ಬಿಗ್‌ಬಾಸ್ (bigg boss) ಕನ್ನಡ ಸೀಸನ್ 11ರಲ್ಲಿ ಗೋಲ್ಡ್ ಸುರೇಶ್ ( gold suresh ) ಸಖತ್ ಸೌಂಡ್ ಮಾಡಿದ್ದರು. ಮೈತುಂಬಾ ಚಿನ್ನದ ಒಡವೆ ಹಾಕಿಕೊಂಡು ಅಭಿಮಾನಿಗಳ ಗಮನ ಸೆಳೆದವರು. ಆದ್ರೆ, ಬಿಗ್‌ಬಾಸ್ ಸೀಸನ್ 11 ಕಳೆದು ತಿಂಗಳುಗಳೇ ಕಳೆದರೂ ಗೋಲ್ಡ್ ಸುರೇಶ್ ಕ್ರೇಜ್ ಕಡಿಮೆಯಾಗಿಲ್ಲ. ಇದೀಗ ಗೋಲ್ಡ್ ಸುರೇಶ್ ಮತ್ತೊಂದು ವಿಚಾರಕ್ಕೆ ಸಖತ್ ಸದ್ದು ಮಾಡ್ತಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗ್ತಿದೆ.

ಹೌದು.. ಬಿಗ್‌ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ರಾಯಚೂರು (Raichur) ಜಿಲ್ಲೆಯ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಗೋಲ್ಡ್ ಸುರೇಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸುರೇಶ್ ಅವರು ಕೇಬಲ್ ಚಾನೆಲ್ನ ಸೆಟಅಪ್ ಮಾಡುವುದಾಗಿ ಹೇಳಿದ್ದರು. ಬರೋಬ್ಬರಿ 14 ಲಕ್ಷಕ್ಕೆ ಒಪ್ಪಂದ ಆಗಿತ್ತು. 2017ರಲ್ಲಿ ಇಬ್ಬರ ಮಧ್ಯೆ ಒಪ್ಪಂದ ನಡೆದಿತ್ತು. ಗೋಲ್ಡ್ ಸುರೇಶ್ 4 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದರು. ಆ ಬಳಿಕ ಹಂತ ಹಂತವಾಗಿ 7 ಲಕ್ಷ ರೂಪಾಯಿಯನ್ನು ಸುರೇಶ್ಗೆ ಮೈನುದ್ದೀನ್ ನೀಡಿದ್ದರಂತೆ. ಆದರೆ, ಆ ಬಳಿಕ ಅರೆಬರೆ ಕೆಲಸ ಮಾಡಿ ಸುರೇಶ್ ಅರ್ಧಕ್ಕೆ ಬಿಟ್ಟಿದ್ದಾರೆ. ಈಗ ಅವರು ಹಣವನ್ನು ಮರಳಿ ನೀಡುತ್ತಿಲ್ಲ ಅಂತಾ ಮೈನುದ್ದೀನ್ ಆರೋಪ ಮಾಡಿದ್ದು, ಸಂಚಲನ ಸೃಷ್ಟಿಸಿದೆ..
ಈ ವಿಷಯದ ಕುರಿತಾಗಿ ಮಾತನಾಡಿರುವ ಸುರೇಶ್ ನಾನು ಯಾವುದೆ ತಪ್ಪು ಮಾಡಿಲ್ಲ, ಮೈನುದ್ದಿನ್ ನಂಬಿಕೆಗೆ ಅರ್ಹ ವ್ಯಕ್ತಿಯಲ್ಲ, ಆತ ಕೊಟ್ಟಿದ್ದ ಹಣವನ್ನ ತಾನು ಮರಳಿ ಕೊಟ್ಟಿದ್ದೇನೆ ಎಂದು ಸುರೇಶ್ ಹೇಳಿದ್ದು. ಕೋರ್ಟನಲ್ಲಿ ಕೇಸ್ ಮಾಡುದಾಗಿ ಹೇಳಿದ್ದಾರೆ. ಮೈನುದ್ದಿನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಸಹ ಹೇಳಿದ್ದಾರೆ.