Site icon BosstvKannada

Greater Bangalore : ಗ್ರೇಟರ್‌ ಬೆಂಗಳೂರಿಗೆ ನಾನೇ ಅಧ್ಯಕ್ಷ ಎಂದ ಸಿಎಂ ಸಿದ್ದರಾಮಯ್ಯ!

ಗ್ರೇಟರ್‌ ಬೆಂಗಳೂರು (Greater Banaglore) ಆಡಳಿತ ಕಾಯ್ದೆಯನ್ನು ಮೇ 15ರಂದು ಜಾರಿಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಅನುಸಾರ ಇಂದಿನ ಅಧಿಕೃತವಾಗಿ ಬಿಬಿಎಂಪಿ (BBMP) ಇರುವುದಿಲ್ಲ. ಇಂದಿನಿಂದ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಯಾಗಿದೆ. ಅದಕ್ಕೆ ನಾನೇ ಅಧ್ಯಕ್ಷನಾಗಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಘೋಷಸಿದ್ದಾರೆ.

Also Read: Singer ಸೋನು ನಿಗಮ್‌ಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್

ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ (CM Siddaramaiah), ಇವತ್ತಿಂದ ಗ್ರೇಟರ್ ಬೆಂಗಳೂರು ಅಥಾರಟಿ ಜಾರಿಯಾಗುತ್ತಿದೆ. ಎರಡೂ ಸದನದಲ್ಲಿ ಬಿಲ್‌ ಪಾಸ್ ಆಗಿತ್ತು.. ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಜಿಬಿಎ ಆಗಿದೆ, ಇನ್ಮೇಲೆ‌ ಬಿಬಿಎಂಪಿ ಇರಲ್ಲ ನಾನೇ ಅದಕ್ಕೆ ಅಧ್ಯಕ್ಷನಾಗಿರುತ್ತೇನೆ ಎಂದರು.

Exit mobile version