BosstvKannada

EPS-95 ಪಿಂಚಣಿದಾರರಿಗೆ ಗುಡ್‌ ನ್ಯೂಸ್‌ : ಕನಿಷ್ಠ ಪಿಂಚಣಿ 7 ಪಟ್ಟು ಹೆಚ್ಚಳ

ನೌಕರರ ಪಿಂಚಣಿ ಯೋಜನೆ EPS-95 ಪಿಂಚಣಿದಾರರ ಬಹುಕಾಲದ ಬೇಡಿಕೆ ಈಡೇರುವ ಕಾಲ ಬಂದಿದೆ. ಪಿಂಚಣಿದಾರರ ಕನಿಷ್ಠ ಪಿಂಚಣಿ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ ನೌಕರರ ಪಿಂಚಣಿ ಯೋಜನೆ ಅಡಿಯಲ್ಲಿ ನೌಕರರ ಕನಿಷ್ಠ ಪಿಂಚಣಿಯನ್ನು ಏಳು ಪಟ್ಟು ಹೆಚ್ಚಿಸಲು ನಿರ್ಧರಿಸಿದೆ. ನೌಕರರು ಪ್ರತಿ ತಿಂಗಳು ತಮ್ಮ ಸಂಬಳದ 12% ಅನ್ನು ತಮ್ಮ ಇಪಿಎಫ್ ಖಾತೆಗೆ ಜಮಾ ಮಾಡುತ್ತಾರೆ. ಕಂಪನಿಯು ಸಹ ಅದೇ ಮೊತ್ತವನ್ನು ಠೇವಣಿ ಮಾಡುತ್ತದೆ.

ಇದರಲ್ಲಿ ಕಂಪನಿಯ ಪಾಲನ್ನು ಇಪಿಎಸ್‌ನಲ್ಲಿ ನಿವೃತ್ತಿಗಾಗಿ ಠೇವಣಿ ಮಾಡಲಾಗುತ್ತದೆ. ಇಲ್ಲಿಯವರೆಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ, EPS-95 ಪಿಂಚಣಿದಾರರಿಗೆ ನೀಡುತ್ತಿದ್ದ ಕನಿಷ್ಠ ಮಾಸಿಕ ಪಿಂಚಣಿ 1,000 ರೂಪಾಯಿ ಆಗಿತ್ತು. ಆದರೆ ಇನ್ನು ಮುಂದೆ ಈ ಪಿಂಚಣಿಯನ್ನು 7,500 ರೂಪಾಯಿಗೆ ಹೆಚ್ಚಿಸಲಾಗುತ್ತೆ. ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳನ್ನು ಇಪಿಎಫ್‌ಒ ಈಗಾಗಲೇ ಪೂರೈಸಿದ್ದು, ಶೀಘ್ರದಲ್ಲೇ ಅದರ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗುತ್ತೆ. ಖಾಸಗಿ ವಲಯದ ಉದ್ಯೋಗಿಗಳಿಗೆ ಇದು ಹೆಚ್ಚು ಲಾಭದಾಯಕವಾಗಿದ್ದು, ನಿವೃತ್ತಿಯ ನಂತರ ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ಎಲ್ಲಾ ನೌಕರರಿಗೆ ಈ ವ್ಯವಸ್ಥೆ ನೆರವಾಗಲಿದೆ.

Exit mobile version