ಬೆಂಗಳೂರು: ಕಿಚ್ಚ ಸುದೀಪ್ (Sudeep) ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಅಭಿಮಾನಿಗಳ ಸಂತಸಕ್ಕೆ ಕಾರಣವೇ ಇಲ್ಲದಂತಾಗಿದೆ.
ಈಗಾಗಲೇ ಸುದೀಪ್ ನಟಿಸಿದ್ದ ‘ಮಾರ್ಕ್’ ಸಿನಿಮಾ ಇದೇ ತಿಂಗಳು ಬಿಡುಗಡೆಯಾಗಲು ಸಿದ್ಧವಾಗಿದ್ದು, ಇದರ ಬೆನ್ನಲ್ಲೇ ಈಗ ಜೋಗಿ ಫ್ರೇಮ್ ಜೊತೆ ಕೆಲಸ ಮಾಡುವ ಸುದ್ದಿ ಹೊರ ಬಿದ್ದಿದೆ. ಹೀಗಾಗಿ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. ಹಿಂದಿನ ವರ್ಷ ಇದೇ ತಿಂಗಳು ಅಂದರೆ 2024ರ ಡಿಸೆಂಬರ್ ತಿಂಗಳಲ್ಲಿ ಮ್ಯಾಕ್ಸ್ ಚಿತ್ರ ಬಿಡುಗಡೆಯಾಗಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಈಗ ಮತ್ತೆ ಡಿಸೆಂಬರ್ ತಿಂಗಳಲ್ಲಿ ಮತ್ತೊಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಚಿತ್ರದ ಬಗ್ಗೆ ಅಪ್ಡೇಟ್ ಅಭಿಮಾನಿಗಳಿಗೆ ಸಿಕ್ಕಿದೆ.
ಈಗಾಗಲೇ ‘ಮಾರ್ಕ್’ ಆಗಿ ಸುದೀಪ್ ಬರುತ್ತಿದ್ದು ಇದು ಕೂಡ ದೊಡ್ಡ ಸದ್ದು ಮಾಡುವ ನಿರೀಕ್ಷೆ ಇದೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್ ಗಮನ ಸೆಳೆಯುತ್ತಿದೆ. ‘ಇದರ ಬೆನ್ನಲ್ಲೇ ಈಗ ಹೊಸ ಸಿನಿಮಾದ ಹೆಸರು ಘೋಷಣೆಯಾಗಿದೆ. ಪ್ರೇಮ್ ಅವರು ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಸಾಕಷ್ಟು ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಪ್ರೇಮ್, ಈಗ ಸುದೀಪ್ ಜೊತೆ ಕೈ ಜೋಡಿಸಿದ್ದು, ಇಡೀ ಸ್ಯಾಂಡಲ್ ವುಡ್ ಗೆ ಸಂತಸ ಮೂಡಿಸಿದೆ.
ಹಿಂದೆ ‘ವಿಲನ್’ ಸಿನಿಮಾವನ್ನು ಪ್ರೇಮ್ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ಸುದೀಪ್ ಮತ್ತು ಶಿವರಾಜ್ ಕುಮಾರ್ ನಟಿಸಿದ್ದರು. ಆದರೆ, ಅದು ಹೇಳಿಕೊಳ್ಳುವಷ್ಟು ಸದ್ದು ಮಾಡಲಿಲ್ಲ. ವಿಲನ್’ ಬಳಿಕ ಶಿವಣ್ಣ ಮತ್ತು ಸುದೀಪ್ ಮತ್ತೆ ಪ್ರೇಮ್ ಅವರ ಸಿನಿಮಾ ಒಪ್ಪಿಕೊಳ್ಳುತ್ತಾರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಇತ್ತು. ಆದರೆ ಈಗ ಪ್ರೇಮ್ ಖುದ್ದಾಗಿ ತಾವು ಸುದೀಪ್ ಅವರ ಸಿನಿಮಾ ನಿರ್ದೇಶನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಸುದೀಪ್ ಕೈಯಲ್ಲಿ ಈಗಾಗಲೇ ಕೆಲವು ಪ್ರಾಜೆಕ್ಟ್ ಗಳಿವೆ. ‘ಬಿಲ್ಲ ರಂಗ ಭಾಷಾ’ ಸಿನಿಮಾದ ಚಿತ್ರೀಕರಣ ಜಾರಿಯಲ್ಲಿದೆ. ಅಲ್ಲದೇ, ತಮಿಳು ಚಿತ್ರದಲ್ಲಿ ಕೂಡ ಸುದೀಪ್ ನಟಿಸುತ್ತಿದ್ದಾರೆ. ಇವುಗಳ ಮಧ್ಯೆ ಪ್ರೇಮ್ ಚಿತ್ರದ ಚಿತ್ರೀಕರಣವನ್ನು ಯಾವಾಗ ಪ್ರಾರಂಭಿಸುತ್ತಾರೆ ಕಾಯ್ದು ನೋಡಬೇಕಿದೆ.

