Site icon BosstvKannada

Gold Price: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

Gold price: ಚಿನ್ನದ ಬೆಲೆಯಲ್ಲಿ ಇವತ್ತು ಕೊಂಚ ಇಳಿಕೆ ಕಂಡುಬಂದಿದೆ. 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 8,710 ರೂಪಾಯಿಗೆ ಇಳಿಕೆಾಗಿದ್ರೆ, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 9,502 ರೂಪಾಯಿಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 95,000 ರೂಪಾಯಿ ಸಮೀಪಕ್ಕೆ ಇಳಿದಿದೆ.

Gold Price: ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 87,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 95,020 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 87,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,700 ರುಪಾಯಿಯಲ್ಲಿ ಇದೆ.

Also Read: IMD Alert: ಎಚ್ಚರ.. ಈ ವೀಕೆಂಡ್‌ನಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ!

ಚಿನ್ನದ ಬೆಲೆಯಲ್ಲಿ ತಾತ್ಕಾಲಿಕ ಇಳಿಕೆಯಾಗಿದ್ದು, ಚಿನ್ನ ಖರೀದಿಗೆ ಇದು ಉತ್ತಮ ಸಮಯ ಅಂತಾ ಮಾರುಕಟ್ಟೆ ತಜ್ನರು ಅಭಿಪ್ರಾಯಪಟ್ಟಿದ್ದಾರೆ. ಚಿನ್ನದ ಬೆಲೆ ಇತ್ತೀಚೆಗೆ ದಾಖಲೆಯ ಮಟ್ಟ ತಲುಪಿದ್ದರಿಂದ, ಹಲವರು ಲಾಭ ಪಡೆಯಲು ತಮ್ಮ ಹೂಡಿಕೆಯನ್ನು ಮಾರಾಟ ಮಾಡಿದ್ದಾರೆ.

ಇದರಿಂದ ಚಿನ್ನದ ಪೂರೈಕೆ ಹೆಚ್ಚಾಗಿ, ಬೆಲೆ ಇಳಿಕೆಯಾಗಿದೆ. ಇದಲ್ಲದೇ, ಚೀನಾದಲ್ಲಿ ಹಬ್ಬ ನಡೀತಿದೆ. ಇದ್ರಿಂದಾಗಿ ಚಿನ್ನದ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗಿದೆ, ಇದು ಜಾಗತಿಕ ಚಿನ್ನದ ಬೆಲೆಯಲ್ಲಿ ಪರಿಣಾಮ ಬೀರಿದೆ. ಆದ್ರೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ.

Exit mobile version