ಬೆಳ್ಳಿ, ಬಂಗಾರದ ಬೆಲೆ ಭಾರತದಲ್ಲಿ ಎಷ್ಟೇ ಏರಿಕೆಯಾದ್ರೂ, ಅದ್ರ ಡಿಮ್ಯಾಂಡ್ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ದಿಢೀರ್ ಏರಿಕೆಯಾಗಿದೆ. 22 ಕ್ಯಾರಟ್ ಚಿನ್ನದ ಬೆಲೆ 9,295 ರೂಗೆ ಏರಿಕೆಯಾದ್ರೆ 24 ಕ್ಯಾರಟ್ ಚಿನ್ನದ ಬೆಲೆ 10,140 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ 109 ರೂಪಾಯಿ ಇದ್ದ ಬೆಳ್ಳಿ ಬೆಲೆ ಇದೀಗ 110 ರೂಪಾಯಿಗೆ ಏರಿಕೆಯಾಗಿದೆ.
ಕಳೆದ ಎರಡು ದಿನದಲ್ಲಿ 155 ರೂಪಾಯಿಗೆ ಏರಿದ್ದ ಒಂದು ಗ್ರಾಂ ಚಿನ್ನದ ಬೆಲೆ ಇವತ್ತು ಒಂದೇ ದಿನದಲ್ಲಿ 195 ರೂನಷ್ಟು ಏರಿಕೆಯಾಗಿದೆ. ಈ ಮೂಲಕ ಮೂರು ದಿನದಲ್ಲಿ 350 ರೂಪಾಯಿ ಏರಿಕೆ ಆದಂತಾಗಿದೆ. ಇನ್ನು, 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 92,950 ರೂಪಾಯಿ ಆಗಿದ್ರೆ, 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 1,01,400 ರೂಪಾಯಿಗೆ ಏರಿಕೆಯಾಗಿದೆ. ಲಕ್ಷದ ಗಡಿ ದಾಟುವ ಮೂಲಕ ಚಿನ್ನದ ಬೆಲೆ ದಾಖಲೆ ಬರೆದಿದೆ.
ಮಧ್ಯಮ ವರ್ಗದವರು ಚಿನ್ನ ಖರೀದಿಯ ಬಗ್ಗೆ ಯೋಚಿಸುವುದೂ ಕಷ್ಟವಾದಂತಿದೆ. ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣ ಅಮೆರಿಕಾ-ಚೀನಾ ನಡುವಿನ ವ್ಯಾಪಾರ ಯುದ್ಧ. ಅಂತಾರಾಷ್ಟ್ರೀಯ ಉದ್ವಿಘ್ನತೆ ಹಿನ್ನೆಲೆ ಹೂಡಿಕೆದಾರರು ಸುರಕ್ಷಿತ ಚಿನ್ನದಲ್ಲಿ ಹೂಡಿಕೆ ಮಾಡಲು ಹೆಚ್ಚು ಒಲವು ತೋರ್ತಿದ್ದಾರೆ. ಇದರ ಪರಿಣಾಮವಾಗಿ ಚಿನ್ನದ ದರದಲ್ಲಿ ತೀವ್ರವಾಗಿ ಏರಿಕೆ ಕಂಡುಬರ್ತಿದೆ ಅಂತಾ ತಜ್ನರು ಅಭಿಪ್ರಾಯಪಟ್ಟಿದ್ದಾರೆ

