆಲ್ಲೋಕೆ ದೋಸ್ತಿನೇ ಬಲಿ ಕೊಟ್ಟ ಹನುಮಂತು! ಅಷ್ಟಕ್ಕೂ ಧನರಾಜ್‌ ಔಟ್‌ ಆಗಿದ್ದು ಯಾಕೆ? ಹನುಮಂತನ್ನ ಗೇಮ್‌ ಪ್ಲ್ಯಾನ್ ಏನು ಅಂತ ಹೇಳ್ತೀವಿ?

ಬಿಗ್‌ಬಾಸ್‌ ಫಿನಾಲೆಗೆ (Bigg boss Finale)ಇನ್ನೊಂದು ವಾರ ಬಾಕಿ ಇದ್ದು, ಈಗಾಗ್ಲೇ ಡಬಲ್ ಎಲಿಮಿನೇಷನ್​ (Elimination)ನಡೆದಿದೆ. ಸೋಷಿಯಲ್ ಮೀಡಿಯಾ ಮೂಲಕ ಜನಪ್ರಿಯತೆ ಪಡೆದಿದ್ದ ಧನರಾಜ್​ಗೆ ಬಿಗ್​ ಬಾಸ್ ಬಾಗಿಲು ತೆರೆದ ಬಳಿಕ ನೇಮು-ಫೇಮು ಕೂಡ ಹೆಚ್ಚಾಗಿತ್ತು. ಯೂಟ್ಯೂಬರ್ ಆಗಿದ್ದ ಧನರಾಜ್​​ಗೆ ಅಪಾರ ಫ್ಯಾನ್​ ಫಾಲೋವರ್ಸ್ ಕೂಡ ಇದ್ದಾರೆ. ತನ್ನ ಕಾಮಿಡಿಯಿಂದಲೇ ಪ್ರೇಕ್ಷಕರನ್ನ ರಂಜಿಸಿದ್ದ ಧನರಾಜ್ ಬಿಗ್​ ಬಾಸ್ ಜರ್ನಿ ಮುಗಿದಿದೆ. ಮಿಡ್​ ಎಲಿಮಿನೇಷನ್​ ವೀಕ್​ ನಲ್ಲಿ ಸಖತ್ ಜೋಶ್​ನಿಂದಲೇ ಧನರಾಜ್​ ಆಟವಾಡಿದ್ರು. ಆದ್ರೆ ಮೋಸದಾಟ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕಿಚ್ಚನ ಮುಂದೆ ಭಾವುಕರಾದ ಧನರಾಜ್​ ಮಾಡಿದ ತಪ್ಪಿಗೆ ಕ್ಷಮೆ ಕೂಡ ಕೇಳಿದ್ರು. ತಮ್ಮ ತಮಾಷೆ ಮಾತುಗಳಿಂದ ಮನೆ ಮಂದಿಯ ಮನಗೆದ್ದಿದ್ದ ಧನರಾಜ್ ಈಗ ಎಲಿಮಿನೇಟ್​ ಆಗಿದ್ದಾರೆ. ಆದ್ರೆ ಇಲ್ಲಿ ಧನರಾಜ್‌ ಔಟ್‌ ಆಗಲೂ ಇದು ಒಂದೇ ಕಾರಣನಾ? ಖಂಡಿತ ಇಲ್ಲ. ಧನರಾಜ್ ಎಲಿಮೀಷನ್‌ ಹಿಂದೆ ಹನುಮಂತು ಗೇಮ್‌ ಪ್ಲಾನ್‌ ಕೂಡ ಇದೆ. ದೋಸ್ತ… ದೋಸ್ತ ಅಂತ ಕೊನೆಯ ಗಳಿಗೆಯಲ್ಲಿ ಧನರಾಜ್‌ಗೆ ಕೈ ಕೊಟ್ಟಿದ್ದು, ನಾನು ಪಕ್ಕಾ ಬುದ್ದಿವಂತ ಅಂತ ಹನುಮಂತು ಪ್ರೂವ್ ಮಾಡಿದ್ದಾರೆ.

bigg boss

ಅಯ್ಯೋ ಶಿವನೇ… ಇದರಲ್ಲಿ ಹನುಮಂತು ಗೇಮ್‌ ಪ್ಲಾನ್‌ ಏನಿದೆ ಅಂತಾ ನೀವು ಕೇಳಬಹುದು. ಅದಕ್ಕೆ ಪಕ್ಕಾ ಉತ್ತರವೂ ನಮ್ಮ ಬಳಿ ಇದೆ. ಅದನ್ನ ಹೇಳ್ತೀವಿ ಕೇಳಿ.. ಮಿಡ್ ವೀಕ್ ಎಲಿಮಿನೇಷನ್ ರದ್ದಾಗಿದ್ದರಿಂದ ಮತ್ತೆ ನಾಮಿನೇಷನ್ ಪ್ರಕ್ರಿಯೆಯನ್ನು ಬಿಗ್ ಬಾಸ್ ನಡೆಸಿದ್ರು. ಒಬ್ಬ ಸ್ಪರ್ಧಿ ಮೂವರನ್ನು ನಾಮಿನೇಟ್ ಮಾಡುವ ಟಾಸ್ಕ್ ನೀಡಿದ್ರು. ಈ ಪ್ರಕ್ರಿಯೆಯಲ್ಲಿ ಮೋಕ್ಷಿತಾ ಪೈ, ಧನರಾಜ್ ಆಚಾರ್, ಗೌತಮಿ ಜಾಧವ್, ಉಗ್ರಂ ಮಂಜು, ಭವ್ಯಾ ಗೌಡ ಹಾಗೂ ರಜತ್ ಈ ವಾರ ನಾಮಿನೇಟ್‌ ಆಗಿದ್ರು. ಈ ವೇಳೆ ಬಿಗ್‌ಬಾಸ್ ಹನುಮಂತನಿಗೆ ಒಬ್ಬ ಸ್ಪರ್ಧಿಯನ್ನು ನಾಮಿನೇಷನ್‌ನಿಂದ ಪಾರು ಮಾಡುವ ವಿಶೇಷ ಅಧಿಕಾರವನ್ನು ನೀಡಿದ್ರು. ಆ ವೇಳೆ ಹನುಮಂತ ತಮ್ಮ ಆತ್ಮೀಯ ಗೆಳೆಯ ಧನರಾಜ್ ಹೆಸರನ್ನು ತೆಗೆದುಕೊಳ್ಳಬಹುದು ಎಂದುಕೊಂಡಿದ್ದರು. ಆದರೆ, ಕಹಾನಿ ಮೇ ಟ್ವಿಸ್ಟ್‌ ಎಂಬಂತೆ ಮೋಕ್ಷಿತಾ ಅವರ ಹೆಸರನ್ನು ತೆಗೆದುಕೊಂಡು ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಧನರಾಜ್‌ ಬಿಗ್‌ಬಾಸ್‌ನಿಂದ ಔಟ್‌ ಆಗೋಕೆ ಕಾರಣವಾಗಿದೆ. ಈ ಮೂಲಕ ಬಿಗ್‌ಬಾಸ್‌ ಕಫ್ ಗೆಲ್ಲಲು ದೋಸ್ತಿಯನೇ ಬಲಿ ಕೊಟ್ಟಿದ್ದು, ಹನುಮಂತು ಮ್ಯಾಜಿಕ್‌ ಎಲ್ಲರಿಗೂ ಶಾಕ್‌ ಆಗುವಂತೆ ಮಾಡಿದೆ.

Share.
Leave A Reply