ಇತ್ತೀಚೆಗಷ್ಟ ನಮ್ಮ ಮೆಟ್ರೋದ ಹಳದಿ ಮಾರ್ಗ ಉದ್ಘಾಟನೆಯಾಗಿದೆ. ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಯೆಲ್ಲೋ ಲೈನ್ ಲೋಕಾರ್ಪಣೆ ಮಾಡಿದ್ದು. ಪ್ರಯಾಣಿಕರಿಗೆ ಇದು ಭಾರೀ ಅನುಕೂಲ ಆಗಿದೆ. ಇದರ ಬೆನ್ನಲ್ಲೇ ಇದೀಗ ನೀಲಿ ಮಾರ್ಗದ ಕಾಮಗಾರಿ ಚುರುಕುಗೊಂಡಿದೆ.
ಬೆಂಗಳೂರಿನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬ್ಲೂ ಲೈನ್ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಇದು ರಾಜಧಾನಿಯ ಉದ್ದದ ಮೆಟ್ರೋ ಮಾರ್ಗ ಮತ್ತು ಏರ್‌ಪೋರ್ಟ್ ಸಂಪರ್ಕಿಸುವ ಮಾರ್ಗವಾಗಿದ್ದು, ಅತಿ ಬೇಗನೇ ಕಾಮಗಾರಿ ಮುಕ್ತಾಯಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಬಿಎಂಆರ್‌ಸಿಎಲ್ ಡೆಡ್‌ಲೈನ್ ನೀಡಿದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್ 2-A ಕಾಮಗಾರಿ ಮುಗಿಸಲು 2026 ಸೆಪ್ಟೆಂಬರ್, ಕೆ.ಆರ್.ಪುರ ಟು ಕೆಂಪೇಗೌಡ ಅಂತರರಾಷ್ಟ್ರೀಯ ಏರ್ಪೋರ್ಟ್ 2-B ಕಾಮಗಾರಿ ಮುಗಿಸಿ ಮೆಟ್ರೋ ರೈಲು ಸಂಚಾರ ಮಾಡಲು 2027 ರ ಜೂನ್ ಅಥವಾ ಜುಲೈ ಗೆ ಗಡುವು ನೀಡಲಾಗಿದೆ. ಮಾರತ್ತಹಳ್ಳಿ, ಇಸ್ರೋ, ದೊಡ್ಡನೆಕ್ಕುಂದಿ, ಡಿಆರ್‌ಡಿಒ ಕ್ರೀಡಾ ಸಂಕೀರ್ಣ, ಇನ್ನೂ ಹಲವಾರು ಕಡೆ ಮೆಟ್ರೋದ ಬಹಳ ಅವಶ್ಯಕತೆ ಇದೆ.
ಬ್ಲೂ ಲೈನ್ ಮೆಟ್ರೋ ಸಂಚಾರದಿಂದ ಲಕ್ಷಾಂತರ ಜನರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಲಿದೆ. ಇದೀಗ ಕಾಮಗಾರಿ ಬೇಗ ಮುಗಿಸಲು ಡೆಡ್‌ಲೈನ್ ನೀಡಿರೋದು ಪ್ರಯಾಣಿಕರಿಗೆ ಸಂತಸ ತಂದಿದೆ.
Read Also : ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ!