Site icon BosstvKannada

ಬಹಳ ದಿನಗಳ ನಂತರ ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ!

ಬೆಂಗಳೂರು: ಇತ್ತೀಚೆಗೆ ಚಿನ್ನದ ಬೆಲೆ ಗಗನಕ್ಕೇ ಏರಿಕೆ ಕಂಡಿತ್ತು. ಹಲವು ಸಂದರ್ಭಗಳಲ್ಲಿ ಹಾವು-ಏಣಿ ಆಟಕ್ಕೆ ಸಾಕ್ಷಿಯಾಗಿತ್ತು. ಆದರೂ ಚಿನ್ನದ ಬೆಲೆ ಏರುತ್ತ ಸಾಗಿದ್ದು, ಚಿನ್ನದ ಪ್ರಿಯರಿಗೆ ನೋವು ತಂದಿತ್ತು. ಆದರೆ, ಇಂದು ಏಕಾಏಕಿ ಕುಸಿತ ಕಂಡಿದೆ.

24 ಗ್ರಾಂ ಶುದ್ದ ಚಿನ್ನದ ಬೆಲೆ 12,200 ರೂ. ನಿಂದ 12,862 ರ ವರೆಗೆ ಏರಿಳಿತ ಕಂಡು ಬರುತ್ತಿದೆ. ಒಂದೇ ದಿನ ಚಿನ್ನದ ಬೆಲೆಯಲ್ಲಿ 1,740 ರೂ ಕಡಿತ ಆಗಿದೆ.

ಮಂಗಳವಾರ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,366 ರೂಪಾಯಿ ಇದ್ದು, ಇಂದು 174 ರೂಪಾಯಿ ಇಳಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,23,660 ರೂ. ಆಗಿದೆ. ಅಂದರೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು 1,740 ರೂ. ಕಡಿತವಾಗಿದೆ.

22 ಕ್ಯಾರೆಟ್ 1 ಗ್ರಾಂ ಬೆಲೆ 11,335 ರೂ. ಆಗಿದ್ದು, 160 ರೂ.ನಷ್ಟು ಕಡಿಮೆ ಆಗಿದೆ. 10 ಗ್ರಾಂ ಬೆಲೆ 1,13,350 ರೂಪಾಯಿ ಇದೆ. ಇಂದು 10 ಗ್ರಾಂ ನಲ್ಲಿ 1600 ರೂ ಇಳಿಕೆ ಆಗಿದೆ.

ಸಿಲಿಕಾನ್ ಸಿಟಿಯಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12,366 ರೂ. ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,23,660 ರೂ. ಇದೆ. ಅಲ್ಲದೇ, ಇಂದು ಬೆಳ್ಳಿಯ ಬೆಲೆ 5 ರೂ. ಇಳಿಕೆ ಕಂಡಿದ್ದು, 1 ಗ್ರಾಂಗೆ 162 ರೂ. ಇದೆ. ಕೆಜಿಗೆ 1,62,000 ರೂ. ಆಗಿದೆ.

Exit mobile version