ಪ್ರಾರ್ಥನೆ, ಧ್ಯಾನ ಮತ್ತು ಸೇವಾ ಚಟುವಟಿಕೆಗಳೊಡನೆ ಗುರುದೇವ್ ಶ್ರೀ ಶ್ರೀ ರವಿಶಂಕರ ರವರ 69 ನೇಯ ಜನ್ಮದಿನವನ್ನು(Gurudev Sri Sri Ravi Shankar’s 69th birthday) ಆಚರಿಸಲಾಯಿತು. ನೂರಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಅನೇಕ ಮಿಲಿಯನ್ ಭಕ್ತರು ಜಾಗತಿಕ ಮಾನವತಾವಾದಿಗಳಾದ, ಆಧ್ಯಾತ್ಮಿಕ ನಾಯಕರಾದ ಗುರುದೇವ್ ಶ್ರೀ ಶ್ರೀ ರವಿಶಂಕರರೊಡನೆ , ಸವಾಲುಮಯವಾದ ಈ ಸಮಯದಲ್ಲಿ ಶಾಂತಿ ಬರಲೆಂದು, ಮತ್ತು ಭಯೋತ್ಪಾದನೆ ಹಾಗೂ ಹಿಂಸೆಯಿಂದ ಪ್ರಾಣ ಕಳೆದುಕೊಂಡವರ ಸ್ಮರಣೆಯಲ್ಲಿ ಪ್ರಾರ್ಥನೆ , ಧ್ಯಾನ ಮಾಡಿದರು.

ಗುರುದೇವರ ದೃಷ್ಟಿಕೋನವಾದ ಒತ್ತಡ-ರಹಿತ, ಹಿಂಸಾಮುಕ್ತ, ಸಂತೋಷಮಯವಾದ ಸಮಾಜದಿಂದ ಸ್ಫೂರ್ತಿ ಪಡೆದ ಭಕ್ತರು ಅನೇಕ ಗಿಡಗಳನ್ನು ನೆಟ್ಟರು, ಸ್ವಚ್ಛತಾ ಕಾರ್ಯಗಳನ್ನು ಮತ್ತು ರಕ್ತದಾನ ಶಿಬಿರಗಳನ್ನು ನಡೆಸಿದರು.




ದಕ್ಷಿಣ ಬೆಂಗಳೂರಿನ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದ ಸುತ್ತಮುತ್ತಲೂ ಅನೇಕ ಸ್ವಚ್ಛತಾ ಕಾರ್ಯಗಳನ್ನು ಆಶ್ರಮದ ನಿವಾಸಿಗಳು ಮತ್ತು ಸೇವಕರು ಕೈಗೊಂಡರು.




ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಸಾಫ್ಟ್ವೇರ್ ಇಂಜಿನಿಯರರಾದ ಅಂಕಿತ್ ರವರು, ” ರಸ್ತೆಗಳ ಬದಿಯಲ್ಲಿ ಬಿದ್ದಿರುವ ಎಷ್ಟೊಂದು ಪ್ಲಾಸ್ಟಿಕ್ ಮೈಕ್ರೋಪ್ಲಾಸ್ಟಿಕ್ ಮಣ್ಣಿನಲ್ಲಿ ಸೇರುತ್ತದೆಂದು ನನಗೆ ಅರಿವಾಗಿರಲೇ ಇಲ್ಲ. ಗುರುದೇವರು ಎಡೆಬಿಡದೆ ಮಾನವ ಮಾನವತೆಗೆ ಸಲ್ಲಿಸುತ್ತಿರುವ ಸೇವೆಯಿಂದ ನನಗೆ ಆಳವಾದ ಸ್ಫೂರ್ತಿ ದೊರಕಿದೆ. ನಾನೂ ಸಹ ನನ್ನ ಕೈಯಿಂದಾಗುವ ಸೇವೆಯನ್ನು ಮಾಡಲು ಬಂದಿರುವೆ” ಎಂದರು. ಗುರುದೇವರು ಪದೇ ಪದೇ ಪ್ರಕೃತಿಯ ಬಗ್ಗೆ, ಗಿಡಗಳ ಬಗ್ಗೆ, ನದಿಗಳ ಬಗ್ಗೆ, ಪರ್ವತಗಳ ಬಗ್ಗೆ ನಾವು ಗೌರವಾದರಗಳನನ್ನು ಹೊಂದಬೇಕೆಂದು ಹೇಳುತ್ತಲೇ ಇರುತ್ತಾರೆ.

Also Read : ಭಯೋತ್ಪಾದನೆ ವಿರುದ್ಧ ಯಾವುದೇ ರಾಜಿ ಇಲ್ಲ: ಜೈಶಂಕರ್
ಗುರುದೇವರ ಈ ದೃಷ್ಟಿಕೋನಕ್ಕೆ ಅನುಗುಣವಾಗಿ ಸ್ವಚ್ಛ ಹಾಗೂ ಶುದ್ಧ ಭೂಮಿಗಾಗಿ ಬೆಂಗಳೂರಿನ ಆಶ್ರಮದ ಸುತ್ತಮುತ್ತಲೂ 1700 ಗಿಡಗಳನ್ನು ನೆಡಲಾಯಿತು.