Site icon BosstvKannada

ಗ್ರೇಟರ್ ಬೆಂಗಳೂರು ಜನರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್!

ರಾಜ್ಯ ರಾಜಧಾನಿ ಬೆಂಗಳೂರಲ್ಲಿ 1200 ಚದರ ಅಡಿಯ ಕಟ್ಟಡ ಮಾಲೀಕರಿಗೆ ಸದ್ಯ ಬಿಗ್ ರಿಲೀಫ್‌ ಸಿಕ್ಕಿದೆ. ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆಯುವವರಿಗೆ ರಾಜ್ಯ ಸರ್ಕಾರ ವಿನಾಯಿತಿ ಕೊಟ್ಟಿದೆ. 1200 ಚ.ಅಡಿ ವಿಸ್ತೀರ್ಣದವರೆಗಿನ ಕಟ್ಟಡಗಳಿಗೆ ಒ.ಸಿ ಪ್ರಮಾಣಪತ್ರ ಪಡೆಯುವುದರಿಂದ ವಿನಾಯಿತಿ ನೀಡಲಾಗ್ತಿದೆ.

ಈ ಹಿಂದೆ ಕಟ್ಟಡ ನಿರ್ಮಾಣಕ್ಕೆ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಕಡ್ಡಾಯ ಆಗಿತ್ತು. ಒಸಿ ಪ್ರಮಾಣಪತ್ರ ಪಡೆದಿಲ್ಲ ಅಂದ್ರೆ ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ‌ ಸಿಗುತ್ತಿರಲಿಲ್ಲ.. ಆದರೀಗ ಈ ಆದೇಶದಿಂದ ನಗರದ ಜನತೆಗೆ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ.

ಅದರಂತೆ, 1200 ಚದರಡಿ ವಿಸ್ತೀರ್ಣದವರೆಗಿನ ನಿವೇಶನದಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಾಣಗೊಂಡಿರುವ ಹಾಗೂ ನಿರ್ಮಿಸುವ ನೆಲಮಹಡಿ ಸಹಿತ ಎರಡು ಅಂತಸ್ತು ಅಥವಾ ತಳ ಮಹಡಿ (ಸ್ಟಿಲ್ಟ್‌) ಸಹಿತ ಮೂರು ಮಹಡಿ ವಾಸದ ಕಟ್ಟಡಕ್ಕೆ ಒಸಿ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ (ಜಿಬಿಎ, ಬೆಂನಪಾ-1) ಎನ್‌.ಕೆ. ಲಕ್ಷ್ಮೇಸಾಗರ್‌ ಈ ಆದೇಶ ಹೊರಡಿಸಿದ್ದಾರೆ.

Read Also : ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್‌ಗೆ 1.14 ಲಕ್ಷ ದಂಡ.. ಫೈನ್‌ ಕಟ್ಟಲು 25 ದಿನ ಗಡುವು..!

Exit mobile version