ಇಸ್ರೇಲ್, ಅಮೆರಿಕ-ಇರಾನ್ ಯುದ್ಧದಿಂದಾಗಿ ಇಂಧನ ದರ ಏರಿಕೆ ಭೀತಿಯ ನಿರೀಕ್ಷೆಯಲ್ಲಿದ್ದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ತಲಾ 10 ರೂಪಾಯಿ ಇಳಿಕೆ ಮಾಡಿ ಕೇಂದ್ರ ಸರ್ಕಾರಿ ಆದೇಶಿಸಿದೆ. ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಹಾಗೂ ಹಾರ್ಮುಜ್ ಜಲಸಂಧಿ ಬಂದ್ ಆದ ನಂತರ ಜಾಗತಿಕ ಕಚ್ಚಾ ತೈಲ ಬೆಲೆ ಹೆಚ್ಚಾಗುತ್ತಿದೆ. ಕಳೆದ ತಿಂಗಳು ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆಗಳು ಪ್ರತಿ ಬ್ಯಾರೆಲ್‌ಗೆ ಸುಮಾರು 70US ಡಾಲರ್ ನಿಂದ ಸುಮಾರು 122US ಡಾಲರ್‌ವರೆಗೆ ಏರಿಕೆಯಾಗಿತ್ತು.

ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ಟೆಹ್ರಾನ್‌ನ ಹಾರ್ಮುಜ್ ಜಲ ಮಾರ್ಗವು ಬಂದ್‌ಆದ ಕಾರಣ ಪಶ್ಚಿಮ ಏಷ್ಯಾ ಪ್ರದೇಶದಿಂದ ತೈಲ ಮತ್ತು ಅನಿಲ ರಫ್ತಿಗೆ ತೀವ್ರ ಅಡ್ಡಿಪಡಿಸಿದೆ. ಈ ಜಾಗತಿಕ ಕಚ್ಚಾ ತೈಲ ಪೂರೈಕೆ ಬಿಕ್ಕಟ್ಟಿನ ನಡುವೆ, ತೈಲ ಕಂಪನಿಗಳಿಗೆ ಕೇಂದ್ರ ಸರ್ಕಾರ ಸಾಥ್ ನೀಡಿದೆ. ಹೌದು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 10ರೂಪಾಯಿಗಳಿಂದ 3ರೂ.ಗೆ ಇಳಿಸಲಾಗಿದ್ದು, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗಿದೆ.
ದೇಶದಲ್ಲಿ ಪ್ರತೀ ಲೀಟರ್ ಪೆಟ್ರೋಲ್‌ಗೆ 13ರೂಪಾಯಿ ಮತ್ತು ಡೀಸೆಲ್‌ಗೆ 10 ರೂಪಾಯಿ ಅಬಕಾರಿ ಸುಂಕ ಇತ್ತು. ಅಮೇರಿಕಾ-ಇರಾನ್ ಯುದ್ಧದ ಪರಿಣಾಮ ವಿಶ್ವದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಖಮೇನಿ ಹತ್ಯೆ ನಂತರ ಇರಾನ್ ವಿಶ್ವದ ಸುಮಾರು 20-25% ತೈಲ ಮತ್ತು ಅನಿಲ ವ್ಯಾಪಾರಕ್ಕೆ ಏಕೈಕ ಮಾರ್ಗವಾಗಿದ್ದು ಹಾರ್ಮುಜ್ ಜಲಮಾರ್ಗವನ್ನ ಬಂದ್ ಮಾಡಿತ್ತು. ಇದರಿಂದಾಗಿ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಕಚ್ಚಾತೈಲದ ಅಭಾವ ಉಂಟಾಗಿ ಬೆಲೆ ಏರಿಕೆಯ ಬಿಸಿ ತಟ್ಟಿತ್ತು. ಜೊತೆಯಲ್ಲಿ ವಿಶ್ವದ ದೊಡ್ಡ ತೈಲ ಮಾರಾಟ ಕಂಪನಿಯಾದ ನಯಾರಾ ಎನರ್ಜಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನ ಪ್ರತಿ ಲೀಟರ್‌ಗೆ 5ರೂ ಮತ್ತು 3ರೂ ಏರಿಸಿದ್ದು ಇದು ಭಾರತಕ್ಕೆ ಭಾರಿ ಹೊಡೆತ ನೀಡಿತ್ತು. ಈ ಸಂಧರ್ಭದಲ್ಲಿ ಭಾರತ ಸರ್ಕಾರವು ಮಹತ್ವದ ಕ್ರಮವನ್ನ ಕೈಗೊಂಡಿದ್ದು, ಅಬಕಾರಿ ಸುಂಕವನ್ನ 10 ರೂಪಾಯಿ ಕಡಿತಗೊಳಿಸಿ ತಕ್ಷಣವೇ ಜಾರಿಗೆ ಬರುವಂತೆ ಹಣಕಾಸು ಸಚಿವಾಲಯ ಆದೇಶ ನೀಡಿದೆ.